ಬಂಧಿತ ಭಾರತೀಯ ಅಧಿಕಾರಿಗಳು ಇಸ್ಲಾಮಾಬಾದ್ ನಲ್ಲಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ ಪಾಕಿಸ್ತಾನ....

ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ಹೈ ಕಮಿಷನ್ ನ ಉದ್ಯೋಗಿಗಳು, ತಮ್ಮನ್ನು ಪಾಕಿಸ್ತಾನ ಪೊಲೀಸರು ವಿನಾಕಾರಣ ಬಂಧಿಸಿ ತಮ್ಮ ಅಧಿಕೃತ ಕಾರಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಆದರೆ, ಪಾಕಿಸ್ತಾನದ ಅಧಿಕಾರಿಗಳು ಬಂಧಿತರಾಗಿದ್ದ ಹೈಕಮಿಷನ್ ಅಧಿಕಾರಿಗಳು ರಾಶ್ ಡ್ರೈವಿಂಗ್ ಮಾಡಿ, ಪಾದಚಾರಿಗಳಿಗೆ ಗುದ್ದಿದ್ದಾರೆ, ಮತ್ತು ನಕಲಿ ಕರೆನ್ಸಿಯನ್ನು ಸಾಗಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.

ಅನುಮಾನವೆಂದರೆ, ಅಧಿಕಾರಿಗಳು ನಾಪತ್ತೆಯಾಗಿ ಸುಮಾರು 6 ಗಂಟೆಗಳ ನಂತರ ಅಂದರೆ ಮಧ್ಯಾಹ್ನ 2:05ಕ್ಕೆ ಇಸ್ಲಾಮಾಬಾದ್ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ. ಇನ್ನು ಆ ಎಫ್.ಐ.ಆರ್ ನಲ್ಲಿ ಗಾಯಗೊಂಡ ವ್ಯಕ್ತಿಯ ಹೆಸರನ್ನಾಗಲಿ, ಪ್ರತ್ಯಕ್ಷದರ್ಶಿಗಳ ಹೆಸರನ್ನಾಗಲಿ ಅಥವಾ ಗಾಯಗೊಂಡಿರುವವರನ್ನು ದಾಖಲಿಸಿದ ಆಸ್ಪತ್ರೆಯ ಹೆಸರನ್ನಾಗಲಿ ದಾಖಲಿಸಿಲ್ಲ.

ವಿಯೆನ್ನಾ ಸಮಾವೇಶದ ಆರ್ಟಿಕಲ್ 37'ರ ಅಡಿಯಲ್ಲಿ, ಇಬ್ಬರು ಬಂಧಿತರು ರಾಜತಾಂತ್ರಿಕ ವಿನಾಯಿತಿ ಪಡೆಯುವುದರಿಂದ ಅವರ ವಿರುದ್ಧದ ಪ್ರಕರಣವನ್ನು ವಜಾಮಾಡಲಾಗಿದೆ.