ಪೊಗರು ಮೂರು ದಿನಗಳಲ್ಲಿ 35 ಕೋಟಿ ಗಳಿಕೆ . ಕೆಜಿಫ್- 2. ತೆಲುಗು ರೈಟ್ಸ್ 65 ಕೋಟಿ ಗೆ ಮಾರಾಟ..!
ಕನ್ನಡ ಚಿತ್ರರಂಗದ ವ್ಯಾಪಾರ ವಿಸ್ತಾರಗೊಂಡಿದೆ . ಕನ್ನಡ ಚಿತ್ರಗಳಿಗೆ ದೇಶಾದ್ಯಂತ ಬಾರಿ ಬೇಡಿಕೆ ಸೃಷ್ಟಿ ಆಗಿದೆ . ಕೊರೊನ ನಂತರ ಬಿಡುಗಡೆ ಆಗಿರುವ ಬಿಗ್ ಬಜೆಟ್ ಸಿನಿಮಾ ಪೋಗೊರು ಭರ್ಜರಿ ಎಂಟ್ರಿ ಪಡೆದುಕೊಂಡಿದೆ . ಮೊದಲ ದಿನ 10 ಕೋಟಿ 5 ಲಕ್ಷ ಗಳಿಕೆ ಮಾಡಿ ದಾಖಲೆ ಬರೆದಿದ್ದು , ಎರಡನೇ ದಿನಕ್ಕೆ 28 ಕೋಟಿ ದಾಟಲಿದೆ .
ಆಂಧ್ರ ಮತ್ತು ತೆಲಂಗಾಣದಲ್ಲಿ ಎರಡು ದಿನಕ್ಕೆ 3 ಕೋಟಿ ,ತಮಿಳುನಾಡಿನಲ್ಲಿ 1.5 ಕೋಟಿ , ಮೂರು ದಿನಗಳಲ್ಲಿ 35 ಕೋಟಿ ದಾಟಲಿದೆ ಹಾಗು . ಡಬ್ಬಿಂಗ್ ಮತ್ತು ಟಿವಿ ರೈಟ್ಸ್ ಗಳಿಂದ ಪೊಗರು ಚಿತ್ರ 50 ಕೋಟಿ ತನಕ Business ಆಗಬಹುದು ಎಂದು ನಿರ್ಮಾಪಕ ಬಿ ಕೆ ಗಂಗಾಧರ ನಿರೀಕ್ಷಿಸಿದ್ದಾರೆ .
ಇನ್ನು ಕೆಜಿಫ್ 2 ಬಗ್ಗೆ ಹೇಳೊದಾದರೆ ಚಿತ್ರದ ನಿರ್ಮಾಪಕರಾದ ವಿಜಯ ಕಿರಗಂದೂರು 70 ಕೋಟಿಗೆ ಬೇಡಿಕೆ ಇಟ್ಟಿದ್ದರು . ತೆಲಗು ವಿತರಣೆ ಹಕ್ಕನ್ನು ತೆಲಗು ಚಿತ್ರ ನಿರ್ಮಾಪಕ ದಿಲರಾಜು 65 ಕೋಟಿಗೆ ವ್ಯವಹಾರ ಪಕ್ಕ ಮಾಡಿಕೊಂಡು ಮುಂಗಡವಾಗಿ ನಿರ್ಮಾಪಕರಿಗೆ ಹಣ ನೀಡಿದ್ದಾರೆ ಎನ್ನಲಾಗಿದೆ . ಆಂಧ್ರ ಮತ್ತು ತೆಲಂಗಾಣದ ವಿತರಣೆ ಹಕ್ಕು ದಿಲ್ ರಾಜು ಪಡೆದುಕೊಂಡಿದ್ದಾರೆ . ಕನ್ನಡ ನಟನ ಸಿನಿಮಾ ಈ ರೀತಿ ವ್ಯವಹಾರ ಮಾಡುತ್ತಿರುವದು ನೋಡಿ ಟಾಲಿವುಡ್ ಕೂಡ ನಿಬ್ಬೆರಗಾಗಿದೆ .
ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಿಗ್ ಬಜೆಟ್ ಸಿನಿಮಾಗಳ ಸಂಖ್ಯೆ ಇನ್ನು ಇದೆ .
ವರದಿ :ಬಂಡಯ್ಯ ಹಿರೇಮಠ