ಕೊರೊನಾ ವೈರಸ್‌ಗೆ ಚಿಕಿತ್ಸೆ ಕೊಡಲು, 10 ದಿನದಲ್ಲೇ ಆಸ್ಪತ್ರೆ ಕಟ್ಟುತ್ತಿದೆ ಚೀನಾ!

ಚೀನಿಗರನ್ನು ಕೊರೊನಾ ವೈರಸ್​ ಜೀವ ಹಿಂಡುತ್ತಿದೆ. ಅದರಿಂದ ಮುಕ್ತರಾಗೋದಕ್ಕೆ ಅಲ್ಲಿನ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ನಡುವೆ, ವೈರಸ್​ನಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡುವ ಸಲುವಾಗಿ ಜಸ್ಟ್ ಹತ್ತು ದಿನಗಳ ಒಳಗಾಗಿ ಆಸ್ಪತ್ರೆಯೊಂದನ್ನು ಕಟ್ಟಲು ಚೀನಾ ಮುಂದಾಗಿದೆ. ಇದಕ್ಕಾಗಿ ಬೀಜಿಂಗ್‌ನ ಹೊರವಲಯದಲ್ಲಿ ಹೊಸದಾಗಿ ಆಸ್ಪತ್ರೆಯೊಂದು ನಿರ್ಮಾಣ ಮಾಡುತ್ತಿದೆ.
25 ಸಾವಿರ ಚದರ ಮೀಟರ್‌ ವಿಸ್ತೀರ್ಣದಲ್ಲಿ ಒಟ್ಟು ಒಂದು ಸಾವಿರ ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣವಾಗ್ತಿದೆ. ರೋಗಿಗಳಿಗೆ ತುರ್ತು ಚಿಕಿತ್ಸೆ ಅಗತ್ಯವಿರೋದ್ರಿಂದ ಕೇವಲ10 ದಿನಗಳಲ್ಲಿ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ನಿನ್ನೆಯಿಂದ ಕಟ್ಟಡ ಕಾರ್ಯ ಭರದಿಂದ ಶುರುವಾಗಿದ್ದು, ಫೆಬ್ರವರಿ 3ರ ಒಳಗಾಗಿ ಈ ಆಸ್ಪತ್ರೆಯನ್ನು ಸಂಪೂರ್ಣವಾಗಿ ನಿರ್ಮಿಸಲಾಗುತ್ತೆ.ಈಗಾಗ್ಲೇ ಚೀನಾ ದೇಶದಾದ್ಯಂತ 830 ಜನರಿಗೆ ಕೊರೊನಾ ವೈರಸ್‌ ಸೋಂಕು ತಗುಲಿದೆ. 26 ಜನ ಸಾವನ್ನಪ್ಪಿದ್ದು, ಲಕ್ಷಾಂತರ ಜನ ಕೊರೊನಾ ವೈರಸ್‌ ಹರಡುವ ಭೀತಿಯಲ್ಲಿದ್ದಾರೆ. ಚೀನಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಈ ವೈರಸ್‌ ಬೇರೆ ದೇಶಗಳಿಗೂ ಹರಡಿದೆ.