ತಂದೆಗೆ ತಕ್ಕ ಮಗ ಸಮಿತ್ ದ್ರಾವಿಡ್....!

ತಂದೆಗೆ ತಕ್ಕಮಗ ಸಮಿತ್ ದ್ರಾವಿಡ್....!

ಕ್ರಿಕೆಟಿಗರ ಮಕ್ಕಳು ಅಪ್ಪನ ಸರಿಸಮಾನವಾಗಿ ಬೆಳೆದ ಉದಾಹರಣೆಗಳು ಸಿಗುವುದು ಕಡಿಮೆ,ಆದರೆ ಎಳೆವೆಯಿಂದಲೇ ಅಪ್ಪನನ್ನೇ ಸ್ಫೂರ್ತಿಯಾಗಿರಿಸಿ ನಿರಂತರ ಅಭ್ಯಾಸ ನಡೆಸುತ್ತಿರುವ ಸಮಿತ್‌ ದ್ರಾವಿಡ್,ದಕ್ಷಿಣ ವಲಯ ಕೂಟದಲ್ಲಿ ಆಲೂರಿನಲ್ಲಿ ನಡೆಯುತ್ತಿರುವ ಗೋವಾ ವಿರುದ್ಧದ ಪಂದ್ಯದಲ್ಲಿ ಅಜೇಯ 109 ರನ್‌ ಬಾರಿಸಿ ತಂದೆಗೆ ತಕ್ಕ ಮಗ ಎನಿಸಿದ್ದಾರೆ.

ಇದಕ್ಕೂ ಮೊದಲು ಸಮಿತ್‌ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಆಯೋಜಿಸಿದ್ದ ಬಿಟಿಆರ್‌ ಅಂಡರ್‌ 14 ಕ್ರಿಕೆಟ್‌ ಕೂಟದಲ್ಲಿ ಭರ್ಜರಿ 150 ರನ್‌ ಬಾರಿಸಿದ್ದರು. ಕೆಎಸ್‌ಸಿಎ 14 ವಯೊಮಿತಿಯೊಳಗಿನ ಅಂತರ ವಲಯ ಕ್ರಿಕೆಟ್‌ ಕೂಟದಲ್ಲಿ ಧಾರವಾಡ ವಿರುದ್ಧ ವೈಸ್‌ ಪ್ರೇಸಿಡೆಂಟ್‌ ತಂಡದ ಪರವಾಗಿ ಆಡಿ 22 ಬೌಂಡರಿ ಒಳಗೊಂಡ 201 ರನ್‌ ದ್ವಿಶತಕವನ್ನೂ ಬಾರಿಸಿದ್ದರು.

ಸದ್ಯದ ಪರಿಸ್ಥಿತಿಯಲ್ಲಿ ಸಮಿತ್‌ ಬ್ಯಾಟಿಂಗ್‌ ಪರಿಯನ್ನು ನೋಡುತ್ತಿದ್ದರೆ ಮುಂದೆ ಇವರೊಬ್ಬರು ಸಮರ್ಥ ಕ್ರಿಕೆಟಿಗರಾಗಿ ರೂಪುಗೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಹಂತ ಹಂತವಾಗಿ ರಾಜ್ಯದ ವಿವಿಧ ತಂಡದೊಳಗೆ ಸ್ಥಾನ ಪಡೆದು ನಂತರ ರಣಜಿ ಆಡಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸಮಿತ್‌ ಗೆ ಮುಂದೆ ಅವಕಾಶವಿದೆ ಎನ್ನುವುದು ಕ್ರಿಕೆಟ್ ಪಂಡಿತರ ಮಾತು.

ಮಗನ ಆಟಕ್ಕೆ ರಾಹುಲ್ ಪ್ರತಿಕ್ರಿಯೆ...

ಅವನ ಆಟವನ್ನು ಎಂಜಾಯ್‌ ಮಾಡಿದ್ದೇನೆ. ನನ್ನ ಮಗ ಕ್ರಿಕೆಟ್‌ ಆಡುವಾಗ ನಾನು ಯಾವುದೇ ಪ್ರತಿಫ‌ಲಾಪೇಕ್ಷೆಯಿಲ್ಲದೆ ನೋಡುತ್ತಿರುತ್ತೇನೆ. ಅವನು ಅವನ ಆಟವನ್ನು ಆಡುತ್ತಾನೆ. ಒಂದಂತೂ ಹೆಮ್ಮೆ ಅನಿಸುತ್ತದೆ ಅವನು ಸಂಪೂರ್ಣ ಕ್ರೀಡೆಯಲ್ಲಿ ತೊಡಗಿಕೊಂಡಿರುವುದು ತೃಪ್ತಿದಾಯಕ ಎನಿಸುತ್ತಿದೆ ಎಂದು ರಾಹುಲ್‌ ದ್ರಾವಿಡ್‌ ಹೇಳಿದ್ದಾರೆ.