ಇನ್ನು ಮುಂದೆ ಮತದಾರರಿಗೆ 'ಇ ಆಧಾರ್' ಮಾದರಿ ಗುರುತಿನ ಚೀಟಿ
ಇ-ಆಧಾರ್ ಮಾದರಿಯಲ್ಲಿ ಡಿಜಿಟಲ್ ಮತದಾರರ ಗುರುತಿನ ಚೀಟಿ ವಿತರಿಸಲು ಚುನಾವಣಾ ಆಯೋಗಕ್ಕೆ ವಿವಿಧ ಸಮಿತಿಗಳು ಶಿಫಾರಸು ಮಾಡಿದೆ.
ಚುನಾವಣಾ ಸುಧಾರಣೆ ಕುರಿತಂತೆ ಚುನಾವಣಾ ಆಯೋಗ ನೇಮಿಸಿದ ಸಮಿತಿಗಳು ಈ ನಿಟ್ಟಿನಲ್ಲಿ ಶಿಫಾರಸು ಮಾಡಿದ್ದು ಇ - ಆಧಾರ್ ಮಾದರಿಯಲ್ಲಿ ಮತದಾರರ ಗುರುತಿನ ಚೀಟಿ ವಿತರಣೆ, ಅಭ್ಯರ್ಥಿಗಳು ಆನ್ಲೈನ್ ಮೂಲಕ ನಾಮಪತ್ರ ಸಲ್ಲಿಸಲು ಅವಕಾಶ ಸೇರಿದಂತೆ ಹಲವು ಮಹತ್ವದ ಚುನಾವಣಾ ಸುಧಾರಣೆ ಕ್ರಮಗಳ ಬಗ್ಗೆ ಪ್ರಸ್ತಾಪಿಸಲಾಗಿದೆ.
ಚುನಾವಣೆ ಪ್ರಕ್ರಿಯೆಯಲ್ಲಿ ಬದಲಾವಣೆ ತರುವ ಉದ್ದೇಶದಿಂದ ಹಿರಿಯ ಚುನಾವಣಾ ಅಧಿಕಾರಿಗಳು ಮತ್ತು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳನ್ನು ಒಳಗೊಂಡ 9 ಗುಂಪುಗಳನ್ನು ಚುನಾವಣಾ ಆಯೋಗ ರಚಿಸಿದ್ದು ಈ ಸಮಿತಿಗಳು 25ಕ್ಕೂ ಹೆಚ್ಚು ಶಿಫಾರಸ್ಸನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿವೆ.
ಇ -ಆಧಾರ್ ಮಾದರಿಯಲ್ಲಿ ಮತದಾರರ ಗುರುತಿನ ಫೋಟೋ ಸಹಿತ ಗುರುತಿನ ಚೀಟಿ ವಿತರಣೆಗೆ ಸೇರಿದಂತೆ ಹಲವು ಶಿಫಾರಸು ಮಾಡಲಾಗಿದೆ.