: ಚಿತ್ರರಂಗಕ್ಕೆ ಪೈರಸಿ ಹೊಸತೇನಲ್ಲ....!
ಚಿತ್ರರಂಗವು ಮೊದಲಿನಿಂದಲೂ ಎದುರಿಸುತಿರುವ ಸಮಸ್ಯೆ ಪೈರಸಿ . ನಿರ್ಮಾಪಕರು ಚಿತ್ರಕ್ಕಾಗಿ ಹಣ ಹೂಡಿಕೆ ಮಾಡುವುದಲ್ಲದೇ ಚಿತ್ರವನ್ನು ತೆರೆಮೇಲೆ ತರುವಷ್ಟರಲ್ಲಿ ಹರಸಾಹಸ ಮಾಡಿರುತ್ತಾರೆ. ಆದರೆ ಜನರು ಇತ್ತೀಚೆಗೆ ಚಿತ್ರವನ್ನ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟೆಲಿಗ್ರಾಂ ಹಾಗೂ ಬೇರೆಬೇರೆ ಕೆಲವು ಅಪ್ಲಿಕೇಶನ್ ಗಳಲ್ಲಿ ಚಿತ್ರಗಳನ್ನ ಸೋರಿಕೆ ಮಾಡುತಿದ್ದು ಇದರಿಂದ ನಿರ್ಮಾಪಕರು ರೋಸಿಹೋಗಿದ್ದಾರೆ.
ಲಾಕ್ ಡೌನ್ ನಂತರ ಕಳೆದ ಶುಕ್ರವಾರ ತೆರೆ ಕಂಡ ಪುರ್‌ಸೋತ್ರಾಮಾ ಚಿತ್ರಕ್ಕೂ ಸಹ ಇಂತಹದ್ದೆ ಸಮಸ್ಯೆ ಯೊಂದು ಎದುರಾಗಿದೆ. ಚಿತ್ರ ಬಿಡುಗಡೆಯಾದ ಎರಡೆ ದಿನಕ್ಕೆ ಕೆಲವು ಅಪ್ಲೀಕೇಶನ್ ಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ಸೋರಿಕೆ ಆಗುತ್ತಿದೆ ಎಂದು ಚಿತ್ರದ ನಿರ್ಮಾಪಕಿ ಮಾನಸ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಒಂದು ಚಿತ್ರವನ್ನ ಎಷ್ಟೋ ಕನಸುಗಳೊಂದಿಗೆ ಹಲವು ಜನರ ಶ್ರಮದೊಂದಿಗೆ ತೆರೆಮೇಲೆ ತಂದಿರುತ್ತಾರೆ. ಹೀಗಿರುವಾಗ ಚಿತ್ರವನ್ನ ಚಿತ್ರಮಂದಿರಗಳಿಗೆ ಹೋಗಿ ನೋಡದೆ ಯಾವುದೊ ಅಪ್ಲೀಕೇಶನ್ ಗಳ ಮೂಲಕ ಡೌನ್ ಲೋಡ್ ಮಾಡಿಕೊಂಡು ನೋಡಿದರೆ ನಿರ್ಮಾಪಕರ ಹಣ ಹಾಗೂ ತಂತ್ರಜ್ಞಾನರ ಶ್ರಮವು ಸಹ ವ್ಯರ್ಥವಾದಂತೆ ಆಗುತ್ತದೆ ಎಂದು ನಿರ್ಮಾಪಕಿಯಾದ ಮಾನಸ ಬೇಸರ ವ್ಯಕ್ತಪಡಿಸಿದರು. ಅದಕ್ಕೆ ಸಂಬಂಧಪಟ್ಟ ಸೈಬರ್ ಕ್ರೈಂ ಗೆ ದೂರು ದಾಖಲಿಸಿದ್ದೇವೆ .
ಮುಂಬರುವ ಚಿತ್ರಗಳಿಗೆ ಈ ರೀತಿಯ ಸಮಸ್ಯೆ ಉಂಟಾಗಬಾರದು. ಪೈರಸಿ ಮಾಡುವವರ ವಿರುದ್ಧ ಮುಂಬರುವ ದಿನಗಳಲ್ಲಿ ಕಠಿಣವಾದ ಕ್ರಮ ತೆಗೆದುಕೊಳ್ಳಬೇಕು ಹಾಗೂ ಟೆಲಿಗ್ರಾಮ್ ಅಪ್ಲಿಕೇಶನ್ ಬ್ಯಾನ್ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ವರದಿ: ಸಂಜಯ್. ಕೊಳ್ಳಿ ರಾಯಚೂರು