ಈಡನ್ ಪಾರ್ಕ್‌ನಲ್ಲಿಂದು ಕಿವೀಸ್ ಸವಾಲು ಎದುರಿಸಲು ಸಜ್ಜಾದ ಭಾರತ.

ಭಾರತ ಹಾಗೂ ನ್ಯೂಜಿಲೆಂಡ್‌ ನಡುವಣ ಮೊದಲ  ಟಿ-20 ಪಂದ್ಯ  ಆಕ್ಲೆಂಡ್‌  ಈಡನ್ ಪಾರ್ಕ್‌ನಲ್ಲಿಂದು ನಡೆಯಯಲಿದೆ. ಕಿವೀಸ್ ಸವಾಲು ಎದುರಿಸಲು ಭಾರತ ಸಕಾಲ ತಯಾರಿ ನೆಡೆಸಿದೆ.

ಭಾರತದ ತಂಡ ಬಲಿಷ್ಠವಾಗಿದ್ದು , ಬ್ಯಾಟಿಂಗ್ ವಿಭಾಗದ ಜವಾಬ್ದಾರಿಯನ್ನುಆರಂಭಿರಾದ ಕೆ ಲ್ ರಾಹುಲ್ , ರೋಹಿತ್ ಶರ್ಮಾ ಹಾಗೂ ನಾಯಕ ವಿರಾಟ್ ಕೊಹ್ಲಿ ಆಗ್ರಕ್ರಮಾಂಕವನ್ನು ವಹಿಸಿಕೊಳ್ಳಲಿದ್ದಾರೆ.ಇನ್ನು ಮಧ್ಯಮ ಕ್ರಮಾಂಕ ವನ್ನು ಶ್ರೇಯಸ್ ಅಯ್ಯರ್ ಹಾಗೂ ಮನೀಶ್ ಪಾಂಡೆ ಯುವ ಕ್ರಿಕೆಟಿಗ ಸಂಜು ಸ್ಯಾಮ್ಸನ್  ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ .ಇನ್ನು ಆಲ್ರೌಂಡರ್ ಆದ ರವೀಂದ್ರ ಜಡೇಜಾ ಹಾಗೂ ಭರವಸೆ ಮೂಡಿಸಿರುವ ಶಿವಂ ದುಬೆ ಕೆಳ ಕ್ರಮಾಂಕದ ಹೊಣೆ ಅವರ ಮೇಲೆ ಇದೆ. ಬೋಲಿಂಗ್ ವಿಭಾಗದ ಜವಾಬ್ದಾರಿಯನ್ನು ಸ್ಪಿನ್ನರ್ ಆದ ಚಹಲ್ ಹಾಗೂ ಸ್ಪೀಡ್ ಸ್ಟಾರ್ ನವದೀಪ್ ಸೈನಿ , ದೀಪಕ್ ಚಹರ್ ಹಾಗೂ ಶಾರ್ದೂಲ ಠಾಕೂರ್ ಮೇಲೆ ಹೆಚ್ಚಿನ ಒತ್ತಡವಿದೆ.

  ಇತ್ತ ಕಿವೀಸ್ ಕೂಡ ತವರಿನ ಲಾಭ ಪಡೆದು ಭಾರತಕ್ಕೆ ಟಕ್ಕರ್ ಕೊಡಲು ಭರ್ಜರಿ ತಯಾರಿ ನಡೆಸಿದ್ದಾರೆ. 
 ಭಾರತ ಮತ್ತು  ನ್ಯೂಜಿಲ್ಯಾಂಡ್ ಅಂಕಿ ಅಂಶಗಳ ನೋಡೋದಾದ್ರೆ ಆಕ್ಲೆಂಡ್‌ನಲ್ಲಿ ಕಣಕ್ಕಿಳಿದಿರುವ 19ರಲ್ಲಿ‌ 7 ಪಂದ್ಯ ಗೆದ್ದಿರುವ ಆತಿಥೇಯರು.ಕೊನೆಯ ಬಾರಿ ಈಡನ್ ಪಾರ್ಕ್‌ನಲ್ಲಿ ಎದುರಾದಾಗ ಗೆದ್ದು ಬೀಗಿದ್ದ ಭಾರತ, ಟಿ-20ಯಲ್ಲಿ ಮುಖಾಮುಖಿಯಾದ 9ರಲ್ಲಿ 4 ಬಾರಿ ಗೆದ್ದಿರುವ ನ್ಯೂಜಿಲೆಂಡ್.ಏಕದಿನ ವಿಶ್ವಕಪ್ ಸೆಮಿಫೈನಲ್‌ ಸೋಲಿನ ಬಳಿಕ ಮೊದಲ ಬಾರಿಗೆ ಭಾರತ - ಕಿವೀಸ್ ಮುಖಾಮುಖಿಯಾಗಿದ್ದು.