ಸರೋಜಿನಿ ಮಹಿಷಿ ವರದಿ ಆಗ್ರಹಿಸಿ 13ರಂದು ಕರ್ನಾಟಕ ಬಂದ್.!!

ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಫೆಬ್ರವರಿ 13 ರಂದು ಕರ್ನಾಟಕ ಬಂದ್'ಗೆ ಕನ್ನಡಪರ ಸಂಘಟನೆಗಳು ಬೆಂಬಲ ನೀಡಿವೆ ಎಂದು
ಕರ್ನಾಟಕ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ನಾಗೇಶ್ ಹೇಳಿದ್ದಾರೆ

ಹೇಗೆ ಯಾವ ರೀತಿ ನಡೆಯಲ್ಲಿದೆ.?

ಕಳೆದ  97 ದಿನಗಳಿಂದ ಮೌರ್ಯ ವೃತದ ಧರಣಿ ನಡೆಸುತ್ತಿದ್ದೇವೆ . ಧರಣಿಯಲ್ಲಿ ಹಲವಾರು ರಾಜಕಾರಣಿಗಳು ಚಿತ್ರರಂಗದ ಹಲವರು ಮಠಾಧೀಶರು ವಿವಿಧ ಕನ್ನಡಪರ ಸಂಘಟನೆಗಳು ಮುಖಂಡರು ಬಂದ್ಗೆ ಬೆಂಬಲ ಸೂಚಿಸಿದ್ದಾರೆ.
ಫೆಬ್ರವರಿ 13ರ ಬೆಳಿಗ್ಗೆ  ಬೆಂಗಳೂರಿನ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಬೃಹತ್ ರ್ಯಾಲಿ ನಡೆಸಲಿದ್ದೇವೆಯೆಂದು ಕನ್ನಡಪರ ಸಂಘಟನೆಗಳು ಹೇಳಿಕೆ ನೀಡಿವೆ.

ರಾಜ್ಯ ಸರ್ಕಾರದ ನಿಷ್ಕಾಳಜಿ ವರ್ತನೆ ಹಾಗೂ ಅನುಷ್ಠಾನಕ್ಕೆ ವಿಳಂಬ ಧೋರಣೆಯಿಂದಾಗಿ  ಕರ್ನಾಟಕ ಬಂದ್ ಮಾಡುವುದು ಅನಿವಾರ್ಯವಾಗಿದೆ ಕರ್ನಾಟಕ ಬಂದ್ ಗೆ ರಾಜ್ಯ ಮಹಿಳಾ ಒಕ್ಕೂಟ, ಕನ್ನಡಪರ ಸಂಘಟನೆ, ಲಾರಿ ಮಾಲೀಕರ ಒಕ್ಕೂಟ, ಬಿಎಂಟಿಸಿ,ಆಟೋ ಹಾಗೂ ಕಾರು ಚಾಲಕರ, ಸಂಘದ ಸಮಿತಿಗಳು ಸಮ್ಮತಿ ಸೂಚಿಸಿದ್ದಾರೆ.


ಈ ವರದಿ ಜಾರಿಯಾದರೆ ಉಪಯೋಗವೇನು?

ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ಓದಿದ ಸ್ಥಳೀಯರಿಗೆ ಕರ್ನಾಟಕದಲ್ಲಿ ಉದ್ಯೋಗ ಮರೀಚಿಕೆಯಾಗಿದೆ.
ಆದ್ದರಿಂದ ಈ ವರದಿ ಜಾರಿಯಾದರೆ ಕರ್ನಾಟಕದಲ್ಲಿ  ಕನ್ನಡ ಮಾಧ್ಯಮದಲ್ಲಿ ಓದಿದ ಸ್ಥಳೀಯರಿಗೆ ಎಲ್ಲಾ ಕ್ಷೇತ್ರದ ಉದ್ಯೋಗದಲ್ಲಿ ಅವಕಾಶ ಸಿಗಲಿದೆ. ಲಕ್ಷಾಂತರ ಯುವಕರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ, ಅನ್ಯರಾಜ್ಯದ ಅನ್ಯಭಾಷಿಕರು ಕರ್ನಾಟಕದಲ್ಲಿ ಕೆಲಸ ಪಡೆದು ದಬ್ಬಾಳಿಕೆ ಪ್ರವೃತ್ತಿ ಮುಂದುವರಿಸಿದ್ದಾರೆ, ಆದ್ದರಿಂದ ಈ ವರದಿ ವರದಿ ಅನುಷ್ಠಾನವಾಗಲೇ  ಬೇಕು ಹಾಗೂ 50 ಸಾವಿರಕ್ಕೂ ಅಧಿಕ ಮಂದಿ ಫೆಬ್ರವರಿ 13ರಂದು ರ್ಯಾಲಿಯಲ್ಲಿ ಭಾಗಿಯಾಗಿದ್ದಾರೆ ಹಾಗೂ ಬೆಂಬಲ ಸೂಚಿಸಲಿದ್ದಾರೆ.

ಅಂದು ನಡೆಯುವ ಬೃಹತ್ ರ್ಯಾಲಿಯಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಲಲಿದ್ದಾರೆಂದು ಹೇಳಿದರು. ಮಾತೃಭಾಷೆ ಕನ್ನಡದಲ್ಲಿ ವಿದ್ಯಾಭ್ಯಾಸ ಮಾಡಿದ ಸ್ಥಳೀಯರಿಗೆ ಕರ್ನಾಟಕದಲ್ಲೇ ಉದ್ಯೋಗ ಸಿಗುತ್ತಿಲ್ಲ. ಲಕ್ಷಾಂತರ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಸರೋಜಿನಿ ಮಹಿಷಿ ವರದಿ ಜಾರಿ ಮಾಡಬೇಕು. ಕನ್ನಡಿಗರಿಗೆ ಉದ್ಯೋಗ ಲಭ್ಯವಾಗುವಂತೆ ಮಾಡಬೇಕೆಂದು ಆಗ್ರಹಿಸಿದರು.