ಮೋದಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ದೀದಿ....
ಕೊಲ್ಕತ್ತಾ : ಸದ್ಯ ದೇಶದೆಲ್ಲೆಡೆ ಪೌರತ್ವ ಕಾಯ್ದೆಯ ಕಿಚ್ಚು
ಸದ್ಯಕ್ಕೆ ಆರುವ ಲಕ್ಷಣ ತೋರುತ್ತಿಲ್ಲ. ಹಲವು ರಾಜ್ಯಗಳಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು,
ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ಈ ನಡುವೆ ಪೌರತ್ವ ಕಾಯ್ದೆಯನ್ನು ಮೊದಲಿನಿಂದಲೂ ವೀರೊಧಿಸಿಕೊಂಡು ಬರುತಿದ್ದ ಪಶ್ಚಿಮ ಬಂಗಾಳ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ, ಸರ್ಕಾರ ವಜಾ ಮಾಡಿದ್ರು ಪರವಾಗಿಲ್ಲ ಆದರೆ ಅಸಂವೀಧಾನಿಕ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿ ಮಾಡಲು ಬಿಡುವುದಿಲ್ಲ ಎಂದು ಹೇಳುವ ಮೂಲಕ ಕಾಯ್ದೆ ವಿರುದ್ಧ ಕಿಡಿ ಕಾರಿದ್ದಾರೆ.
ಟಿಎಂಸಿ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸುತ್ತಿರುವ ದೀದಿ, ಮೋದಿ ಸರ್ಕಾರ ಕಾಯ್ದೆ ಅನುಷ್ಠಾನ ಮಾಡಲೇಬೇಕೆಂದರೆ, ನನ್ನ ಶವದ ಮೇಲೆ ನಿಮ್ಮ ಕಾಯ್ದೆ ಅನುಷ್ಠಾನ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.