ಅಮೆರಿಕಾ ಪಡೆಗಳ ಮೇಲೆ ದಾಳಿ ಮಾಡಿದ ಇರಾನ್...
ವಾಷಿಂಗ್ಟನ್: ಇರಾಕ್‌ನಲ್ಲಿರುವ ಅಮೆರಿಕ ಹಾಗೂ ಮಿತ್ರಪಡೆಗಳ ಎರಡು ವಾಯುನೆಲೆಗಳ ಮೇಲೆ ಇರಾನ್ ಹನ್ನೆರಡಕ್ಕೂ ಕ್ಷಿಪಣಿಗಳ ಮೂಲಕ ದಾಳಿ ಮಾಡಿದೆ.
ಈ ಕ್ಷಿಪಣಿಗಳನ್ನು ಇರಾನ್‌ನಿಂದ ಉಡಾಯಿಸಿರುವುದು ಸ್ಪಷ್ಟ ಹಾಗೂ ಅಲ್ ಅಸಾದ್ ಮತ್ತು ಇಬ್ರಿಲ್‌ನಲ್ಲಿರುವ ಅಮೆರಿಕ ಹಾಗೂ ಮಿತ್ರಪಡೆಗಳ ವಾಯುನೆಲೆಗಳ ಮೇಲೆ ಗುರಿ ಮಾಡಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪರಿಸ್ಥಿತಿ ಮೇಲೆ ತೀವ್ರ ನಿಗಾ ಇಟ್ಟಿದ್ದು, ರಾಷ್ಟ್ರೀಯ ಭದ್ರತಾ ತಂಡದ ಸಲಹೆ ಪಡೆಯುತ್ತಿದ್ದಾರೆ ಎಂದು ಶ್ವೇತಭವನದ ಪ್ರತ್ಯೇಕ ಪ್ರಕಟನೆ ಹೇಳಿದೆ. ಇರಾನ್ ಸೇನಾಧಿಕಾರಿ ಕಾಸಿಂ ಸುಲೈಮಾನಿ ಬಾಗ್ದಾದ್‌ನಲ್ಲಿ ಕಳೆದ ವಾರ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಯುದ್ಧ ಪರಿಸ್ಥಿತಿ ತಲೆದೋರಿದೆ.
ಕನಿಷ್ಠ ಒಂಬತ್ತು ರಾಕೆಟ್‌ಗಳು, ಇರಾಕ್‌ನಲ್ಲಿ ವಿದೇಶಿ ಪಡೆಗಳ ನೆಲೆಯಾದ ಅಲ್ ಅಸಾದ್ ವಾಯುನೆಲೆಗೆ ಅಪ್ಪಳಿಸಿವೆ ಎಂದು ಸ್ಥಳೀಯ ಭದ್ರತಾ ಪಡೆ ಪ್ರಕಟಿಸಿದೆ. ಇದನ್ನು ಇರಾನ್ ದೃಢಪಡಿಸಿದ್ದು, ಇಸ್ಲಾಮಿಕ್ ರಿಪಬ್ಲಿಕ್, ಕ್ಷಿಪಣಿ ದಾಳಿ ಆರಂಭಿಸಿದೆ ಎಂದು ಅಧಿಕೃತ ಟಿವಿ ಪ್ರಕಟಿಸಿದೆ.