ರಾಜ್ಯದಲ್ಲಿ ಬಂಡವಾಳ ಹೂಡಲು ಮುಕ್ತ ಅವಕಾಶ: ಸಿ.ಎಂ.ಯಡಿಯೂರಪ್ಪ

ಕರ್ನಾಟಕವನ್ನು ಅಭಿವೃದ್ಧಿ ಪತದೆಡೆಗೆ ಕರೆದೊಯ್ಯುವ ನಿಟ್ಟಿನಲ್ಲಿ 2020 ರ ನವೆಂಬರ್ ನಲ್ಲಿ "ವಿಶ್ವ ಬಂಡವಾಳ ಹೂಡಿಕೆ ಸಮಾವೇಶ" ನಡೆಸಲು ರಾಜ್ಯಸರ್ಕಾರ ತೀರ್ಮಾನಿಸಿದ್ದು, ಉದ್ಯಮಿಗಳೆಲ್ಲರೂ ಈ ಸಮಾವೇಶಕ್ಕೆ ಆಗಮಿಸಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ದವೋಸ್ ನ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ  ಮನವಿ ಮಾಡಿದರು.

ಕೇಂದ್ರ ಕೈಗಾರಿಕಾ ಸಚಿವ ಪಿಯುಷ್ ಗೊಯಲ್ ಮಂಡಿಸಿದ 'ಸ್ಟ್ರ್ಯಾಟೆಜಿಕ್ ಔಟ್ ಲುಕ್ ಇಂಡಿಯಾ ವಿಷಯದ ಕುರಿತು ನಡೆದ ಸಂವಾದದಲ್ಲಿ ಭಾಗಿಯಾಗಿ ಮಾತನಾಡಿದ ಸಿಎಂ, ದೇಶದ ಆರ್ಥಿಕತೆ ಚಟುವಟಿಕೆಯಲ್ಲಿ ರಾಜ್ಯದ ಪಾಲು ಬಹುಮುಖ್ಯವಾಗಿದ್ದು, ಪ್ರಧಾನಿ ಮೋದಿಯವರ 5 ಟ್ರಿಲಿಯನ್ ಆರ್ಥಿಕ ಕನಸನ್ನು ನನಸು ಮಾಡಲು ರಾಜ್ಯ ಸರ್ಕಾರ ಪ್ರಯತ್ನ ಮಾಡಬೇಕು ಎಂದರು.

ಕರ್ನಾಟಕವು ಬಂಡವಾಳ ಹೂಡಿಕೆಗೆ ನೆಚ್ಚಿನ ತಾಣವಾಗಿದೆ, ರಾಜ್ಯದಲ್ಲಿ ಈಗಾಗಲೇ ಹಲವು ಅಂತಾರಾಷ್ಟ್ರೀಯ ಕಂಪನಿಗಳು ನೆಲೆ ಕಂಡಿದ್ದು, ರಾಜ್ಯದ ಜೆಡಿಪಿ ದೇಶದ ಜಿಡಿಪಿಗಿಂತ ಹೆಚ್ಚಿನ ಪ್ರಮಾಣದಲ್ಲಿದೆ, ಇದರಿಂದ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಯಾವುದೇ ತೊಡಕು ಆಗದಂತೆ ನೋಡಿಕೊಳ್ಳುವುದಾಗಿ ಬಂಡವಾಳಶಾಯಿಗಳಿಗೆ ಬಿಸ್ ವೈ ಭರವಸೆ ನೀಡಿದರು.