ಅಯೋಧ್ಯಾ ನಗರದ ನೀಲನಕ್ಷೇ ನಿರ್ಮಿಸಲು ಮೂರು ಸಂಸ್ಥೆಗಳ ನಿಯುಕ್ತಿ! ತಿರುಪತಿ ದೇವಾಲಯ ನಿರ್ಮಿಸಿರುವ ಸಂಸ್ಥೆಗೂ ಸಿಕ್ಕಿದೆ ಜವಾಬ್ದಾರಿ.!

ಉತ್ತರ ಪ್ರದೇಶದ ಅಯೋಧ್ಯಾ ನಗರದಲ್ಲಿನ ವಿವಿಧ ಕಾಮಗಾರಿಗಳನ್ನು ಆರಂಭ ಮಾಡುವ ನಿಟ್ಟಿನಲ್ಲಿ ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರ ಮೂರು ಸಂಸ್ಥೆಗಳ ಹೆಸರನ್ನು ಅಂತಿಮಗೊಳಿಸಿದೆ. ಕೆನಡಾ ಮೂಲದ ಅಂತಾರಾಷ್ಟ್ರೀಯ ಸಂಸ್ಥೆಯಾದ ಎಲ್‌ಇಎ ಅಸೋಸಿಯೆಟ್ಸ ಸೌತ್‌ ಎಷಿಯಾ ಪ್ರೈವೇಟ್‌ ಲಿಮಿಟೆಡ್‌ ಮತ್ತು ಭಾರತ ಮೂಲದ ಸಂಸ್ಥೆಗಳಾದ ಎಲ್‌ ಯ್ಯಾಂಡ್‌ ಟಿ ಮತ್ತು ಕುಕ್ರೆಜಾ ಆರ್ಕಿಟೆಕ್ಸ, ಅಯೋಧ್ಯಾ ನಗರದ ನಿರ್ಮಾಣದ ನೀಲನಕ್ಷೆಗಳನ್ನು ತಯಾರಿಸಲಿವೆ.

ಕೆನಾಡಾ ಮೂಲದ ಸಂಸ್ಥೆಯೂ ಈಗಾಗಲೇ ತಿರುಪತಿ ದೇವಸ್ಥಾನ ಮತ್ತು ಸ್ಮಾರ್ಟ ಸಿಟಿ ನಿರ್ಮಾಣದ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ಮಾಡಿದ್ದು, ಭಾರತದ ಸಂಸ್ಥೆಯಾದ ಕುಕ್ರೆಜಾ ಆರ್ಕಿಟೆಕ್ಸ ಮಲೆಷಿಯಾದಲ್ಲಿ ಹಲವು ನಿರ್ಮಾಣ ಕಾರ್ಯಗಳನ್ನು ನಡೆಸಿದೆ.

ಕಳೆದ ವರ್ಷ ಡಿಸೆಂಬರ್ 26ರಂದು ಅಯೋಧ್ಯ ನಗರ ನಿರ್ಮಾಣದ ನೀಲನಕ್ಷೆ ನಿರ್ಮಿಸುವಂತೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಪ್ರಸ್ಥಾವನೆ ನೀಡಲಾಗಿತ್ತು. ತದನಂತರ ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರ ಒಟ್ಟು ಎಂಟು ಸಂಸ್ಥೆಗಳನ್ನ ಆಯ್ಕೆ ಮಾಡಿತ್ತು. ಈ ಎಂಟು ಸಂಸ್ಥೆಗಳು ನೀಡಿದಂತಹ ನೀಲನಕ್ಷೆ ಮತ್ತು ನಿರ್ಮಾಣ ವೆಚ್ದದ ಮಾಹಿತಗಳನ್ನು ಬಿಡ್ಡಿಂಗ್‌ ಇವ್ಯಾಲುವೇಶನ್‌ ಕಮಿಟಿಗೆ ಕಳುಹಿಸಿಕೊಡಲಾಗಿತ್ತು ಈ ಕಮಿಟಿಯ ಅಧ್ಯಕ್ಷರು ಮತ್ತು ಗೃಹ ಇಲಾಖೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ದೀಪಕ್‌ ಕುಮಾರ್‌ ಕೊನೆಗೆ ಮೂರು ಸಂಸ್ಥೆಗಳನ್ನು ಆಯ್ಕೆ ಮಾಡಿದ್ದಾರೆ.

ಈ ಮೂರು ಸಂಸ್ಥೆಗಳು ಅಯೋಧ್ಯ ನಗರ ಯೋಜನೆ, ಸಾರಿಗೆ, ಟ್ರಾಫಿಕ್‌, ಮೂಲ ಸೌಕರ್ಯ, ಆಯವ್ಯಯ, ಪರಂಪರೆ, ಪ್ರವಾಸೋದ್ಯಮ ಮತ್ತು ನವೀಕರಿಸಬಹುದಾದ ಸಂಪನ್ಮೂಲಗಳ ಬಗ್ಗೆ ನೀಲನಕ್ಷೆ ನಿರ್ಮಿಸಲಿವೆ ಎಂದು ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರಾದ ವಿಶಾಲ್‌ ಸಿಂಗ್‌ ತಿಳಿಸಿದ್ದಾರೆ.

ವರದಿ: ಮಂಜುನಾಥ್‌ ಅಜಿತ್