ಪಾಕಿಸ್ತಾನದಲ್ಲಿ ಹಿಂದೂ ದೇಗುಲ ನೀರ್ಮಾಣಕ್ಕೆ ಚಾಲನೆ
ಪಾಕಿಸ್ತಾನದಲ್ಲಿ ಹಿಂದೂ ದೇಗುಲ ನೀರ್ಮಾಣಕ್ಕೆ ಚಾಲನೆ ನೀಡಲಾಗಿದೆ.
ಇಸ್ಲಾಮಾಬಾದ್ ನಗರದಲ್ಲಿ 10ಕೋಟಿ ವಚ್ಚದಲ್ಲಿ ಹಿಂದೂ ದೇವಾಲಯ ನಿರ್ಮಾಣ. 20ಸಾವಿರ ಚದರ ಅಡಿ ಜಾಗದಲ್ಲಿ ಕೃಷ್ಣನ ದೇವಾಲಯ ನಿರ್ಮಿಸಲಾಗುತ್ತಿದೆ. ದೇವಾಲಯದ ಸಂಪೂರ್ಣ ಖರ್ಚು -ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಧಾರ್ಮಿಕ ವ್ಯವಹಾರಗಳ ಸಚಿವ ಪಿರ್ ನೂರುಲ್ ಹಖ್ ಖಾದ್ರಿ ತಿಳಿಸಿದ್ದಾರೆ.
ಪಾಕಿಸ್ತಾನ ಸರ್ಕಾರದ ಮಾನವ ಹಕ್ಕುಗಳ ಸಂಸದೀಯ ಕಾರ್ಯದರ್ಶಿ ಲಾಲ್ ಚಾಂದ್ ಮಾಹಿ ದೇವಾಲಯದ ಶಂಕುಸ್ಥಾಪನೆ ನೆರವೇರಿಸಿದರು. 1947ರ ಸ್ವಾತಂತ್ರ್ಯ ಪೂರ್ವದಲ್ಲಿ ಇಸ್ಲಾಮಾಬಾದ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಹಲವಾರು ಹಿಂದೂ ದೇವಾಲಯ ಇದ್ದವು , ಪ್ರಸ್ತುತವಿರುವ ದೇಗುಲಗಳು ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ.
ಇಸ್ಲಾಮಾಬಾದ್ ಪ್ರದೇಶದಲ್ಲಿ ಎರಡು ದಶಕಗಳಲ್ಲಿ ಹಿಂದೂಗಳ ಜನಸಂಖ್ಯೆಯೂ ಹೆಚ್ಚಿದೆ. ಹೀಗಾಗಿ ದೇವಾಲಯದ ಅಗತ್ಯವು ಇತ್ತು ಎಂದು ತಿಳಿಸಿದರು.
ದೇವಾಲಯ ನಿರ್ಮಿಸಲು ರಾಜಧಾನಿ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ 2017 ರಲ್ಲಿ ಇಸ್ಲಾಮಾಬಾದ್ಪಂಚಾಯತ್ಗೆ ನಿವೇಶನ ಹಂಚಿಕೆಯಾಗಿತ್ತು.ಆದರೆ, ಅನುಮತಿ ಪಡೆಯುವುದು ಸೇರಿದಂತೆ ವಿವಿಧ ಕಾರಣಗಳಂದ ದೇವಾಲಯ ನಿರ್ಮಾಣ ವಿಳಂಬವಾಗಿತ್ತು. ಈಗ ಕಾರ್ಯ ವೇಗ ಪಡೆದಿದೆ