ಪಾಕಿಸ್ತಾನದಲ್ಲಿ ಸಿಖ್ ಯುವಕನ ಬರ್ಬರ ಹತ್ಯ.!!

ಪೇಶಾವರ/ನವದೆಹಲಿ:- ಪಾಕಿಸ್ತಾನದಲ್ಲಿರುವ ಸಿಖ್‌ ಧರ್ಮ ಸಂಸ್ಥಾಪಕ ಗುರುನಾನಕ್‌ ಅವರ ಜನ್ಮ ಸ್ಥಳ ನಾನಕಾನ ಸಾಹಿಬ್‌ನಲ್ಲಿ ಸಿಖ್ಖರ ಮೇಲಿನ ದಾಳಿಯ ಬೆನ್ನಲ್ಲೇ, ಪಾಕ್‌ನ ಪೇಶಾವರದಲ್ಲಿ ಸಿಖ್‌ ಯುವಕನೊಬ್ಬನನ್ನು ಭಾನುವಾರ ರಾತ್ರಿ ಹತ್ಯೆಗೈಯಲಾಗಿದೆ. ಈ ಘಟನೆ ಬಗ್ಗೆ ತೀವ್ರವಾಗಿ ಖಂಡಿಸಿರುವ ಭಾರತ, ಈ ದುಷ್ಕೃತ್ಯವೆಸಗಿದವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪಾಕ್‌ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಹತ್ಯೆಗೀಡಾದ ಸಂತ್ರಸ್ತನನ್ನು ರವೀಂದರ್‌ ಸಿಂಗ್‌(25) ಎಂದು ಗುರುತಿಸಲಾಗಿದೆ. ಈತ ಪಾಕಿಸ್ತಾನದ ಮೊದಲ ಸಿಖ್‌ ಸಮುದಾಯದ ಸುದ್ದಿ ವಾಚಕ ಹರ್ಮಿತ್‌ ಸಿಂಗ್‌ರ ಸಹೋದರ. ಖೈಬರ್‌ ಪಖ್ತೂಂಖ್ವಾದಲ್ಲಿರುವ ವಾಸವಿರುವ ರವೀಂದರ್‌, ತನ್ನ ಮದುವೆಯ ವಸ್ತುಗಳ ಖರೀದಿಗಾಗಿ ಪೇಶಾವರಕ್ಕೆ ಆಗಮಿಸಿದ್ದ. ಈ ಸಂದರ್ಭದಲ್ಲಿ, ಅಪರಿಚಿತ ವ್ಯಕ್ತಿಯಿಂದ ಬರ್ಬರವಾಗಿ ಕೊಲೆಗೀಡಾಗಿದ್ದಾನೆ.

ಈ ನಡುವೆ ಸಿಖ್‌ ಯುವಕನ ಹತ್ಯೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆ ವಕ್ತಾರರು, ‘ಗುರಿಯಾಗಿಸಿಕೊಂಡು ನಡೆಸುವ ಇಂಥ ಪ್ರಚಲಿತ ಘಟನೆಗಳಿಗೆ ತಕ್ಷಣವೇ ಪಾಕಿಸ್ತಾನ ಕಡಿವಾಣ ಹಾಕಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.