ಮೊದಲನೇ ಬಾರಿಗೆ ಪೇಪರ್ ರಹಿತವಾದ ಬಜೆಟ್ ಮಂಡನೆ.

ರಾಜ್ಯ ಸಭೆಯಲ್ಲಿ, ಶಾಸಕರು ದಾಖಲೆ ಸಲ್ಲಿಸುವ ಸಲುವಾಗಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸರಿ ಸುಮಾರು ೫೦,೦೦೦ ಮೌಲ್ಯದ ಫಂಡ್ ಬಿಡುಗಡೆ ಮಾಡಿದ್ದಾರೆ. ಇನ್ಮುಂದೆ ಶಾಸಕರು ಡಿಜಿಟಲ್ ಆಗಿ ಕಾರ್ಯ ನಿರ್ವಹಿಸಬಹುದಾಗಿದ್ದು, ಪ್ರತಿಯೊಬ್ಬ ಶಾಸಕ ಐಪ್ಯಾಡ್ ನ ತೆಗೆದುಕೊಳ್ಳಬೇಕಾಗಿದೆ

ಉತ್ತರ ಪ್ರದೇಶ ಮೊದಲನೇ ರಾಜ್ಯವಾಗಿದೆ

ಪೇಪರ್ ರಹಿತವಾದ ಬಜೆಟ್ 2 ನೇ ತಾರೀಖು, ಸೋಮವಾರದಂದು  ಮಂಡನೆಯಾಗಿದ್ದು, ದೇಶದಲ್ಲಿ ಈ ರೀತಿಯ ಬಜೆಟ್ ಮಂಡಿಸುವುದರಲ್ಲಿ ಉತ್ತರ ಪ್ರದೇಶ ಮೊದಲನೇ ರಾಜ್ಯವಾಗಿದೆ. ಕೋವಿಡ್ ನಿಂದಾಗಿ ವಾಣಿಜ್ಯ ಕ್ಷೇತ್ರಕ್ಕೆ ಹೊಡೆತ ಬಿದ್ದಿದೆ. ಆದ್ದರಿಂದ ಇದನ್ನು ತಗ್ಗಿಸಲು ಮತ್ತು ೨೦೨೨ ರ ಚುನಾವಣೆಯನ್ನ ಹೊರತು ಪಡಿಸಿ ಮುಖ್ಯವಾದ ವಿಷಯಗಳತ್ತ ಗಮನಹರಿಸುವುದು ರಾಜ್ಯ ಬಜೆಟ್ ನ ಮುಖ್ಯ ಉದ್ದೇಶವಾಗಿದೆ ಎಂದು ತಜ್ಞರು  ತಿಳಿಸಿದ್ದಾರೆ.

ಬಜೆಟ್ ನ  ಮೊತ್ತ ೫೦,೦೦೦ 

ಶಾಸಕರಿಗಾಗಿ  ೫೦,೦೦೦ ಮೊತ್ತದ ಹಣವನ್ನ ಐಪ್ಯಾಡ್ ಖರೀದಿಗಾಗಿ ಮೀಸಲಿಡಲಾಗಿದೆ.ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ದಾಖಲೆಗಳನ್ನ ಹೇಗೆ ಸಲ್ಲಿಸಬೇಕೆನ್ನುವುದರ ಕುರಿತು ಶಾಸಕರಿಗೆ ತರಬೇತಿ  ನೀಡಲಾಗುತ್ತದೆ. ಉತ್ತರ ಪ್ರದೇಶದ ಸರ್ಕಾರ, ಸರ್ಕಾರ್ ಕಾ ಬಜೆಟ್ ಎನ್ನುವ ಹೊಸ ಅಪ್ಲಿಕೇಶನ್ ನ  ತಯಾರಿಸಿದ್ದು, ಆಂಡ್ರಾಯ್ಡ್ ಹಾಗು ಐಓಸ್ ವೇದಿಕೆಯಲ್ಲಿ ಲಭ್ಯವಿದೆ. 

ಸಿಬ್ಬಂದಿಗಳು ಸಹಾಯ ಮಾಡುತ್ತಾರೆ

ಇದು ಪೂರ್ಣಪ್ರಮಾಣದ ಪೇಪರ್ ರಹಿತವಾದ ಬಜೆಟ್. ಬಳಕೆಯ ವಿಚಾರದಲ್ಲಿ ಕಷ್ಟವಾದರೆ ನಮ್ಮ ಸಿಬ್ಬಂದಿಗಳು ಸಹಾಯ ಮಾಡುತ್ತಾರೆ ಎಂದು ಪ್ರಿನ್ಸಿಪಲ್ ಸೆಕ್ರೆಟರಿ ಜೆಪಿ ಸಿಂಗ್ ತಿಳಿಸಿದ್ದಾರೆ. ರಾಜ್ಯ ಸಭೆ ಅಥವಾ ರಾಜ್ಯ ಸರ್ಕಾರದ ವೆಬ್ಸೈಟ್ ಮೂಲಕ ಬಜೆಟ್ ನ ಡೌನ್ಲೋಡ್ ಮಾಡಿಕೊಳ್ಳಬಹುದೆಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 

ಬರಹ: ಶ್ರೀ ಹರ್ಷ