ಮೇ 3ರವರೆಗೆ ಲಾಕ್ ಡೌನ್ ಮುಂದುವರಿಕೆ: ಪ್ರಧಾನಿ ನರೇಂದ್ರ ಮೋದಿ .
ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿಯವರ ದೇಶದಲ್ಲಿ ಹೇರಲಾಗಿದ್ದ 21 ದಿನಗಳ ಲಾಕ್‌ಡೌನ್ ಅವಧಿ ಇಂದು ಮುಕ್ತಾಯವಾಲಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿ ಮೇ.3ರವರೆಗೆ ಲಾಕ್ ಡೌನ್ ವಿಸ್ತರಿಸುವ ನಿರ್ಣಯ ಕೈಗೊಂಡಿರುವುದಾಗಿ ಹೇಳಿದರು.
ಲಾಕ್‌ಡೌನ್ ಸಮಯದಲ್ಲಿ ಇಡೀ ದೇಶ ಜನತೆ ತೋರಿದ ಸಂಯಮ ಹಾಗೂ ಪ್ರಬುದ್ಧತೆಯನ್ನು ಕೊಂಡಾಡಿದ ಪ್ರಧಾನಿ ಮೋದಿ, ನಮ್ಮ ಒಗ್ಗಟ್ಟಿನ ಪ್ರದರ್ಶನ ಕಂಡು ಇಡೀ ವಿಶ್ವವೇ ಬೆರಗಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮುಂದಿನ ಒಂದು ವಾರ ನಮ್ಮ ಮುಂದೆ ಬಹು ದೊಡ್ಡ ಹೊಣೆ ಇದೆ. ನಾವು ಎಷ್ಟು ಕಟ್ಟುನಿಟ್ಟಾಗಿ ಅನುಸರಿಸುತ್ತೇವೆ. ಕರೋನಾದಿಂದ ಮುಕ್ತರಾಗುತ್ತೇವೆ. ಕರೋನಾ ಅಗ್ನಿ ಪರೀಕ್ಷೆಗೆ ಎಲ್ಲರೂ ಸಹಕರಿಸಬೇಕು ಎಂದು ಮೋದಿ ಮನವಿ ಮಾಡಿದ್ದಾರೆ. ಏಪ್ರಿಲ್ 20ರ ಬಳಿಕ ಸಡಿಲಿಕೆ ಮಾಡಬಹುದು. ಆದರೆ ಪ್ರತಿ ಗಲ್ಲಿ, ಹಳ್ಳಿ, ತಾಲೂಕು ಕರೋನಾ ಹಾಟ್ ಸ್ಪಾಟ್ ಆಗದಂತೆ ತಡೆಯೋಣ. ಇಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಹೊಸ ಕೇಸ್ ಪತ್ತೆಯಾಗದಿದ್ದರೆ ಮಾತ್ರ ಬಂದ್ ಸಡಿಲಿಕೆ ಮಾಡಲಾಗುವುದು. ಹೊಸ ಮಾರ್ಗಸೂಚಿ ಪ್ರಕಟ ಮಾಡಲಾಗುವುದು. ರೈತರಿಗೆ ಕಷ್ಟ ಆಗದಂತೆ ಕ್ರಮ, ಆಸ್ಪತ್ರೆ, ಮೆಡಿಕಲ್ ಸೌಲಭ್ಯ ಹೆಚ್ಚಿಸಲಾಗುತ್ತಿದೆ.
ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ದಿಟ್ಟ ಕ್ರಮ ತೆಗೆದುಕೊಂಡಿದೆ. ಹೀಗಾಗಿ ಕರೋನಾ ರೋಗ ಹರಡಲು ಅವಕಾಶ ಸಿಕ್ಕಿಲ್ಲ. ವಿದೇಶದಿಂದ ಬಂದವರನ್ನು ಪರೀಕ್ಷೆ ಮಾಡಿದ್ದೆವು. ಭಾರತ ಇಲ್ಲಾ ದೇಶಗಳಿಗಿಂತ ವೇಗವಾಗಿ ಕಠಿಣ ಕ್ರಮ ತೆಗೆದುಕೊಂಡಿದೆ. ಹೀಗಾಗಿ ಬೇರೆ ದೇಶದ ಜೊತೆ ತುಲನೆ ಸರಿ ಅಲ್ಲ. ಒಂದು ವೇಳೆ ಭಾರತ ಬೇರೆ ದೇಶದಂತಾದರೆ ಇಲ್ಲಿಯ ಸ್ಥಿತಿ ಯೋಚಿಸುವುದಕ್ಕೂ ಸಾಧ್ಯವಿಲ್ಲ. ಸೀಮಿತ ಸೌಲಭ್ಯದಲ್ಲಿ ಉತ್ತಮ ಸಾಧನೆ ಮಾಡಿದ್ದೇವೆ.
ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಮಾಡಿದ ಏಳು ಮನವಿ:
A. ಲಾಕ್‌ಡೌನ್ ಆದೇಶ ಕಟ್ಟುನಿಟ್ಟಾಗಿ ಪಾಲಿಸಬೇಕು.
B.ಮನೆಯ ಹಿರಿಯ ಸದಸ್ಯರ ಆರೋಗ್ಯದತ್ತ ಹೆಚ್ಚನ ಗಮನ.
C. ಆಯುಷ್ಯ ಮಂತ್ರಾಲಯದ ಸಲಹೆಯನ್ನು ಕಡ್ಡಾಯವಾಗಿ ಪಾಲಿಸಿ.
D. ಸಂಕಷ್ಟದಲ್ಲಿರುವ ಬಡವರ ನೆರವಿಗೆ ಬನ್ನಿ.
E. ವೈದ್ಯ ಸಮುದಾಯ, ಪೊಲೀಸ್ ಇಲಾಖೆ ಹಾಗೂ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಎಲ್ಲರನ್ನೂ ಗೌರವದಿಂದ ಕಾಣಬೇಕು.
F. ಆರೋಗ್ಯ ಸೇತು ಮೊಬೈಲ್ ಆಪ್ ಡೌನ್ಲೋಡ್ ಮಾಡಿ.
G. ಸಹೋದ್ಯೋಗಿಗಳೊಂದಿಗೆ ಸಂವೇದನೆ ಇರಲಿ, ಯಾರನ್ನೂ ಕೆಲಸದಿಂದ ತೆಗೆಯಬೇಡಿ.