ದೇಶದ ಬಗ್ಗೆ ಹೇಳಿಕೆ ನೀಡುವಾಗ ಮಾತಿನ ಮೇಲೆ ಗಮನವಿರಲಿ ಮಾಜಿ ಪಿಎಂ ಮನಮೋಹನ್ ಸಿಂಗ್

ದೇಶದ ಭದ್ರತೆ ಗಡಿಗೆ ಸಂಬಂಧಿಸಿದಂತೆ ಘೋಷಣೆ ಮಾಡುವಾಗ ಮತ್ತು ಹೇಳಿಕೆ ನೀಡುವಾಗ ಬಳಸುವ ಪದಗಳ ಬಗ್ಗೆ ಪ್ರಧಾನಿಯು ಬಹಳ ಎಚ್ಚರಿಕೆ ವಹಿಸಬೇಕು. ಚೀನಾ ಅದರ ನಿಲುವನ್ನು ಸಮರ್ಥಿಸಿಕೂಳ್ಳಲು ತಮ್ಮ ಹೇಳಿಕೆಯನ್ನು ಬಳಸಿಕೂಳ್ಳದಂತೆ,ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಚರವಹಿಸಬೇಕು . ಈ ಪರಿಸ್ಥಿಯನ್ನು ನಿಭಾಯಿಸಲು ಮತ್ತು ಇದು ಇನ್ನಷ್ಟು ಉಲ್ಬಣಿಸದಂತೆ ನೋಡಿಕೂಳ್ಳಲು ಸರ್ಕಾರದ ಎಲ್ಲಾ ಅಂಗಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಈ ಅಪಾಯದ ಎದರು ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕಾದ ಸಂದರ್ಭ ಇದು. ತಪ್ಪು ಮಾಹಿತಿ ನೀಡುವುದು ರಾಜತಾಂತ್ರಿಕ ಮತ್ತು ಪ್ರಬಲ ನಾಯಕತ್ವಕ್ಕೆ ತಕ್ಕುದ್ದಲ್ಲ ಎಂಬುದನ್ನು ಸರ್ಕಾರಕ್ಕೆ ನೆನಪಿಸಬಯಸುತ್ತೇನೆ. ಹೂಗಳಿಕೆ ಮತ್ತು ಸುಳ್ಳು ಹೇಳಿಕೆಗಳಿಂದ ಸತ್ಯವನ್ನು ಮುಚ್ಚಿಡಲು ಸಾಧ್ಯಾವಿಲ್ಲ. ದೇಶದ ಗಡಿ ರಕ್ಷಣೆಗಾಗಿ ಹುತಾತ್ಮರಾದ ಸೈನಿಕರ ತ್ಯಾಗಕ್ಕೆ ಪ್ರತಿಫಲ ದೂರೆಯುವಂತೆ ಸರ್ಕಾರ ನೋಡಿಕೂಳ್ಳಬೇಕು. ಇವುಗಳಲ್ಲಿ ಏನು ಕಡಿಮೆಯಾದರೂ , ಅದು ದೇಶದ ಜನರಿಗೆ ಬಗೆದ ಐತಿಹಾಸಿಕ ದ್ರೋಹವಾಗುತ್ತದೆ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.
ನಮ್ಮ ನೆಲವನ್ನು ಯಾರು ಅತಿಕ್ರಮಿಸಿಲ್ಲ, ನಮ್ಮ ಯಾವುದೇ ಗಡಿಠಾಣೆಯನ್ನು ಯಾರೂಬ್ಬರೂ ವಶಪಡಿಸಿಕೂಂಡಿಲ್ಲ. ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಹೇಳಿಕೆ ಭಾರಿ ವಿವಾದವನ್ನು ಸೃಷ್ಟಿಸಿದೆ, ಪ್ರಧಾನಿಯ ಈ ಹೇಳಿಕೆಯನ್ನು ವಿರೋಧ ಪಕ್ಷಗಳು ಟೀಕಿಸುತ್ತಿವೆ, ಸೇನಾ ಮುಖ್ಯಸ್ಥರು, ವಿದೇಶಾಂಗ ಸಚಿವಾಲಯ ಮತ್ತು ರಕ್ಷಣಾ ಸಚಿವರು ನೀಡಿದ್ದ ಹೇಳಿಗಳು ಹಾಗೂ ಪ್ರಧಾನಿಯ ಹೇಳಿಕೆ ವ್ಯತಿರಿಕ್ತವಾಗಿವೆ, ಚೀನಾದ ಎದುರು ಮೋದಿ ಶರಣಾಗಿದ್ದಾರೆ ಎಂಬುದು ವಿರೋಧ ಪಕ್ಷಗಳ ಆರೋಪ ವಿವಾದಕ್ಕೆ ಕಾರಣವಾಗಿದೆ