ಎಲ್ಲೆಂದರಲ್ಲಿ ಯಾವುದೇ ಸಮಯದಲ್ಲಿ ಪ್ರತಿಭಟನೆ ಮಾಡಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್
ಶಾಹಿನ್ ಭಾಗ್ ನಲ್ಲಿ ನಡೆದ ಪೌರತ್ವ ವಿರೋಧಿ ಕಾನೂನು ಪ್ರತಿಭಟನೆಗಳು ಕಾನೂನು ಬಾಹಿರ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪನ್ನು ಮರುಪರಿಶೀಲನೆ ಮಾಡಬೇಕೆಂದು 12 ಮಂದಿ ಕಾರ್ಯಕರ್ತರು ಸುಪ್ರೀಂ ಕೋರ್ಟ್ ಗೆ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆಯನ್ನ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಪ್ರತಿಭಟಿಸುವ ಹಕ್ಕು ಇದೆ ಎಂದ ಮಾತ್ರಕ್ಕೆ ಎಲ್ಲೆಂದರಲ್ಲಿ ಎಲ್ಲಾ ಸಂದರ್ಭದಲ್ಲಿ ಪ್ರತಿಭಟನೆ ಮಾಡಲು ಸಾಧ್ಯವಿಲ್ಲ. ಪ್ರತಿಭಟಿಸುವ ಮತ್ತು ಬಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕುಗಳ ಜೊತೆಗೆ ಕೆಲವು ಕರ್ತವ್ಯಗಳು ಬರುತ್ತದೆ ಅದನ್ನು ಪಾಲಿಸಬೇಕಾಗುತ್ತದೆ ಎಂದು ತನ್ನ ಆದೇಶದಲ್ಲಿ ತಿಳಿಸಿದೆ. ಸಿಟಿಜನ್ಶಿಪ್ ಕಾನೂನಿನ ವಿರುದ್ಧ ನಡೆದ ಪ್ರತಿಭಟನೆಗಳನ್ನು ಕಾನೂನುಬಾಹಿರ ಎಂದು ಹೇಳಿದ್ದ ತನ್ನ ತೀರ್ಪನ್ನು ಬದಲಿಸಲು ನಿರಾಕರಿಸಿರುವ ಕೋರ್ಟ್, ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಕುರಿತಾದ ಮರು ಪರಿಶೀಲನಾ ಅರ್ಜಿಯನ್ನ ವಜಾಗೊಳಿಸಿದೆ.
ಪ್ರತಿಭಟನೆಗಳು ಸ್ವಯಂ ಪ್ರೇರಿತವಾಗಿದ್ದಿರ ಬಹುದು ಮತ್ತು ದಿಡೀರನೆ ಆಗಿರಬಹುದು ಆದರೆ ದೀರ್ಘ ಕಾಲದ ಪ್ರತಿಭಟನೆಯ ಸಂದರ್ಭದಲ್ಲಿ ಇತರರ ಹಕ್ಕುಗಳ ಮೇಲೆ ಪರಿಣಾಮ ಬೀರುವ ಸಾರ್ವಜನಿಕ ಸ್ಥಳವನ್ನ ನಿರಂತರವಾಗಿ ಆಕ್ರಮಿಸಿಕೊಳ್ಳಲಾಗುವುದು ತರವಲ್ಲ, ಎಂದು ನ್ಯಾಯಮೂರ್ತಿಗಳಾದ ಏಸ್. ಕೆ . ಕೌಲ್, ಅನಿರುದ್ಧ ಬೋಸ್ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ನ ತ್ರೀ ಸದಸ್ಯ ಪೀಠ ಆದೇಶಿಸಿತು. ಮರು ಪರಿಶೀಲನಾ ಅರ್ಜಿಯನ್ನ ಫೆಬ್ರವರಿ 9 ರಂದು ಕೈಗೆತ್ತಿ ಕೊಂಡಿತ್ತಾದರೂ ಕಳೆದ ರಾತ್ರಿ ತಡವಾಗಿ ಆದೇಶ ಹೊರ ಬಂದಿದೆ.
ಪ್ರತಿಭಟನೆಗಾಗಿ ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಲು ಸಾಧ್ಯವಿಲ್ಲ ಮತ್ತು ಸಾರ್ವಜನಿಕ ಪ್ರತಿಭಟನೆಗಳು ಗೊತ್ತುಪಡಿಸಿದ ಪ್ರದೇಶಗಳಲ್ಲಿ ಮಾತ್ರ ಇರಬೇಕು ಎಂದು ಮೂರು ನ್ಯಾಯಾಧೀಶರ ನ್ಯಾಯಪೀಠ ಪುನರುಚ್ಚರಿಸಿತು. ಈ ರೀತಿಯ ಪ್ರತಿಭಟನೆಗಳು ಸ್ವೀಕಾರಾರ್ಹವಲ್ಲ ಎಂದು ಒತ್ತಿ ಹೇಳಿದರು.ದೆಹಲಿಯ ಶಾಹೀನ್ ಬಾಗ್ 2019 ರಲ್ಲಿ ಸಿಎಎ ವಿರೋಧಿ ಪ್ರತಿಭಟನೆಯ ಕೇಂದ್ರಬಿಂದುವಾಗಿ ಹೊರಹೊಮ್ಮಿತ್ತು , ಅಲ್ಲಿ ಪ್ರತಿಭಟನಾಕಾರರು- ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು - ಮೂರು ತಿಂಗಳಿಗಿಂತ ಹೆಚ್ಚು ಕಾಲ ಕುಳಿತುಕೊಂಡರು.ಶಾಹೀನ್ ಬಾಗ್ ಪ್ರತಿಭಟನೆಗಳು ವಿಶ್ವಾದ್ಯಂತ ಗಮನ ಸೆಳೆದವು ಮತ್ತು ಟೈಮ್ ನಿಯತಕಾಲಿಕೆಯು ಚಳವಳಿಯ ಪ್ರತಿಭಟನೆಯ ಪ್ರಮುಖರಾದ 82 ವರ್ಷದ ಬಿಲ್ಕಿಸ್ ದಾದಿಯನ್ನು "2020 ರ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು " ಎಂದು ಗೌರವಿಸಿತು .
ಧಾರ್ಮಿಕ ಕಿರುಕುಳದಿಂದಾಗಿ ಮತ್ತು 2015 ಕ್ಕಿಂತ ಮೊದಲು ಭಾರತಕ್ಕೆ ಪ್ರವೇಶಿಸಿದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರರಿಗೆ ಪೌರತ್ವವನ್ನು ಶಕ್ತಗೊಳಿಸುತ್ತದೆ ಎಂದು ಸರ್ಕಾರವು ಹೇಳುವ ವಿವಾದಾತ್ಮಕ ಪೌರತ್ವ ಕಾನೂನು "ಮುಸ್ಲಿಂ ವಿರೋಧಿ" ಎಂದು ವಿಮರ್ಶಕರು ಹೇಳಿದ್ದಾರೆ.
ವರದಿ : ಪ್ರೀತಿಕಾ ಹೆಗ್ಡೆ