ಸ್ವಚ್ಛ ಸರ್ವೇಕ್ಷಣಾ ತಂಡದಿಂದ ಜನರಲ್ಲಿ ಜಾಗ್ರತಿ...
ತಾವರಗೇರಾ ಪಟ್ಟಣ ಪಂಚಾಯಿತಿ ನಗರದಲ್ಲಿ ಸ್ವಚ್ಚ ಸರ್ವೇಕ್ಷಣಾ 2020ನೇ ಸಾಲಿನ ಅಡಿಯಲ್ಲಿ ಸ್ವಚ್ಚ ಸರ್ವೇಕ್ಷಣಾ ತಂಡವು ಸಾರ್ವಜನಿಕರಿಂದ ಸ್ವಚ್ಛತೆಯ ಬಗ್ಗೆ ಮಾಹಿತಿ ಪಡೆಯಲಾಯಿತು.ಕಸವನ್ನು ಸಾರ್ವಜನಿಕ ಸ್ಥಳಗಳಲ್ಲಿ, ಬಸ್ ನಿಲ್ದಾಣ,ಮಾರುಕಟ್ಟೆ, ರಸ್ತೆ,ದೇವಸ್ಥಾನ,ಶಾಲೆ ಕಾಲೇಜು ಆವರಣದಲ್ಲಿ, ಆಸ್ಪತ್ರೆ,ಚರಂಡಿಗಳಲ್ಲಿ ಹಾಗೂ ವಿವಿಧ ಸ್ಥಳಗಳಲ್ಲಿ ಕಸವನ್ನು ಹಾಕಬಾರದು ಹಾಗೂ ತಮ್ಮಲ್ಲಿ ಉತ್ಪಾದನೆ ಆಗುವ ಕಸವನ್ನು ಡಬ್ಬಿಯಲ್ಲಿ ಇಟ್ಟುಕೊಂಡು ಕಸದ ವಾಹನಕ್ಕೆ ನೀಡಬೇಕು.ಹಾಗೂ ಕಸವನ್ನು ಎರಡು ರೀತಿಯಲ್ಲಿ ವಿಂಗಡನೆ ಮಾಡಿ ಮೊದಲನೇ ಒಣ ಕಸ, ಎರಡನೇಯದಾಗಿ ಹಸಿ ಕಸವನ್ನು ವಿಂಗಡನೆ ಮಾಡಿ ವಿಲೇವಾರಿ ಮಾಡುವ ಕಸದ ವಾಹನಕ್ಕೆ ನೀಡಬೇಕು.ಮನೆ ಮನೆಗೆ ಹಾಗೂ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಸಾರ್ವಜನಿಕರಿಂದ ಮಾಹಿತಿಯನ್ನು ಪಡೆಯಲಾಯಿತು.ಪ್ಲಾಸ್ಟಿಕ್ ಬಳಕೆ ಮಾಡಬಾರದು ಈ ಬಗ್ಗೆ ಮುಂದಿನ ದಿನಗಳಲ್ಲಿ ದಂಡವನ್ನು ಹಾಕಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ನೈರ್ಮಲ್ಯ ನಿರೀಕ್ಷಕ ಪ್ರಾಣೇಶ ಬಳ್ಳಾರಿ,ಶ್ಯಾಮೂರ್ತಿ ಕಟ್ಟಿಮನಿ,ಮೇಘಾ ಮತ್ತು ಪವಿತ್ರಾ ಭಾಗವಹಿಸಿದ್ದರು.
ವರದಿ ಶರಣಪ್ಪ ಕುಂಬಾರ ತಾವರಗೇರಾ