
ಕೆ ಲ್ ರಾಹುಲ್ ಸದ್ಯ ಟೀಮ್ ಇಂಡಿಯಾದಲ್ಲಿ ಸಕಲಕಲಾವಲ್ಲಭ..
ಹೌದು ಕೆ ಲ್ ರಾಹುಲ್ ಈಗ ಮುಟ್ಟಿದ್ದೆಲ್ಲ ಚಿನ್ನ ಓಪನರ್ ಯಾಗಿ ಟಿ20ಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಟೀಮ್ ಇಂಡಿಯಾದಲ್ಲಿ ತಮ್ಮ ಸ್ಥಾನ ಖಚಿತ ಪಡಿಸಿಕೊಂಡಿದ್ದಾರೆ. ಐಸಿಸಿ ಪ್ರಕಟಿಸಿದ t20 ಬ್ಯಾಟ್ಸ್ಮನ್ ರ್ಯಾಂಕಿಂಗ್ ನಲ್ಲಿ ಎರಡನೇ ಸ್ಥಾನಕ್ಕೆ ಜಿಗಿಯುವ ಮೂಲಕ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.
ಕಿವೀಸ್ ನೆಲದಲ್ಲಿ ಟಿ20 ಸರಣಿಯಲ್ಲಿ ಕೆ ಲ್ ರಾಹುಲ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆಯುವ ಮೂಲಕ ಭಾರತೀಯ ಮೊದಲ ಆಟಗಾರ ಎನಿಸಿದ್ದಾರೆ. ಈಗಾಗಲೇ ಬ್ಯಾಟಿಂಗ್ನಲ್ಲಿ ಕಮಲ್ ಮಾಡಿದಂತೆ , ವಿಕೆಟ್ ಹಿಂದೆನಿಂತು ಸೈ ಎನಿಸಿಕೊಂಡಿದ್ದಾರೆ, ಇದಲ್ಲದೆ ಟ್ವೆಂಟಿ-20ಯಲ್ಲಿ ನಾಯಕಾಗಿಯೂ ಮಿಂಚಿದ್ದಾರೆ.
ಈಗ ಸದ್ಯ ಟೀಮ್ ಇಂಡಿಯಾ ಹಾಗೂ ಕಿವೀಸ್ ವಿರುದ್ಧ ಏಕದಿನ ಸರಣಿ ಆಟವಾಡುತ್ತಿದ್ದು, ಕೆ ಲ್ ರಾಹುಲ್ ಆರನೇ ಕ್ರಮಾಂಕದಲ್ಲಿ ಬಂದು ಭರ್ಜರಿ 88 ರನ್ ಸಿಡಿಸುವ ಮೂಲಕ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸಿದ್ದ ಎಂದು ಮ್ಯಾನೇಜ್ಮೆಂಟ್ ಗೆ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ.