ಸೌದಿ-ರಷ್ಯಾ ನಡುವೆ ದರ ಸಮರ: ಕುಸಿದ ಕಚ್ಚಾತೈಲ ದರ

21 ವರ್ಷದಲ್ಲಿ ಕನಿಷ್ಠ ಮಟ್ಟಕ್ಕೆ ಕಚ್ಚಾತೈಲ ಬೆಲೆ ಕುಸಿದಿದ್ದು, ಒಂದು ಬ್ಯಾರಲ್ ನ ಬೆಲೆ  31 ಡಾಲರ್ ಗೆ ತಲುಪಿದ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದೆ.

ಕೆಲ ದಿನಗಳಿಂದ ರಷ್ಯಾ ಮತ್ತು ಸೌದಿ ಅರೇಬಿಯಾದ ನಡುವೆ ನಡೆಯುತ್ತಿರುವ ದರ ಸಮರಾದ ಪರಿಣಾಮ ತೈಲ ವಲಯ ಕುಸಿಯುತ್ತಿದ್ದು, ಷೇರು ಮಾರುಕಟ್ಟೆಯಲ್ಲೂ ಇದರ ಪರಿಣಾಮ ಬೀರಿದೆ, ವರ್ಷದಲ್ಲೇ ಗರಿಷ್ಠ ಕುಸಿತ ಉಂಟಾಗಿದ್ದು  ಹೂಡಿಕೆದಾರರು ಸಾದ್ಯ ಆತಂಕದಲ್ಲಿದ್ದಾರೆ.

ಭಾರತದಲ್ಲಿ  ಜಿ ಎಸ್ ಟಿ ಹಣ ಸಂಗ್ರಹದಲ್ಲಿ ಏರಿಕೆಯಾಗದ ಕಾರಣ ಸರ್ಕಾರ ವಿತ್ತೀಯ ಕೂರತೆಯನ್ನು ಅನುಭಾವಿಸುತ್ತಿತ್ತು, ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆಯ ಇಳಿಕೆಯಾಗುತ್ತಿರುವ ಲಾಭ ಸರಕಾರದ ಬೊಕ್ಕಸಕ್ಕೆ ಹೊಗಲಿದ್ದು, ಗ್ರಾಹಕರಿಗೆ ಬೆಲೆ ಇಳಿಕೆಯ ಸಿಹಿ ದೊರೆಯುವುದು ಅನುಮಾನವಾಗಿದೆ. ಆದರೆ ಈ ಲಾಭವನ್ನು ಇತರ ವರ್ಗಗಳ ಮುಖಾಂತರ ಸರ್ಕಾರ ಗ್ರಾಹಕನಿಗೆ ವರ್ಗಹಿಸಬಹುದು ಎಂದು ಹೇಳಲಾಗುತ್ತಿದೆ.