ಇಂದು ಕರ್ನಾಟಕ ಬಂದ್ : ಸರೋಜಿನಿ ಮಹಿಷಿ ವರದಿ ಜಾರಿಗೆ ಕನ್ನಡ ಸಂಘಟನೆಗಳ ಆಗ್ರಹ.
ಬೆಂಗಳೂರು : ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಇಂದು ಕನ್ನಡ ಸಂಘಟನೆಗಳು ರಾಜ್ಯಾದ್ಯಂತ ಬಂದ್ ಗೆ ಕರೆ ನೀಡಿವೆ.
ಇವತ್ತಿನ ಬಂದ್ ಗೆ ಟ್ಯಾಕ್ಸಿ ಹಾಗೂ ಕ್ಯಾಬ್ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಲಿದೆ.ಆದರೆ ಮೆಟ್ರೋ ಹಾಗೂ ಬಿಎಂಟಿಸಿ ಬಸ್ ಗಳು ಎಂದಿನಂತೆ ಸಂಚರಿಸಲಿವೆ.
ಇನ್ನು ಬಂದ್ ಗೆ ಹಲವು ಪ್ರಮುಖ ಸಂಘಟಬೆಗಳು ಬೆಂಬಲ ನೀಡದೇ ಇರುವುದರಿಂದ ಇವತ್ತಿನ ಬಂದ್ ಬಿಸಿ ಅಷ್ಟಾಗಿ ತಟ್ಟುವ ಸಾಧ್ಯತೆ ಇಲ್ಲ.
ಕೆಎಸ್ ಆರ್ಟಿಸಿ ನೌಕರರ ಸಂಘಟನೆ , ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಸೇನೆ ಲಾರಿ ಮಾಲೀಕರ ಸಂಘ, ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಚಳುವಳಿ ಪಕ್ಷ ಬಂದ್ ನಿಂದ ದೂರ ಉಳಿದಿವೆ.
ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜ್ ಗಳು, ಹೊಟೇಲ್ ಗಳು, ಪೆಟ್ರೋಲ್ ಬಂಕ್ ಹಾಗೂ ಮಾಲ್ ಗಳು ಎಂದಿನಂತೆ ವಹಿವಾಟು ನಡೆಸಲಿವೆ.