ಲಾಜಿಕ್ ಇಲ್ಲದೆ ಬೇಸಿಕ್ ನೀಡ್ಸ್ ಗಳ  ಬೆಲೆ ಏರಿಕೆಯ ಬಿಸಿ...

ಪೆಟ್ರೋಲ್ ಡೀಸಲ್ ದರ ಇಳಿಸಿ ಪ್ರಧಾನಿ ಮೋದಿಗೆ  ಕಾಂಗ್ರೆಸ್ ಅದ್ಯಕ್ಷೆ ಸೋನಿಯಾ ಗಾಂಧಿ ಪತ್ರ.
ಕೊರೊನಾ ದಂತಹ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ದೇಶದಲ್ಲಿ ದಿನೇ ದಿನೇ ಪೆಟ್ರೋಲ್ ಡೀಸಲ್ ದರ ಏರಿಕೆ ಯಾಗುತ್ತಿದೆ . ಕೇಂದ್ರ ಸರಕಾರ ಇಂತಹ ನಿರ್ಧಾರವನ್ನು   ತಕ್ಷಣವೆ ಕೃ ಬಿಟ್ಟು ದೇಶದ ಜನರ ಹಿತ ಕಾಪಾಡಲು ಮನವಿ ಮಾಡಿದ್ದಾರೆ. 
ಮೇಲ್ಮುಖವಾಗಿ ನೋಡಿದರೆ ಸರಕಾರ ಯಾವುದೇ ರೀತಿಯ ಸ್ಪಂದನೆ ನಿಡುತ್ತಿಲ್ಲ.ದೇಶದ ಆರ್ಥಿಕ ಸ್ಥಿತಿ  ಕಂಡುಕೇಳರಿಯದ ಪರಿಸ್ಥಿತಿ ತಲುಪಿದೆ. ಆರ್ಥಿಕ ದುಸ್ಥಿತಿಯ ಕಾರಣ ದೇಶದ ಮದ್ಯಮ ವರ್ಗ  ಉಸಿರಾಡಲು ಸಾದ್ಯ ವಾಗುತ್ತಿಲ್ಲ .ಸಣ್ಣ  ಹಾಗೂ ಡೊಡ್ದ ಉದ್ಯಮ ತೀವ್ರ ಸಂಕಷ್ಟಕ್ಕೆ ಗುರಿಯಾಗಿದೆ. ರೈತರು ಖಾರೀಫ್ ಬೆಳೆಯನ್ನು  ಬೆಳೆಯಲು ಸಹ ಆಗುತ್ತಿಲ್ಲ. 
 ಈ ನಡುವೆ ಅಂತರಾಷ್ಟ್ರೀಯ ಕಚ್ಚಾ ತೈಲ ಧಾರಣೆ ಶೇಕಡಾ 9ರಷ್ಟು ಕುಸಿದ್ದರು ತೈಲ ಬೆಲೆ ಏರಿಸಿ ದೇಶ ವಾಸಿಗಳಿಗೆ ಗಾಯದ ಮೇಲೆ ಬರೆ ಏಳೆಯುತ್ತಿದ್ದಾರೆ.ಈ ಸಮಯದಲ್ಲಿ ಯಾವುದೇ ಲಾಭದ ನಿರೀಕ್ಷೆ ಇಲ್ಲದೆ,ದೇಶದ ಹಿತಕ್ಕಾಗಿ ಕಾರ್ಯ ನಿರ್ವಹಿಸಬೇಕು ಮತ್ತು ಕಳೆದ ಆರು ವರ್ಷದಲ್ಲಿ ಐತಿಹಾಸಿಕ ಸರ್ವಕಾಲಿಕ ದರ ಇಳಿಮುಖವಾಗಿದ್ದರು ಅದರ ಪ್ರಯೋಜನ ದೂರೆಯುತ್ತಿಲ್ಲ . ಕೇವಲ ಸರಕಾರದ ಬೋಕ್ಕಸ ತುಂಬಿಸಿಕೊಳ್ಳಲು ನೋಡುತ್ತಿದೆ ದೇಶದ ಜನರ ಹಿತ್ತಾಸಕ್ತಿ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಹಾಗೆ ವರ್ತಿಸುತ್ತಿದ್ದಾರೆ ಎಂದು ಖಾರವಾಗಿ ಕುಟುಕ್ಕಿದ್ದಾರೆ. 
ಅಂಕಿ ಅಂಶಗಳ ಪ್ರಕಾರ ಪೆಟ್ರೋಲ್ ಮೇಲಿನ ಸುಂಕ ಶೇಕಡಾ 258ರಷ್ಟು ಹೆಚ್ಚಳಮಾಡಿದು ಹಾಗೂ ಬರೋಬ್ಬರಿ ಶೇಕಡಾ 820ರಷ್ಟು ಡೀಸಲ್ ಮೇಲೆ ಏರಿಸಿ ಬಿಟ್ಟಿದ್ದಾರೆ. ಡೀಸಲ್ ಮೇಲಿನ ಸುಂಕ ಹೆಚ್ಚಳದಿಂದ ಮೂಲಭೂತ, ದಿನ ಬಳಕೆ, ಅಗತ್ಯ ವಸ್ತುಗಳ ಮೇಲಿನ ಬೆಲೆಯು ಸಹ ಏರುತ್ತದೆ. ಸರಾಸರಿ  ಪೆಟ್ರೋಲ್ 23.78ರೂ ಹಾಗೂ ಡೀಸಲ್  28.37 ರೂ ಲೆಕ್ಕದಲ್ಲಿ ಏರಿದೆ.
 ಈ ಪತ್ರದಲ್ಲಿ ಸೋನಿಯಾ ಗಾಂಧಿ ಅವರು ನಿಮ್ಮ ಸರಕಾರ ಅಧಿಕಾರದ  ಚುಕ್ಕಾಣಿ ಏರಿದ ದಿನದಿಂದಲ್ಲು   ಗಣನೀಯವಾಗಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ. ಆದರು ನಿಮ್ಮ ಬಿಜೆಪಿ ಸರಕಾರ ದೇಶದ ಜನರಿಗೆ ಯಾವುದೇ ಕೂಡುಗೆ ನೀಡಿಲ್ಲ ಆರ್ಥಿಕವಾಗಿ ಜನರಿಗೆ ಸಾಕಷ್ಟು ಪೆಟ್ಟು ನೀಡುತ್ತಲೆ ಇದೆ . ಇದರಿಂದ ಸರಕಾರ ಒಟ್ಟು 2,600,000 ಕೋಟಿ ಅಷ್ಟು ಹೆಚ್ಟುವರಿ ಹಣ ಸಂಗ್ರಹ ಮಾಡಿದೆ . ಲಕ್ಷಾಂತರ ಜನ ದೇಶದೆಲ್ಲಡೆ ಕೊರೊನಾ ಪರಿಣಾಮ ಉದ್ಯೋಗ ನಷ್ಟ ಹಾಗೂ ದಿನದ ಊಟಕ್ಕು ಪರದಾಡುವಂತಾಗಿದೆ . ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕೇಂದ್ರ ಕೂಡಲೆ ಧಾವಿಸಿ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದಿದ್ದಾರೆ. ಸನ್ನಿವೇಶ ಹೀಗೆ ಮುಂದುವರೆದರೆ ಪರಿಣಾಮ ಮತ್ತಷ್ಟು ಹದಗೆಡಲಿದೆ. ಈ ಮೂಲಕ ನಾನು ನಿಮ್ಮಲ್ಲಿ ತಾಕೀತು ಮಾಡುವುದೇನೆಂದರೆ ಸ್ವಾವಲಂಬಿ ಭಾರತ ಕನಸು ಹೊತ್ತಿರುವ ನೀವು ನೇರವಾಗಿ ಹಣವನ್ನು ಕೈಗೆ ತಲುಪಿಸಿದರೆ ದೇಶದಲ್ಲಿರುವ ಜನರಿಗೆ ಉಪಯೋಗವಾಗುತ್ತದೆ ಇಲ್ಲವಾದರೆ ಮತ್ತಷ್ಟು ಆರ್ಥಿಕವಾಗಿ ಹಿಂಜರಿಯುತ್ತಾರೆ.