ಕೊರೊನಾ ನಿಯಂತ್ರಣಕ್ಕೆ ಸೋನಿಯಾಗಾಂಧಿ ಪಂಚ ಸೂತ್ರಗಳು....

ಸೋಮವಾರ ಪ್ರಧಾನಿ ಮೋದಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗೆ ಕರೆ ಮಾಡಿ ಕೊರೊನಾ ನಿಯಂತ್ರಣದ ಕುರಿತು ಚರ್ಚಿಸಿದ್ದರು. ಈ ಹಿನ್ನಲೆ ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಸೋನಿಯಾ ಗಾಂಧಿ ಕೊರೊನಾ ವಿರುದ್ಧದ ಹೋರಾಟಕ್ಕೆ ಹಣ ಉಳಿತಾಯ ಮಾಡಲು  ಪ್ರಮುಖ 5 ಸಲಹೆಗಳನ್ನು ನೀಡಿದ್ದಾರೆ...ಹಾಗದರೆ ಕಾಂಗ್ರೆಸ್ ಅಧ್ಯಕ್ಷೆ ನೀಡಿದ ಸಲಹೆಗಳು ಏನು ಅಂತಾ ನೋಡೋಣ.

ಮೊದಲನೆಯದಾಗಿ ಎರಡು ವರ್ಷಗಳ ಕಾಲ ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ಉದ್ದಿಮೆಗಳ ಜಾಹಿರಾತಿನ ಮೇಲೆ ನಿಷೇಧ ವಿಧಿಸಲು ಸೂಚಿಸಿದ್ದಾರೆ.

ನಗರಗಳ ಸೌಂದರ್ಯ ಹೆಚ್ಚಿಸುವ 20,000 ಕೋಟಿಯ ಸೆಂಟ್ರಲ್ ವೀಸ್ಟಾ ಯೋಜನೆಯನ್ನು
ರದ್ದು ಮಾಡುವಂತೆ ಎರಡನೇ ಸಲಹೆ ನೀಡಿದ್ದಾರೆ.

ಸಂಬಳ ,ಪಿಂಚಣಿ ಸೇರಿದಂತೆ ಸರ್ಕಾರದ ಬದ್ಧ ವೆಚ್ಚದಲ್ಲಿ ಶೇ.30 ಕಡಿತಗೊಳಿಸುವಂತೆಯೂ ಹೇಳಿದ್ದಾರೆ. 

ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲಾ ಸದಸ್ಯರ ವಿದೇಶಿ ಭೇಟಿಯನ್ನು ತಡೆ ಹಿಡಿಯುವಂತೆ ನಾಲ್ಕನೇ ಸಲಹೆ ನೀಡಿದ್ದಾರೆ.

ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವ ದೃಷ್ಠಿಯಿಂದ ಪಿಎಂ ಕೇರ್ಸ್ ನಿಧಿಯನ್ನು ಪ್ರಧಾನ ಮಂತ್ರಿ ರಾಷ್ಟೀಯ ಪರಿಹಾರ ನಿಧಿಗೆ ವರ್ಗಾಯಿಸುವಂತೆ ಹೇಳಿದ್ದಾರೆ.

ಇದೇ ಸಂಧರ್ಭದಲ್ಲಿ  ಒಂದು ವರ್ಷಗಳ ಕಾಲ ಸಂಸದರ ವೆತನದಲ್ಲಿ ಶೇ.30 ನ್ನು ಕಡಿತಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸೋನಿಯಾ ಗಾಂಧಿ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.

ದೇಶದ ಜನರ ಹಿತದೃಷ್ಠಿಯಿಂದ ಹಾಗೂ ಕೊರೊನಾ ಸಂಕಷ್ಟವನ್ನು ಪರಿಣಾಮಕಾರಿಯಾಗಿ ಎದುರಿಸಲು ತಮ್ಮ ಸಲಹೆಗಳನ್ನು ಪರಿಗಣಿಸುವಂತೆ ಸೋನಿಯಾಗಾಂಧಿ ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ.