ನಿನ್ನೆ ವಿಶಾಖಪಟ್ಟಣ ಇಂದು ಮಹಾರಾಷ್ಟ್ರ : ಔರಂಗಾಬಾದ್ ನಲ್ಲಿ ಭೀಕರ ರೈಲು ದುರಂತ : ಊರಿಗೆ ತೆರಳುವ ಕನಸು ಕಂಡವರ ಭೀಕರ ದುರ್ಮರಣ...
ಕೊರೊನಾ ಸಂಕಷ್ಟದ ನಡುವೆಯೇ ದೇಶದಲ್ಲಿ ಒಂದರ ಮೇಲೊಂದು ದುರ್ಘಟನೆಗಳು ಸಂಭವಿಸುತ್ತೀವೆ. ನಿನ್ನೆ ವಿಶಾಖಪಟ್ಟಣದ ದುರಂತ ಇನ್ನು ಕಣ್ಣು ಮುಂದೆ ಇರುವಾಗಲೇ ಇಂದು ಮಹಾರಾಷ್ಟ್ರ ದಲ್ಲಿ ಮತ್ತೊಂದು ಅವಘಡ ನಡೆದಿದೆ.
ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ರೈಲು ಹಳಿಯ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ರೈಲು ಹರಿದಿದ್ದು ಘಟನೆಯಲ್ಲಿ ಹದಿನಾಲ್ಕು ಜನ ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ.
ದೇಶದಲ್ಲಿ ಮೂರನೇ ಹಂತದ ಲಾಕ್ ಡೌನ್ ಹಿನ್ನಲೆ ಮಹಾರಾಷ್ಟ್ರದಲ್ಲಿ ಸಿಲುಕಿದ್ದ ಛತ್ತೀಸಗಢ ಮೂಲದ ವಲಸೆ ಕಾರ್ಮಿಕರು ತಮ್ಮ ಸ್ವಗ್ರಾಮಗಳಿಗೆ ಕಾಲ್ನಡಿಗೆಯ ಮೂಲಕ ತೆರಳುತ್ತಿದ್ದರು. ಸುಧೀರ್ಘ
ನಡಿಗೆಯಿಂದ ಸುಸ್ತಾಗಿದ್ದ ಕಾರ್ಮಿಕರು ರೈಲ್ವೆ ಹಳಿಯ ಮೇಲೆ ನಿದ್ದೆಗೆ ಜಾರಿದ್ದಾರೆ. ಇಂದು ಬೆಳಿಗ್ಗೆ 6 ಗಂಟೆಗೆ ಈ ಕಾರ್ಮಿಕರ ಮೇಲೆ ರೈಲು ಹರಿದಿದೆ.
ಇನ್ನು ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು , ವಲಸೆ ಕಾರ್ಮಿಕರ ಕುರಿತ ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಇಷ್ಟಕ್ಕೇಲ್ಲಾ ಕಾರಣ ಎಂದು ಹೇಳಲಾಗುತ್ತಿದೆ.
ಪ್ರಧಾನಿ ಮೋದಿ ಈ ಅವಘಡದ ಕುರಿತು ಟ್ವಿಟ್ ಮಾಡಿದ್ದು, ಘಟನೆಯಿಂದ ತೀವ್ರ ದುಃಖವಾಗಿದೆ. ಕೇಂದ್ರ ರೈಲ್ವೆ ಸಚಿವ ಪಿಯುಶ್ ಗೋಯಲ್ ಜೊತೆಗೆ ಈ ಕುರಿತು ಚರ್ಚೆ ನಡೆಸಿದ್ದು, ಪ್ರಕರಣವದ ಮೆಲ್ವಿಚಾರಣೆ ಮಾಡುವಂತೆ ಸೂಚಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.