ಗ್ರಾಮದ ಹಿತಕ್ಕಾಗಿ, ಸಾಫ್ಟ್ವೇರ್ ಕಂಪನಿ ಬಿಟ್ಟ ಮಹಿಳೆ ಏನಿದು? ಸ್ಟೋರಿ
ಇಂಜಿನೀರಿಂಗ್ ಪದವಿ ಮುಗಿಸಿ, ಸಾಫ್ಟ್ವೇರ್ ಸಂಸ್ಥೆಯಲ್ಲಿ ಕೆಲಸ ಮಾಡುವ ಮೂಲಕ ಕೈ ತುಂಬಾ ಸಂಬಳವನ್ನು ಪಡೆಯುತ್ತಿದ್ದ ಮಹಿಳೆ, ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ದಿಸಿ, ಗೆಲುವಿನೊಂದಿಗೆ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವುದು ಅಚ್ಚರಿ ಹುಟ್ಟಿಸುವಂತಹ ಸಂಗತಿಯಾಗಿದೆ.
ಬೇರೆ ಬೇರೆ ಪ್ರತಿಷ್ಠಿತ ಕಂಪೆನಿಗಳಲ್ಲಿ ಕೆಲಸ ಮಾಡಿದ್ದಾರೆ
ಇಂಜೀನೀರಿಂಗ್ ಮುಗಿಸಿದ ಸ್ವಾತಿ ತಿಪ್ಪೆ ಸ್ವಾಮೀ ಸಾಫ್ಟ್ವೇರ್ ಕಂಪನಿಯಲ್ಲಿ ಲಕ್ಷ ಗಟ್ಟಲೆ ಸಂಬಳವನ್ನು ಪಡೆಯುತ್ತಿದ್ದರು. ಆದರೆ ಈ ಕೆಲಸವನ್ನು ಬಿಟ್ಟು, ದಾವಣಗೆರೆಯ ಜಗಳೂರು ತಾಲೂಕಿನ ಸೊಕ್ಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯ ಸ್ಥಾನವನ್ನ ಪಡೆದುಕೊಂಡಿದ್ದಾರೆ. ಮಾಹಿತಿ ಹಾಗು ತಂತ್ರಜ್ಞಾನದ ವಿಷಯದಲ್ಲಿ ಇವರು ಬಿಇಎ ಪದವಿ ಪಡೆದಿದ್ದು, ದೇಶ-ವಿದೇಶಗಳಲ್ಲಿ ಐದು ವರ್ಷಗಳ ಕಾಲ ಬೇರೆ ಬೇರೆ ಪ್ರತಿಷ್ಠಿತ ಕಂಪೆನಿಗಳಲ್ಲಿ ಕೆಲಸ ಮಾಡಿದ್ದಾರೆ. ಇವರು ಬೆಂಗಳೂರಿನ ನಿವಾಸಿಯಾಗಿದ್ದು, ಗ್ರಾಮಕ್ಕೆ ಸಮಾಜ ಸೇವೆ ಮಾಡಬೇಕೆನ್ನುವ ಉದ್ದೇಶದೊಂದಿಗೆ ಚುನಾವಣೆಯಲ್ಲಿ ಸ್ಪರ್ದಿಸಿ ಗೆಲುವನ್ನ ಸಾಧಿಸಿದ್ದಾರೆ.
ಗ್ರಾಮಗಳು ಅಭಿವೃದ್ಧಿ ಕಂಡಿಲ್ಲ
ವಿದೇಶದಿಂದ ಆಗಾಗ ಸ್ವಾತಿ ಗ್ರಾಮಕ್ಕೆ ಬರುತ್ತಿದ್ದರು. ಜಗಳೂರು ತಾಲೂಕಿನ ಅಡಿಯಲ್ಲಿ ಬರುವ ಗ್ರಾಮಗಳು ಅಭಿವೃದ್ಧಿ ಕಂಡಿಲ್ಲ, ಮೂಲ ಭೂತ ಸೌಖರ್ಯಗಳ ಕೊರೆತೆಯಿಂದಾಗಿ ಜನರು ಪರಾಡುತ್ತಿದ್ದರು. ಇವೆಲ್ಲವನ್ನೂ ಹತ್ತಿರದಿಂದಲೇ ಗಮನಿಸಿದ ಸ್ವಾತಿ, ಉನ್ನತ ಗುಣ ಮಟ್ಟದ ಸೌಲಭ್ಯಗಳನ್ನು ಗ್ರಾಮದ ಜನತೆಗೆ ಕಲ್ಪಿಸಿ ಕೊಡಬೇಕೆಂದು ತೀರ್ಮಾನಿಸಿದ್ದರು.
ಗೆಲುವಿನ ನಗೆಯನ್ನು ಬೀರಿದ್ದಾರೆ
ಪಂಚಾಯ್ತಿ ಚುನಾವಣೆ ಘೋಷಣೆಯಾದ ಬೆನ್ನಲೇ, ಚುನಾವಣೆಯಲ್ಲಿ ಸ್ಪರ್ದಿಸಿ, ತಮ್ಮ ತಾಲೂಕಿನ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದು ಗೆಲುವಿನ ನಗೆಯನ್ನು ಬೀರಿದ್ದಾರೆ. ಈ ಮೂಲಕ ಗ್ರಾಮ ಪಂಚಾಯ್ತಿಯ ಅಧ್ಯಕ್ಷೆಯ ಸ್ಥಾನ ಗಟ್ಟಿ ಮಾಡಿಕೊಂಡಿದ್ದಾರೆ.
ಬರಹ: ಶ್ರೀ ಹರ್ಷ