ನನ್ನ ಹೆಂಡತಿಗೋಸ್ಕರ ಬದುಕಬೇಕೆಂದುಕೊಂಡಿದ್ದೇನೆ : ನಟ ಇರ್ಫಾನ್ ಖಾನ್.!!

ಬಾಲಿವುಡ್ ನಟ "ಇರ್ಫಾನ್ ಖಾನ್" ಕಳೆದ ಎರಡು ವರ್ಷಗಳಿಂದ ಮಹಾಮಾರಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಈ ಒಂದು ಕಾಯಿಲೆಯಿಂದ ಪಾರಾಗಲು ಕೆಲವರ್ಷಗಳ ಕಾಲ ಲಂಡನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಈಗಷ್ಟೇ ಕ್ಯಾನ್ಸರನಿಂದ ಇರ್ಫಾನ್ ಖಾನ್ ಚೇತರಿಸಿಕೊಂಡಿದ್ದಾರೆ.

ಇತ್ತೀಚೆಗೆ ಮಾಧ್ಯಮಗಳ ಜೊತೆ ಮಾತನಾಡುತ್ತ "ಕ್ಯಾನ್ಸರ್ ಕುರಿತಾಗಿ ಹಾಗೂ ತನ್ನ ಕುಟುಂಬದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ನಾನು ಕಷ್ಟದಲ್ಲಿದ್ದಾಗ ಪತ್ನಿ ಸುತಪಾ ಸಿಕ್ದರ ಹಾಗೂ ಇಬ್ಬರು ಮಕ್ಕಳು ನನ್ನ ಬೆನ್ನಿಗೆ ನಿಂತರು. ಮತ್ತೇ ನಾನು ಮಾಮೂಲಿ ಮನುಷ್ಯನಾಗಲು ಕುಟುಂಬದ ಪಾತ್ರ ತುಂಬಾ ದೊಡ್ಡದಿದೆ" ಎಂದಿದ್ದಾರೆ.

"ಜೀವನ ಎಂಬುದು ರೋಲ್ ಕೋಸ್ಟರ್ ಸವಾರಿಯಂತಹದ್ದು  ಮಧುರವಾದ ನೆನಪುಗಳ ಜೊತೆಗೆ ಕಹಿ ನೆನಪುಗಳು ಸಹ ಇರುತ್ತವೆ ನಾವು ಸಂತೊಷಕರ ವಾದ ಕ್ಷಣಗಳನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳಬೇಕು. ನಾನು ಕೆಲ ನೋವುಗಳನ್ನು ಅನುಭವುಸಿದ್ದೇನೆ ಹಾಗು ಅದಕ್ಕಿಂತ ಹೆಚ್ಚಾಗಿ ಖುಷಿಯನ್ನು ಕಳೆದಿದ್ದೇನೆ. ನಾನು ಈ ಹಿಂದೆ ತುಂಬಾ ಆತಂಕಕ್ಕೆ ಒಳಗಾಗಿದ್ದೆ ಆದರೆ ಈಗ ಅದನ್ನು ನಿಯಂತ್ರಿಸಿಕೊಂಡಿದ್ದರಿಂದ ನನ್ನ ಮಕ್ಕಳ ಜೊತೆಗೆ ಅತ್ಯಂತ ಅಮೂಲ್ಯವಾದ ಸಮಯವನ್ನು ಕಳೆಯುತ್ತೀದ್ದೇನೆ" ಎಂದರು.

ಅದೇ ರೀತಿಯಾಗಿ ಪತ್ನಿಯ ಬಗ್ಗೆ ಕೇಳಿದ್ದಕ್ಕೆ ನಾನು ಬದುಕಬೇಕೆಂದುಕೊಂಡಿದ್ದರೆ ಅದು ಕೇವಲ ನನ್ನ ಹೆಂಡತಿಗಾಗಿ ಬದುಕಬೇಕೆಂದುಕೊಂಡಿದ್ದೇನೆ. ನಾನು ಇನ್ನು ಜೀವಂತವಾಗಿದ್ದೇನೆಂದರೆ ಅದಕ್ಕೆ ಅವಳೆ ಕಾರಣ ಎಂದಿದ್ದಾರೆ.