2 ಸಚಿವರಿಗೆ ಸಂಪುಟದಿಂದ ಗೆಟ್ ಪಾಸ್; ಹೈಕಮಾಂಡ್ ಮಹತ್ವದ ತೀರ್ಮಾನ  

ಬೆಂಗಳೂರು: ಬಹಳ ದಿನದಿಂದ ಸಾಕಷ್ಟು ಚರ್ಚೆಯಲ್ಲಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಶುಭ ಮುಹೂರ್ತ ಒದಗಿ ಬಂದಿದ್ದು. ಇದರ ಬೆನ್ನಲ್ಲೇ ಹಾಲಿ ಸಂಪುಟದಲ್ಲಿ ಇರುವ ಇಬ್ಬರು ಸಚಿವರಿಗೆ ಸಂಕಷ್ಟ ಎದುರಾಗಿದೆ. ನೂತನ ಶಾಸಕರಿಗೆ ಸಚಿವ ಸ್ಥಾನ ನೀಡುವ ಸಲುವಾಗಿ ಬಿಜೆಪಿ ವರಿಷ್ಠರು ೨ ಸಚಿವರಿಗೆ ಕೋಕ್ ನೀಡಲು ಮುಂದಾಗಿದ್ದಾರೆ. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲು ಪ್ರಮುಖ ಕಾರಣವಾದವರು ವಲಸಿಗ ಶಾಸಕರು  ಅವರ ಋಣವನ್ನು ತೀರಿಸುಲು ಹಾಗೂ ಬಿಜೆಪಿ ಪಕ್ಷದಲ್ಲಿ ಉಂಟಾಗುವ ಬಂಡಾಯ ಶಮನಗೊಳಿಸಲು ಈ  ಮಹತ್ವದ ನಿರ್ಧಾರವನ್ನು ಕೈಗಳೊಳ್ಳ್ಲಲಾಗಿದೆ ಎನ್ನಲಾಗುತ್ತಿದೆ. ಬಿಜೆಪಿ ಮೂಲಗಳ ಪ್ರಕಾರ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಅರಣ್ಯ ಸಚಿವ ಸಿ.ಸಿ.ಪಾಟೀಲ್ ಅವರಿಗೆ ಸಂಪುಟದಿಂದ ಕೋಕ್ ಕೊಡಲಾಗುತ್ತದೆ ಎಂದು ಹೇಳಲಾಗಿದೆ. ಡಿಸಿಎಂ ಲಕ್ಷ್ಮಣ್ ಸವದಿಗೆ ವಿಧಾನ ಪರಿಷತ್ ಸ್ಥಾನ ಬಹುತೇಕ ಪಕ್ಕಾ ಆಗಿದೆ ಎನ್ನಲಾಗಿದೆ.