ಮಂಗಳನ ಅಂಗಳಕ್ಕೆ ನೌಕೆ ಇಳಿಸಿದ್ದು ಬೆಂಗಳೂರಿನ ಡಾ .ಸ್ವಾತಿ ಮೋಹನ್
ಮಂಗಳನ ಅಂಗಳಕ್ಕೆ ನಾಸಾ ಕಳಿಸಿದ್ದ ಪರ್ಸಿವರೆನ್ಸ್ ರೋವರ್(1026 KG ತೂಕ ) ನೌಕೆಯು ಯಶಸ್ವಿಯಾಗಿ ಕೆಂಪು ಗ್ರಹದಲ್ಲಿ ಇಳಿದಿದೆ . ಮಂಗಳ ಗ್ರಹದಲಿ ಜೀವಿಗಳು ವಾಸಿಸುತ್ತಿದ್ದವೇ ಎಂಬುದನ್ನು ಪತ್ತೆಹಚ್ಚಲು ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಕಳಿಸಿದ ಪರ್ಸಿವರೆನ್ಸ್ ರೋವರ್ ನೌಕೆ ಯಶಸ್ವಿಯಾಗಿ ಮಂಗಳನ ಅಂಗಳಕ್ಕೆ ತಲುಪಿದೆ .
ನಾಸಾದಲ್ಲಿ ವಿಜ್ಞಾನಿ ಆಗಿರುವ ಕನ್ನಡತಿ ಡಾ . ಸ್ವಾತಿ ಮೋಹನ್ ಪರ್ಸಿವರೆನ್ಸ್ ರೋವರ್ ನೌಕೆ ಯಶಸ್ವಿ ಲ್ಯಾಂಡಿಂಗ್ ಮಾಡುವಲ್ಲಿ ಡಾ . ಸ್ವಾತಿ ಮೋಹನ್ ಪ್ರಮುಖ ಕಾರ್ಯ ನಿರ್ವಹಿಸಿದ್ದಾರೆ .ಅಮೆರಿಕದಲ್ಲಿ ನೆಲಸಿರುವ ಮೋಹನ್ ಮತ್ತು ಜ್ಯೋತಿ ದಂಪತಿಗಳ ಮಗಳೆ ಸ್ವಾತಿ , ಮೂಲತ ಬೆಂಗಳೂರಿನವರು . ಸ್ವಾತಿ ನಾಸಾದಲ್ಲಿ ಗೈಡೆನ್ಸ್ ,ನ್ಯಾವಿಗೇಷನ್ ಮತ್ತು ಕಂಟ್ರೋಲ್ಸ್ (ಜಿ ಏನ್ & ಸಿ ) ಎಂಬ ವೈಜ್ಞಾನಿಕ ವಿಭಾಗದ ಮುಖ್ಯಸ್ಥೆಯಾಗಿದ್ದಾರೆ .
ಕೆಂಪು ಗ್ರಹದ ಅಂಗಳಕ್ಕೆ ಯಶಸ್ವಿಯಾಗಿ ರೋವರ್ ತಲುಪಿದೆ ಅಂತ ಮೊದಲು ದೃಢಪಡಿಸಿದ್ದು , ಟಚ್ ಡೌನ್ ಕನ್ಫರ್ಮ್ಡ್ ಎಂದು ತಿಳಿಸಿದ್ದು ಬೆಂಗಳೂರು ಮೂಲದ ಡಾ .ಸ್ವಾತಿ ಮೋಹನ್ (38)ರವರು . ಗೈಡೆನ್ಸ್ ,ನ್ಯಾವಿಗೇಷನ್ ಮತ್ತು ಕಂಟ್ರೋಲ್ಸ್ (ಜಿ ಏನ್ & ಸಿ ) ಬಾಹ್ಯಾಕಾಶ ನೌಕೆಯ ಕಣ್ಣು ಮತ್ತು ಕಿವಿ ಎಂದು ಸ್ವಾತಿ ತಿಳಿಸಿದರು .
ವರದಿ :ಬಂಡಯ್ಯ ಹಿರೇಮಠ