ತಾವರಗೇರಾ ಪಟ್ಟಣದಲ್ಲಿ ನಡೆದ ಗ್ರಾಮೀಣ ಕ್ರೀಡಾಕೂಟ.....
ತಾವರಗೇರಾ ಪಟ್ಟಣದಲ್ಲಿ ಗ್ರಾಮೀಣ ಕ್ರೀಡಾಕೂಟ 2019 20 ನೇ ಸಾಲಿನ ಜಿಲ್ಲಾ ಪಂಚಾಯತ್ ಕೊಪ್ಪಳ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಕೊಪ್ಪಳ ಹಾಗೂ ತಾವರಗೇರಾ ಎಜುಕೇಶನ್ ಅಸೋಸಿಯೇಷನ್ ಸಹಯೋಗದಲ್ಲಿ ಶಶಿಧರ್ ಸ್ವಾಮಿ ವಿದ್ಯಾನಿಕೇತನ ಸಂಸ್ಥೆಯಲ್ಲಿ ಗ್ರಾಮೀಣ ಕ್ರೀಡೋತ್ಸವ ನಡೆಯಿತು.
ಉದ್ಘಾಟಕರಾಗಿ ಶರಣಪ್ಪ ಐಲಿ ಉಪಾಧ್ಯಕ್ಷರು ಮಾತನಾಡಿ ಗ್ರಾಮೀಣ ಕ್ರೀಡೆಗಳು ಮಾನಸಿಕ ಹಾಗೂ ದೈಹಿಕವಾಗಿ ಪ್ರಮುಖವಾಗಿದೆ ಈಗಿನ ಗ್ರಾಮೀಣ ಕ್ರೀಡೆಯು ಕಾಣಿಯಾಗುತವೆ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಯುವಕರು ಹಾಗೂ ವಿದ್ಯಾರ್ಥಿಗಳು ಗ್ರಾಮೀಣ ಕ್ರೀಡೆಗಳು ಪ್ರಮುಖ ಪಾತ್ರವನ್ನು ವಹಿಸಬೇಕಾಗುತ್ತದೆ ಮನೆಯಲ್ಲಿ ತಂದೆತಾಯಿಗಳು ಗುರುಗಳು ಹಾಗೂ ಹಿರಿಯರು ಕ್ರೀಡೆಗೆ ಹೆಚ್ಚಿನ ಒತ್ತು ಕೊಡಬೇಕಾಗಿದೆ ಎಂದು ಹೇಳಿದರು. ಅಥಿತಿಗಳಾಗಿ ಎ.ಎನ್.ಯತಿರಾಜ್ ಖೊಖೊ ತರಬೇತಿದಾರರು ಜಿಲ್ಲಾ ಯುವ ಸಬಲೀಕರಣ ಕೊಪ್ಪಳ ಮಾತನಾಡಿ ಈಗಿನ ಗ್ರಾಮೀಣ ಕ್ರೀಡಾಕೂಟವು ಪ್ರಾಮುಖ್ಯತೆಯನ್ನು ಕಳೆದುಕೊಂಡಿದೆ ಅದನ್ನು ಮುಂದುವರಿಸಲು ಈಗಿನ ಯುವಕರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಬೇಕಾಗಿದೆ ಉದಾಹರಣೆಗಾಗಿ ಕಬ್ಬಡಿ,ಜಿಗಿತ,ಗಿಣಿ,ಲಗಾರಿ,ಕಲ್ಲು ಎತ್ತುವುದು,ಖೋ ಖೋ ಮುಂತಾದ ಕ್ರೀಡೆಗಳು ಇಂದಿನ ವಿದ್ಯಾರ್ಥಿಗಳಿಗೆ ಗೊತ್ತಿರದು ಕಡಿಮೆ ಅದನ್ನು ಮುಂದಿನ ಪೀಳಿಗೆಗಾಗಿ ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.ಪ್ರಾಚಾರ್ಯರು ಆರ್.ಜೆ.ಅಂಬಿಗೇರ ಹಾಗೂ ಎಸ್.ಎಸ್.ಗುಡದೂರ ಉಪನ್ಯಾಸಕರು ಮಾತನಾಡಿದರು.ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಪಾಲ್ಗೊಂಡು ಎ.ಎನ್.ಯತಿರಾಜ್, ಕಿರಣಕುಮಾರ್ ಮೋದಿಕಾರ್ ಹಾಗೂ ಶರಣಬಸವ ಕಳ್ಳೆರ್ ಸನ್ಮಾನಿಸಲಾಯಿತು. ವಿವಿಧ ಗೋಣಿ ಚೀಲ ಆಟ,ರಂಗೋಲಿ ಸ್ಪರ್ಧೆ,ಸ್ಲೋ ಸೈಕಲ್ ,ಮೂರು ಕಾಲಿನ ಓಟ,ಕಲ್ಲು ಎತ್ತುವುದು ಮುಂತಾದ ಗ್ರಾಮೀಣ ಕ್ರೀಡೆಗಳು ನಡೆದವು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಚಂದ್ರಶೇಖರ್ ಪೊಲೀಸ್ ಪಾಟೀಲ್,ಪಂಪಣ್ಣ ಚಿಟ್ಟಿ,ಮಲ್ಲನಗೌಡ ಗಲಿಗಲಿ,ಮಲ್ಲಿಕಾರ್ಜುನ ಮಾಲಿಪಾಟೀಲ್,ಶೇಖರಪ್ಪ ನಾಲತ್ವಾಡ,ಬಸನಗೌಡ ಪೊಲೀಸ್ ಪಾಟೀಲ್ ,ಪ್ರಭಾಕರ ಅವರೆಡ್ಡಿ ಉಪಸ್ಥಿತರಿದ್ದರು ಹಾಗೂ ಪ್ರಾರ್ಥನೆ ನಿಖಿತಾ ಸಂಗಡಿಗರು,ಪುಷ್ಪಾರ್ಪಣೆ ಸುಜಾತ ಹಿರೇಮಠ,ಗೌರವ ಸಮರ್ಪಣೆ ಎಸ್.ಎಸ್.ಗುಡುದೂರ,ವಂದನಾರ್ಪಣೆ ಅಯ್ಯಣ್ಣ, ನಿರೂಪಣೆ ಅರ್ಚನಾ ಬುಜರಕರ್ ಹಾಗೂ ಗೌವಿಸಿದ್ಧಪ್ಪ ನಾಗಲೀಕರ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ ಶರಣಪ್ಪ ಕುಂಬಾರ ತಾವರಗೇರಾ.