ನೈಜ್ಯ ಘಟನೆ ಆಧಾರಿತ

 

ಕನ್ನಡ ಚಿತ್ರರಂಗದಲ್ಲಿ ಅನೇಕ ಹೊಸ ಪ್ರಯೋಗಗಳು ನಡೀತಾನೆ ಇರುತ್ತವೆ. ಈಗ ಅಂತಹುದೆ ಒಂದು ಚಿತ್ರ ತನ್ನ ಟ್ರೆಲರ್‌ ಮೂಲಕ ಸದ್ದು ಮಾಡ್ತಾ ಇದೆ. ಅದೇ “ ಒಂದು ಗಂಟೆಯ ಕಥೆ” ಚಿತ್ರದ ಟ್ರೆಲರ್‌ ಈಗಾಗಲೆ ವೈರಲ್‌ ಆಗಿದೆ.

ಗುಣ, ಮತ್ತೆ ಮುಂಗಾರು ಚಿತ್ರದ ನಿರ್ದೇಶಕ ರಾಘವ ದ್ವಾರ್ಕೀ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಚಿತ್ರದ ಟ್ರೆಲರ್‌ ನೋಡಿದರೆ ಹಿಂದೆಲ್ಲ ಸಂದೇಶ ಭರಿತ ಚಿತ್ರಗಳನ್ನ ಮಾಡಿರುವ ನಿರ್ದೇಶಕ ದ್ವಾರ್ಕಿ ಈ ಚಿತ್ರವನ್ನ ಏಕೆ ಮಾಡಿದ್ದಾರೆ ಅನ್ನಿಸದಿರದು. ಚಿತ್ರದ ಒಂದು ಹಾಡನ್ನ ಮಾಧ್ಯಮದವರಿಗೆ ತೋರಿಸಿ ಮಾತಿಗಿಳಿದ ಚಿತ್ರತಂಡ ಹಾಗು ನಿರ್ದೇಶಕ ರಾಘವ್‌ ದ್ವಾರ್ಕಿ  ಚಿತ್ರದ ಪೋಸ್ಟರ್‌ ಹಾಗೂ ಟ್ರೇಲರ್‌ ಕುರಿತು ಸ್ಪಷನೆ ನೀಡಿದರು. ‘ಚಿತ್ರದ ಪೋಸ್ಟರ್‌ ಹಾಗೂ ಟ್ರೇಲರ್‌ ನೋಡಿದವರಿಗೆ ಸ್ವಲ್ಪ ಇರಿಸು ಮುರಿಸಾಗಬಹುದು. ಆದರೆ ಇದು ಒಂದು ಒಳ್ಳೆಯ ಸಂದೇಶವಿರುವ ಚಿತ್ರ. ಬೆಂಗಳೂರಿನಲ್ಲೇ ನಡೆದ ನೈಜ್ಯ ಘಟನೆ ಆಧಾರಿತ ಸಿನಿಮಾ ಆಗಿದೆ. ಚಿತ್ರ ವನ್ನ ನೋಡಿದ ಮೇಲೆ ಪ್ರೇಕ್ಷಕರಿಗೆ ಖಂಡಿತ ಇಷ್ಟ ಆಗೋದ್ರಲ್ಲಿ ಸಂಶಯವಿಲ್ಲ. ಮಾರ್ಚ್ ೧೯ ರಂದು ತೆರೆಗೆ ಬರಲಿದೆ ಎಂದಿದ್ದಾರೆ. 

ನಜುಂಡ ಅಲಿಯಾಸ್‌ ಅಜಯ್‌ ರಾಜ್ ‌ ಈ ಚಿತ್ರದ ನಾಯಕ ನಟ. ಹುಬ್ಬಳ್ಳಿ ಮೂಲದ ಶಾನಾಯ್‌ ಕಾಟ್ವೆ ಚಿತ್ರದ ನಾಯಕಿ.ಸ್ವಾತಿ ಶರ್ಮಾ ಕೂಡ ಚಿತ್ರದ ಇನ್ನೊಬ್ಬ ನಾಯಕಿ. ಅವರೊಂದಿಗೆ ರೆಮೋ. ಪ್ರಶಾಂತ್‌ ಸಿದ್ದಿ, ಚಿದಾನಂದ್‌, ನಾಗೇಂದ್ರ ಶಾ ಚಿತ್ರದ ಪೋಷಕ ಪಾತ್ರಗಳಲ್ಲಿದ್ದಾರೆ. ರಿಯಲ್‌ ವೆಲ್ತ್‌ ವೆಂಚರ್‌ ಪ್ರೋಡಕ್ಷನ್‌ ಮೂಲಕ ಕಶ್ಯಪ್‌ ದಾಕೋಜು ಹಾಗು ಮಿಲನ ಚಿತ್ರದ ನಿರ್ಮಾಪಕರಾದ ಕೆ.ಎಸ್ ದುಶ್ಯಂತ್  ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕಿದ್ದಾರೆ. ಸೂರ್ಯಕಾಂತ್‌ ಛಾಯಾಗ್ರಹಣವಿದೆ. ಗಣೇಶ್‌ ಮಲ್ಲಯ್ಯ ಸಂಕಲನವಿದೆ. ಚೆನ್ನೈ ಮೂಲದ ಸಂಗೀತ ನಿರ್ದೇಶಕ ಡೇನಿಸ್‌ ವಲ್ಲಭನ್‌ ಸಂಗೀತ ಸಂಯೋಜನೆ ಮಾಡಿದ್ದಾರೆ.ಇಂದಿನ ಯುವಕರ ಜೀವನ ಶೈಲಿ ಮತ್ತು ಅಭಿರುಚಿ, ಜವಾಬ್ದಾರಿಗಳ ಕುರಿತು ಕಥಾ ಹಂದರ ಹೊಂದಿರುವ ಚಿತ್ರ  ಒಂದು ಗಂಟೆಯ ಕಥೆ  ಅನ್ನುತ್ತೆ ಚಿತ್ರ ತಂಡ.