ಕರ್ನಾಟಕ ರಾಜ್ಯ ಬಜೆಟ್ : ಬೆಂಗಳೂರು ನಗರಕ್ಕೆ ಭರ್ಜರಿ ಗಿಫ್ಟ್ : ಮೆಟ್ರೋ ಮಾರ್ಗಗಳ ವಿಸ್ತರಣೆ.
ಬೆಂಗಳೂರು : ಬಹು ನಿರೀಕ್ಷಿತ ಕರ್ನಾಟಕ ರಾಜ್ಯ ಬಜೆಟ್ ಇಂದು ಮಂಡನೆಯಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 2,37,893 ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದಾರೆ. ಮುಂದಿನ ಹಣಕಾಸು ವರ್ಷದಲ್ಲಿ 2,33,134 ಕೋಟಿ ಆದಾಯ ನಿರೀಕ್ಷಿಸಿದ್ದು, 4759 ಕೋಟಿ ವಿತ್ತೀಯ ಕೊರತೆ ಉಂಟಾಗಲಿದೆ.
ಬೆಂಗಳೂರು ನಗರಕ್ಕೆ ಬಂಪರ್ ಕೊಡುಗೆ....
- ಸಿಲ್ಕ್ ಬೋರ್ಡ್ ನಿಂದ ಏರ್ಪೋರ್ಟ್ ವರೆಗೆ ಔಟರ್ ರಿಂಗ್ ರೋಡ್ ನಿರ್ಮಾಣಕ್ಕೆ 14,500 ಕೋಟಿ ಮೀಸಲು.
- ಬೆಂಗಳೂರು ನಗರೊತ್ಥಾನ ಯೋಜನೆಗೆ 8344 ಕೋಟಿ ಅನುದಾನ.
- ಮೈಸೂರು ರಸ್ತೆಯಲ್ಲಿ ಕೆಂಗೇರಿವರೆಗೂ ಹಾಗೂ ಕನಕಪುರ ರಸ್ತೆಯಲ್ಲಿ ಅಂಜನಾಪುರ ಟೌನ್ ಶಿಪ್ ವರೆಗೂ ಮೆಟ್ರೋ ಮಾರ್ಗದ ವಿಸ್ತರಣೆ...
-ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ 60 ಕೋಟಿ ಮೀಸಲು.
- ನವೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಇನ್ವೆಸ್ಟ್ ಕರ್ನಾಟಕ 2020 ಆಯೋಜನೆ..