ಭಾರತಕ್ಕೆ ಬಂದರೆ ತೊಂದರೆ ಎಂದರು ಸೋನು ನಿಗಮ್
ಸೋನು ನಿಗಂ ತಮ್ಮ ಕುಟುಂಬದ ಜೊತೆ ದುಬೈನಲ್ಲಿ ವಾಸಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಸೋನು ಹಿಮಾಲಯಕ್ಕೆ ಹೋಗಿದ್ದರು. ಬಳಿಕ ಮಾರ್ಚ್ 6ರಂದು ಮುಂಬೈನಲ್ಲಿ ಅವರ ಕಾನ್ಸರ್ಟ್ ಆಯೋಜಿಸಲಾಗಿತ್ತು. ಹಾಗಾಗಿ ಅವರು ಮುಂಬೈನಿಂದ ವಾಪಸ್ ಬಂದಿದ್ದರು. ಆದರೆ ಕೊರೊನಾ ಇದ್ದ ಕಾರಣ ಅವರ ಕಾನ್ಸರ್ಟ್ ರದ್ದಾಗಿತ್ತು. ಇದಾದ ಬಳಿಕ ಸೋನಂ ತಮ್ಮ ಪತ್ನಿ ಹಾಗೂ ಮಗನ ಜೊತೆ ದುಬೈಗೆ ಹೋಗಿದ್ದು, ಕೆಲವು ವಾರಗಳಿಂದ ಅವರು ಅಲ್ಲಿಯೇ ವಾಸಿಸುತ್ತಿದ್ದಾರೆ.ಮಾಧ್ಯಮವೊಂದಕ್ಕೆ ಮಾತನಾಡಿದ ಸೋನು, ನನ್ನ ಪತ್ನಿ ಹಾಗೂ ಮಗ ನನ್ನ ಜೊತೆಯಲ್ಲಿ ಇರುವುದು ನನಗೆ ತುಂಬಾ ಖುಷಿ ಇದೆ. ನನ್ನ ಮಗ ಇಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದು, ನಾನು ಹಲವು ಬಾರಿ ದುಬೈಗೆ ಬಂದಿದ್ದೇನೆ. ದುಬೈ ಕೂಡ ನನ್ನ ಮನೆಯಿದ್ದ ಹಾಗೆ. ಆದರೆ ಭಾರತದಲ್ಲಿ ನನ್ನ ತಂದೆ ಹಾಗೂ ನನ್ನ ಸಹೋದರಿ ಇದ್ದಾರೆ. ನಾನು ಭಾರತಕ್ಕೆ ಬಂದು ಅವರ ಜೊತೆಯಲ್ಲಿ ವಾಸಿಸಲು ಇಷ್ಟಪಡುತ್ತೇನೆ. ಬಳಿಕ ನಾನು ಭಾರತಕ್ಕೆ ಹೋದರೆ ನನ್ನ ತಂದೆಗೆ ವೈರಸ್ ತಗುಲಬಹುದು ಎಂದು ತಿಳಿಯಿತು. ಈ ವೈರಸ್ ಎಷ್ಟು ಅಪಾಯ ಎಂಬುದು ನನಗೆ ಗೊತ್ತು ಎಂದರು.ನಾನು ಹಾಗೂ ನನ್ನ ಕುಟುಂಬಸ್ಥರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ. ನನ್ನ ಅಕ್ಕಪಕ್ಕದಲ್ಲಿರುವ ಎಲ್ಲ ಜನರು ಸುರಕ್ಷಿತವಾಗಿರಲಿ ಎಂದು ನಾನು ಬಯಸುತ್ತೇನೆ. ಕೊರೊನಾ ಬಗ್ಗೆ ರಿಸ್ಕ್ ತೆಗೆದುಕೊಳ್ಳುವುದು ಒಳ್ಳೆಯದಲ್ಲ ಎಂದು ನನಗೆ ಅನಿಸುತ್ತೆ. ಎಲ್ಲವೂ ಸರಿ ಹೋಗುವವರೆಗೂ ನಾನು ಇಲ್ಲಿಯೇ ಇರುವುದು ಸೂಕ್ತ. ಭಾರತಕ್ಕೆ ಹೋಗಿ ಗೃಹಬಂಧನದಲ್ಲಿ ಇರುವುದರಲ್ಲೂ ತುಂಬಾ ರಿಸ್ಕ್ ಇದೆ ಎಂದು ಸೋನು ತಿಳಿಸಿದ್ದಾರೆ.