ಅಂತರಾಷ್ಟ್ರೀಯ ಟೂರ್ನಿಗೆ ಮಹಿಳಾ ಹಾಕಿ ತಂಡ
ರಾಣಿ ರಾಂಪಾಲ್ ನೇತೃತ್ವದ ಭಾರತ ಮಹಿಳಾ ಹಾಕಿ ತಂಡವು ಅಂತರಅಷ್ಟ್ರೀಯ ಮಟ್ಟದಲ್ಲಿ ನಾಲ್ಕು ಪಂದ್ಯಗಳ ಸರಣಿಯನ್ನು ಆಡಲು ಭಾನುವಾರ ಅರ್ಜೆಂಟೀನಾಕ್ಕೆ ತೆರಳಿದೆ.
ಕೋವಿಡ್ 19 ಪಿಡುಗಿನ ಹಿನ್ನಲೆಯಲ್ಲಿ ಉಂಟಾದ ಸುಮಾರು ಒಂದು ವಷ೯ದ ಬಿಡುವಿನ ಬಳಿಕ ಭಾರತ ತಂಡ ಅಂತರಾಷ್ಟ್ರೀಯ ಟೂನಿ೯ಗಳಲ್ಲಿ ಪಾಲ್ಗೊಳ್ಳಲಿದೆ. ಕೋವಿಡ್ ಬಿಡುವಿನ ವೇಳೆಯಲ್ಲಿ ಮಹಿಳಾ ಹಾಕಿ ತಂಡವು ಬೆಂಗಳೂರಿನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ನಡೆದ ರಾಷ್ಟ್ರೀಯ ಶಿಬಿರದಲ್ಲಿ ತರಬೇತಿ ನಡೆಸಿತ್ತು.
ಭಾರತ ಮಹಿಳಾ ತಂಡವು ವಿಶ್ವದ ಎರಡನೇ ರ‍್ಯಾಂಕ್ ತಂಡ ಅರ್ಜೆಂಟೀನಾ ವಿರುದ್ಧ ಜನೆವರಿ 26 ,28 ,30 ಹಾಗೂ 31ರಂದು ಪಂದ್ಯಗಳನ್ನು ಆಡಲಿದೆ . ಅದಕ್ಕೂ ಮೊದಲು ಅರ್ಜೆಂಟೀನಾ ಬಿ ಹಾಗು ಜೂನಿಯರ್ ತಂಡಗಳ ಎದುರು ಭಾರತ ತಲಾ ಎರಡು ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ.
ವರದಿ :ಬಸವರಾಜ ಹೂಗಾರ ಗದಗ