ಕುಡಿದು ಟೈಟ್ ಆದವರಿಗೆ ಹೊಸ ವರ್ಷಕ್ಕೆ ವಿಶೇಷ ಗಿಫ್ಟ್

ಕುಡಿದು ಟೈಟ್ ಆದವರಿಗೆ  ಮಲಗೋ ವ್ಯವಸ್ಥೆ..ಹೊಸ ವರ್ಷಕ್ಕೆ ಪೋಲೀಸರ ವಿಶೇಷ ಗಿಫ್ಟ್.

 
ಹೊಸ ವರ್ಷ ಆಚರಣೆ  ಎಲ್ಲೆಡೆ ಸಂಭ್ರಮ ಮನೆ ಮಾಡಿದೆ.  ಅದರಲ್ಲೂ ಬೆಂಗಳೂರು ತುಸು ಹೆಚ್ಚು .
ಹೊಸ ವರ್ಷದಂದು ಕುಡಿದು ಪಾರ್ಟಿ ಮೋಜಿನಲ್ಲಿ ಅತಿಯಾಗಿ ಮದ್ಯ ಸೇವಿಸಿ ಮನೆಗೆ ಹೋಗಲಾರದಂತಹ  ಪ್ರಕರಣಗಳೇ ಹೆಚ್ಚಾಗಿ ಕಂಡಿರುತ್ತೇವೆ ಮತ್ತು ಕೇಳಿರುತ್ತೇವೆ. ಅವರಿಂದ ಬೇರೆಯವರಿಗೆ ತೊಂದರೆ ಆಗದಿರಲಿ ಎಂದು
 ಕೋರಮಂಗಲದ ಆರಕ್ಷಕರು ಟೈಟ್ ಆದವರಿಗೆ  ಒಂದು ವಿನೂತನ ಕೊಡುಗೆ  ಕೊಟ್ಟಿದ್ದಾರೆ.

ಅದೇನೆಂದರೆ ಡಿ.31 ರ  ಮಧ್ಯರಾತ್ರಿ ಕುಡಿದು ಮನೆಗೆ ಹೋಗಲಾಗದವರು ಇಲ್ಲಿ ಮಲಗಿದ್ದು ಬೆಳಗ್ಗೆ ಹೋಗಬಹುದು.
ಪೊಲೀಸ್ ಅವರ ಈ ವಿಶಿಷ್ಟ ಕಾರ್ಯಕ್ಕೆ ಜನರು ಮೆಚ್ಚುಗೆ ಸೂಚಿಸಿದ್ದಾರೆ .