ಕರ್ನಾಟಕದ ಮಾಜಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ವಿಧಿವಶ....
ನವದೆಹಲಿ : ಕರ್ನಾಟಕದ ಮಾಜಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ (82) ಭಾನುವಾರ ಕೊನೆಯುಸಿರೆಳೆದಿದ್ದಾರೆ.ಕಾಂಗ್ರೆಸ್ ನ ಹಿರಿಯ ನಾಯಕರಾಗಿದ್ದ ಹಂಸರಾಜ್ ಭಾರಧ್ವಜ್ ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
ಹಂಸರಾಜ್ ಭಾರದ್ವಾಜ್ ಅವರು, 2009 ರಿಂದ 2014 ರ ವರೆಗೆ ಕರ್ನಾಟಕದ ರಾಜ್ಯಪಾಲರಾಗಿದ್ದರು.
2013 ರಿಂದ 2014 ರ ವರೆಗೆ ಕೇರಳ ರಾಜ್ಯಪಾಲರಾಗಿಯು ಕಾರ್ಯನಿರ್ವಹಿಸಿದ್ದರು. ಜೊತೆಗೆ ಕಾನೂನು ಖಾತೆ ಸೇರಿದಂತೆ ಕೇಂದ್ರದಲ್ಲಿ ಹಲವು ಖಾತೆಗಳನ್ನು ನಿರ್ವಹಿಸಿದ್ದರು.
ಗಾಂಧಿ ಪರಿವಾರಕ್ಕೆ ನಿಷ್ಠರಾಗಿದ್ದ ಹಂಸರಾಜ್ ಭಾರದ್ವಾಜ್, 1982 ರಲ್ಲಿ ಮೊದಲ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಹಂಸರಾಜ್ ಅವರಿಗೆ ಕಾನೂನು ಜ್ಞಾನ ಅಪಾರವಾಗಿತ್ತು.
ಇನ್ನು ಹಂಸರಾಜ್ ಭಾರದ್ವಾಜ್ ನಿಧಾನಕ್ಕೆ ಕೇಂದ್ರ ಸಚಿವ ರವೀಶಂಕರ್ ಸೇರಿದಂತೆ ಹಲವು ಗಣ್ಯರು ಟ್ವಿಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಇಂದು ದೆಹಲಿಯಲ್ಲಿ ಹಂಸರಾಜ್ ಅವರ ಅಂತ್ಯಕ್ರಿಯೆ ನಡೆಯಲಿದೆ.