ಮಾನವ ಹಕ್ಕುಗಳ ಆಯೋಗಕ್ಕೆ ರಾಹುಲ್ ಗಾಂಧಿ ದೂರು : ಉತ್ತರ ಪ್ರದೇಶ ಜನರ ಹಕ್ಕುಗಳ ರಕ್ಷಣೆಗೆ ಆಗ್ರಹ.

ನವದೆಹಲಿ : ಇಂದು ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ನೇತ್ರತ್ವದ ಕಾಂಗ್ರೆಸ್ ಆಯೋಗ ರಾಷ್ಟೀಯ ಮಾನವ ಹಕ್ಕುಗಳ ಆಯೋಗವನ್ನು ಭೇಟಿ ಮಾಡಿ ಉತ್ತರ ಪ್ರದೇಶದಲ್ಲಿ  ಸಿಎಎ ವಿರೋಧಿ ಹೋರಾಟಗಾರರ ಮೇಲೆ ಪೋಲಿಸರು ನಡೆಸಿದ ದೌರ್ಜನ್ಯದ ಕುರಿತು ಸೂಕ್ತ ತನಿಖೆ ನಡೆಸುವಂತೆ ಒತ್ತಾಯ ಮಾಡಿದರು.

ಇನ್ನು ಈ ಕುರಿತು ಟ್ವಿಟ್ ಮಾಡಿರುವ ರಾಹುಲ್ ಗಾಂಧಿ ಸಿಎಎ ವಿರೋಧಿ ಹೋರಾಟಗಾರರ ಮೇಲೆ ಉತ್ತರ ಪ್ರದೇಶ ಪೋಲಿಸರು ನಡೆಸಿರುವ ಹಲ್ಲೆಯ ಸಾಕ್ಷ್ಯಗಳನ್ನು ಮಾನವ ಹಕ್ಕುಗಳ ಆಯೋಗಕ್ಕೆ ನೀಡಲಾಗಿದೆ. ಮಾನವ ಹಕ್ಕುಗಳ ಆಯೋಗ ಈ ಪ್ರಕರಣದ ಸೂಕ್ತ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ತರ ವಿರುದ್ಧ  ಸೂಕ್ತ ಕ್ರಮ ಕೈಗೊಳ್ಳಬೇಕು ಆ ಮೂಲಕ ಉತ್ತರ ಪ್ರದೇಶ ಜನರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷೀಸಬೇಕು ಎಂದು ಹೇಳಿದ್ದಾರೆ.

ಇಂದಿನ ಕಾಂಗ್ರೆಸ್ ನಿಯೋಗ ರಾಹುಲ್ ಗಾಂಧಿ ಜೊತೆ ಪ್ರಿಯಾಂಕ ಗಾಂಧಿ , ಅಭಿಷೇಕ್ ಮನು ಸಿಂಘ್ವೀ , ಸಲ್ಮಾನ್ ಖುರ್ಷಿದ್ ಹಾಗೂ ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಕುಮಾರ್ ಅವರನ್ನು ಒಳಗೊಂಡಿತ್ತು.