ಬೆಂಗಳೂರಿನಲ್ಲಿ ಮೊಳಗಿತು ಗುಂಡಿನ ಸದ್ದು : ಪಿಜಿ ಎದುರುಗಡೆಯೇ ಯುವತಿಯ ಮೇಲೆ ಫೈರಿಂಗ್....
ಬೆಂಗಳೂರ:-ಸಿಲಿಕಾನ್ ಸಿಟಿಯಲ್ಲಿ ತಡರಾತ್ರಿ ಗುಂಡಿನ ಸದ್ದು ಮೊಳಗಿದೆ ಬೆಂಗಳೂರಿನಲ್ಲಿ ವಾಸವಾಗಿದ್ದ ಒರಿಸ್ಸಾ ಮೂಲದ ಮಹಿಳೆ ಕಚೇರಿಯಿಂದ ಬಂದಾಗ ಅವಳು ವಾಸವಿದ್ದ ಪಿ.ಜಿ ಎದುರೆ ಅವಳ ಮೇಲೆ ಗುಂಡು ಹಾರಿಸಿ ಕೊಲೆ ಪ್ರಯತ್ನ ನೆಡೆದಿರುವ ಘಟನೆಯು ಮಾರತ್ ಹಳ್ಳಿ ಬಳಿಯ ಮುನೆಕೊಳಲು ಬಳಿ ನೆಡೆದಿದೆ.
ಆಕೆಯ ಹೊಟ್ಟೆಗೆ ಒಂದು ಬಾರಿ ಗುಂಡು ಹಾರಿಸಿದ ಪರಿಣಾಮ ಫೈರಿಂಗ್ ಸದ್ದು ಕೇಳಿದ ಆಕೆಯ ಪಿ.ಜಿ ಯವರು ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶುಭಶ್ರೀ ಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಕೊಲೆಗೆ ಬಳಸಿದ್ದ ಪಿಸ್ತೂಲ್ ನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.ಗುಂಡು ಹಾರಿಸಿದ ವ್ಯಕ್ತಿಯನ್ನು ಅಮರೇಂದ್ರ ಎಂದು ಗುರುತಿಸಲಾಗಿದೆ,ಪ್ರಾಥಮಿಕ ತನಿಖೆ ವೇಳೆ ಮೊದಲೇ ಪರಿಚಿತನಾಗಿದ್ದ ಎಂದು ತಿಳಿದುಬಂದಿದೆ.
ಈ ಒಂದು ಪ್ರಕರಣವು ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ವೈಟ್ ಫೀಲ್ಡ್ ಡಿಸಿಪಿ ಅನುಚೇತ್ ಹೇಳಿಕೆ ನೀಡಿದ್ದಾರೆ.