ಸಿಲಿಕಾನ್ ಸಿಟಿಯಲ್ಲಿ ಮಿಸ್ ಎಂಡ್ ಮೀಸ್ಸೇಸ್ ರೆಸ್ಟೋರೆಂಟ್...

ಮಹಿಳೆಯರಿಂದ, ಮಹಿಳೆಯರಿಗಾಗಿ ಮಹಿಳೆಯರುಗೋಸ್ಕರ ದೇಶದಲ್ಲೇ ಮೊದಲ ರೆಸ್ಟೋರೆಂಟ್ ಜತೆಗೆ ಲಂಚ್ ಬಾರ್ ಸಿಲಿಕಾನ್ ಸಿಟಿಯಯಲ್ಲಿ ಆರಂಭವಾಗಿದೆ. "ಮಿಸ್ ಅಂಡ್ ಮಿಸ್ಸೆಸ್" ಎಂಬ ಈ ರೆಸ್ಟೋರೆಂಟ್ ಬ್ರಿಗೇಡ್ ರೋಡ್ ನಲ್ಲಿ ಆರಂಭವಾಗಿದೆ. ಈ ರೆಸ್ಟೋರೆಂಟ್ ನ ವಶೇಷ ಎಂದರೆ ಪಾರ್ಕಿಂಗ್ ಸಿಬ್ಬಂದಿಯಿಂದ ಹಿಡಿದು, ಕ್ಯಾಷಿಯರ್ ಗಳು,ಬಾಣಸಿಗರು, ಬೌನ್ಸರ್, ಮಾಲೀಕರು ಹೇಗೆ ಎಲ್ಲರೂ ಮಹಿಳೆಯರೇ.

25 ವರ್ಷದ ಎಂಜಿನಿಯರಿಂಗ್ ಪದವೀಧರೆ ಪಂಜೂರಿ ವಿ. ಶಂಕರ್ ರೆಸ್ಟೋರೆಂಟ್ ನ ಎಂಡಿ.
ಎಂಜಿನಿಯರಿಂಗ್, ವೈದ್ಯೇ, ವಕೀಲೆ ಮತ್ತಿತರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಮಾನ ಮನಸ್ಕ  ಯುವತಿಯರನ್ನು ಒಟ್ಟಾಗಿಸಿಕೊಂಡು ತಮ್ಮದೇ ಗಳಿಕೆಯ ಹಣವನ್ನು ಹೂಡಿಕೆ ಮಾಡಿ ಮಿಸ್ ಆಂಡ್ ಮಿಸ್ಸೆಸ್ ರೆಸ್ಟೋರೆಂಟ್ ಆರಂಭ ಮಾಡಿದ್ದರೆ.

ಮಹಿಳೆಯರಿಗೆ ಸುರಕ್ಷವಾದ ಜಾಗ ಹಾಗೂ ಕಳ್ಳ ಕಣ್ಣುಗಳ ಕೆಟ್ಟ ದೃಷ್ಟಿಯ ಮುಜಾಗರ ಇಲ್ಲ.ಕುಣಿದು ಕೂಪಳಿಸುವುದರ ಜೊತೆಗೆ ಇಷ್ಟ ಪಟ್ಟ ಊಟ, ತಿಂಡಿ,ಪಾನಿಯನ್ನು ಸವಿಯಬಹುದು.