ತಾವರಗೇರಾ ಪಟ್ಟಣದಲ್ಲಿ ಶ್ರೀಶಶಿಧರಸ್ವಾಮಿ ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭ....
ತಾವರಗೇರಾ ಪಟ್ಟಣದಲ್ಲಿ ಶ್ರೀಶಶಿಧರಸ್ವಾಮಿ ವಿದ್ಯಾನಿಕೇತನ ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಶಾಲಾ ಆವರಣದಲ್ಲಿ 2019-20ನೇ ವಾರ್ಷಿಕೋತ್ಸವ ಸಮಾರಂಭವು ನಡೆಯಿತು.ಉದ್ಘಾಟಕರಾಗಿ ಆಗಮಿಸಿದ್ದ ಕಾವೇರಿ ಶ್ಯಾವಿ ಆಡಳಿತ ವೈದ್ಯಾಧಿಕಾರಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ಮಕ್ಕಳ ಭವಿಷ್ಯರೂಪಿಸುವ ನಿಟ್ಟಿನಲ್ಲಿ ಗುರುಗಳ ಪಾತ್ರವೂ ದೊಡ್ಡದು ಇದರಲ್ಲಿ ಪೊಷಕರ ಪಾತ್ರವೂ ದೊಡ್ಡದು.ವಿದ್ಯಾರ್ಥಿಗಳ ಇಚ್ಚೆಯಂತೆ,ಆಚಾರ ವಿಚಾರಗಳನ್ನು ಹಂಚಿಕೊಳ್ಳಲು ಪ್ರಯತ್ನವೂ ಪಡೆಯಿರಿ ಹಾಗೂ ಗುರುಗಳು ಒಬ್ಬ ವಿದ್ಯಾರ್ಥಿ ಬುದ್ಧಿವಂತ ಇನ್ನೊಬ್ಬನ ವಿದ್ಯಾರ್ಥಿಯ ಬುದ್ಧಿವಂತ ಕಡಿಮೆ ಎಂದು ಭೇದಭಾವವಿಲ್ಲದೆ ಮಕ್ಕಳಿಗೆ ಶಿಕ್ಷಣವನ್ನು ನೀಡಿ.ಸಮಾಜದಲ್ಲಿ ಪೊಷಕರು ಮಕ್ಕಳಿಗೆ ಗುರುಗಳು,ಹಿರಿಯರಿಗೆ ಗೌರವಿಸಬೇಕು ಹೆಚ್ಚಿನಕಡೆ ವಿದ್ಯಾಬ್ಯಾಸ ಗಮನವನ್ನು ಕೊಡಬೇಕು ಎಂದು ಹೇಳಿದರು.
ತಂದೆ ತಾಯಿಗಳು ಮಕ್ಕಳಿಗೆ ಊಟವು ಮನೆಯ ಊಟ ಇರಬೇಕು.ಆದರೇ ಚಾಕ್ಯೂಲಟ,ಕುರಕುರಿ,ಇತರ ವಸ್ತುಗಳನ್ನು ಬಿಟ್ಟು ಮನೆಯ ಊಟ ಹಸಿತರಿಕಾರಿ,ಕಾಳು, ರೊಟ್ಟಿ,ಚಪಾತಿ ಜೊತೆ ಹಣ್ಣುಹಂಪಲು ಕೊಡಿ.ಟಿವಿ ಮಾಧ್ಯಮ ಹಾಗೂ ಮೊಬೈಲ್ ಫೋನ್ ಬಳಕೆ ಕಡಿಮೆ ಮಾಡಿ ಓದಿ ಜೀವನದಲ್ಲಿ ಭವಿಷ್ಯವನ್ನು ಕಟ್ಟಿಕೊಳ್ಳಲು ಸುಲಭವಾಗಿ ಮುಖ್ಯವಾಗಿದೆ.ಮಕ್ಕಳನ್ನಸ್ನೇಹತರಂತೆ ಕಾಣಿರಿ ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಾಗರಾಜ್.ಎಚ್.ಸಂಗನಾಳ ಮಾತನಾಡಿ, ಹಣ,ಆಸ್ತಿಕ್ಕಿಂತ ಜ್ಞಾನವು ಮುಖ್ಯವಾಗಿದೆ.ಬಾಲಕ,ಪಾಲಕ ಹಾಗೂ ಶಿಕ್ಷಕ ಮುಖ್ಯ ಸಂಗಮವಾಗಿದೆ. .ಮಲ್ಲನಗೌಡ ಓಲಿ ಕಾರ್ಯದರ್ಶಿ ಮಾತನಾಡಿ ಶಿಕ್ಷಣದಲ್ಲಿ ಮಹತ್ವದ ಪಾತ್ರ ಗುರುಗಳಿಗೆ ಸಿಮಿತವಾಗದೆ ತಂದೆ ತಾಯಿಗಳಿಗೆ ಸಿಮಿತವಾಗಿರುತ್ತದೆ. ಆಂಗ್ಲಮಾಧ್ಯಮ ಇಂಗ್ಲಿಷ್ ಹೆಚ್ಚು ಮುಖ್ಯವಾಗಿದೆ.ಸ್ಥಳೀಯ ಹಾಗೂ ಸುತ್ತಮುತ್ತಲಿನ ನಿಮ್ಮ ಎಲ್ಲರ ಆಶಯ ಮೇರೆಗೆ ಆಂಗ್ಲಮಾಧ್ಯಮ ಚಾಲ್ತಿಯಲ್ಲಿದೆ.ಏಳು ಜನ ಶಿಕ್ಷಕರು ಹೊಂದಿದ್ದು ಪಾಲಕರು ಮಕ್ಕಳ ಸಹಕಾರ ಮುಖ್ಯವಾಗಿದೆ.ಶಿಕ್ಷಕರು ಹೆಚ್ಚಾಗಿ ಎಲ್ಲ ಮಕ್ಕಳ ವಿದ್ಯಾದಾನ ನೀಡುವುದು ಕರ್ತವ್ಯವಾಗಿದೆ.ಶಿಕ್ಷಕರು ಅಲ್ಲದೆ ಪೋಷಕರು ಕೂಡ ಮನೆಯಲ್ಲಿ ಮಕ್ಕಳಿಗೆ ಟಿವಿ ಹಾಗು ಮೊಬೈಲಿಂದ ದೂರವಿರಿಸಿ ಹೆಚ್ಚಿನ ಶಿಕ್ಷಣಕ್ಕೆ ಒತ್ತು ಕೊಡಬೇಕಾಗಿದೆ. ಮನೆಯಲ್ಲಿ ಆಂಗ್ಲ ಮಾಧ್ಯಮ ವಿಷಯಕ್ಕೆ ಬಿಟ್ಟು ಕನ್ನಡಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಹಾಗು ಶರಣಪ್ಪ ಐಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನಮ್ಮ ಸಂಸ್ಥೆಯು 7 ಅಂಗಸಂಸ್ಥೆ ಹೊಂದಿದ್ದು ಸ್ವಂತ ಕಟ್ಟಡವನ್ನು ಹೊಂದಿದೆ.ಈ ಸಂಸ್ಥೆಯಲ್ಲಿ ಶೇಕಡ 75 ರಷ್ಟು ವಿದ್ಯಾರ್ಥಿಗಳು ಸರ್ಕಾರಿ ಹುದ್ದೆಯಲ್ಲಿ ಹೊಂದಿದ್ದು ಉಳಿದ ವಿದ್ಯಾರ್ಥಿಗಳು ಎಲ್ಲಾ ರಂಗದಲ್ಲಿ ಮುಂದುವರಿದಿದ್ದಾರೆ.
ಈ ಸಮಾರಂಭದಲ್ಲಿ ಡಾಕ್ಟರ್ ಕಾವೇರಿ ಶ್ಯಾವಿ ಹಾಗೂ ನಾಗರಾಜ್.ಎಚ್. ಸಂಗನಾಳ ಪ್ರಾಚಾರ್ಯರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಪಂಪಣ್ಣ ಚಿಟ್ಟಿ,ಹಿರಿಯ ಪತ್ರಕರ್ತರು ವಿ.ಆರ್ ತಾಳಿಕೋಟಿ,ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಕುಬೇರಪ್ಪ ಕ್ಯಾಡೆದ್ ,ಮಲ್ಲಿಕಾರ್ಜುನಗೌಡ ವಿಠಲಾಪುರ, ಲಕ್ಷ್ಮಣಪ್ಪ ಸಿರವಾರ್,ಎಸ್.ಎಸ್.ವಿ ಕಾಲೇಜಿನ ಪ್ರಾಚಾರ್ಯರು ವೆಂಕೋಬಣ್ಣ ಭಾವಿತಾಳ, ಸಂಸ್ಥೆಯ ಗುರುಗಳು ಹಾಗೂ ಪಾಲಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ ಶರಣಪ್ಪ ಕುಂಬಾರ ತಾವರಗೇರಾ