ಹಿಮ ಕರಗಿ ನೀರಾದ ನಂದಾ ದೇವಿ, ಪ್ರಕೃತಿಯ ವಿಕೋಪಕ್ಕೆ ನೂರಾರು ಕಾರ್ಮಿಕರು ಕಣ್ಮರೆ:

ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದಲ್ಲಿ ಭಾನುವಾರವ ಬೆಳಗ್ಗೆ 10.45ಕ್ಕೆ ದಿಢೀರ್‌ನೀರ್ಗಲ್ಲು ಸ್ಪೋಟ, ನಂದಾ ದೇವಿ ನೀರ್ಗಲ್ಲಿನ ಒಂದು ಭಾಗ ತುಂಡಾಗಿ ಹಿಮನದಿಯಾಗಿ ಹರಿದು ಮಹಾ ಪ್ರವಾಹವೇ ಸೃಷ್ಠಿಯಾಗಿದೆ, ಪ್ರಕೃತಿಯ ವಿಕೋಪಕ್ಕೆ ನೂರಾರು ಕಾರ್ಮಿಕರು ಕಣ್ಮರೆಯಾಗಿದ್ದರೆ, ಮಾಹಿತಿ ತಿಳಿದ ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್‌ಘಟನಾ ಸ್ಥಳಕ್ಕೆ ಬೇಟಿನೀಡಿ ಕಾರ್ಮಿಕರ ರಕ್ಷಣೆಗೆ ಮುಂದಾಗಿದ್ದರೆ

ವಿಷಯ ತಿಳಿದ ಕೆಂದ್ರ ಗೃಹ ಮಂತ್ರಿ ಅಮಿತ್‌ಶಾ  ಸಮರೋಪಾದಿ ರಕ್ಷಣ ಕಾರ್ಯಕ್ಕೆ ಎನ್‌ಡಿಆರ್‌ಎಪ್‌ತಂಡಗಳು, ರಾಜ್ಯ ವಿಪತ್ತು ನಿರ್ವಹಣಾ ತಂಡ, ಐಟಿಬಿಪಿ, ಸೇನೆ, ವಾಯುಪಡೆ ಜಂಟಿಯಾಗಿ ಜಂಟಿಯಾಗಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ ನಡೆಸಿವೆ. ಪ್ರವಾಹ ಹಾಗು ನೆರೆಯಿಂದ ಸುಮಾರು 170 ಕಾರ್ಮಿಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ, 10 ಮಂದಿಯ ಮೃತದೇಹ ಪತ್ತೆಯಾಗಿದ್ದು, ಇನ್ನು ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಕಾಣೆಯಾದವರಿಗಾಗಿ ಶೋಧ ಕಾರ್ಯ ಮುಂದುವರೆದಿದ್ದು, ಬದುಕಿರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

    ದೌಲಿಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವಾ ʼತಪೋವನ್‌ವಿದ್ಯುತ್‌ʼ ಘಟಕ, ರಿಷಿಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ರಿಷಿಗಂಗಾ ವಿದ್ದುತ್‌ಘಟಕಗಳೂ ಪ್ರವಾಹದಲ್ಲಿ ಕೊಚ್ಚಿಹೋಗಿವೆ. ಪ್ರವಾಹದ ವೇಳೆ ಈ ಎರಡೂ ಘಟಕಗಳ ಸುಮಾರು 200 ಕಾರ್ಮಿಕರು ಕಾಮಗಾರಿಯಲ್ಲಿ ತೊಡಗಿದ್ದರು ಎಂದು ತಿಳಿದುಬಂದಿದೆ.

    ತಾಪಮಾನ ಏರಿಕೆ ನೀರ್ಗಲ್ಲು ಸ್ಪೋಟಕ್ಕೆ ಕಾರಣ ಎನ್ನಲಾಗಿದೆ. ಪೌರಿ, ತೆಹ್ರಿ, ರುದ್ರಪ್ರಯಾಗ, ಹರಿದ್ವಾರ ಮತ್ತು ಡೆಹ್ರಾಡೂನ್‌ನಲ್ಲಿ ಪ್ರವಾಹ ಬೀತಿ ಹಿನ್ನೆಲೆ ಹೈ ಅಲರ್ಟ್‌ಘೊಷಿಸಿದೆ ಮತ್ತು ಗಂಗಾ ನದಿ ತೀರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಲಾಗಿದೆ

ಪ್ರವಾಹಕ್ಕೆ ತುತ್ತಾಗಿ ಮೃತಪಟ್ಟವರ ಕುಟುಂಭಕ್ಕೆಕೇಂದ್ರ ಸರಕಾರ ದಿಂದ 2 ಲಕ್ಷ, ರಾಜ್ಯ ಸರಕಾರದಿಂದ 4 ಲಕ್ಷ ರೂಪಯಿ ಪರಿಹಾರ ಘೋಷಿಸಲಾಗಿದೆ...

ವಿಜಯ ಬಾಸ್ಕರ 

https://www.facebook.com/vijay.bhaskar.104/