ನಾನು ದೆವ್ವ ಆದರೆ ರಮ್ಯಾ ಮೈಯೋಳಗಡೆ ಹೋಗ್ತೀನಿ...ಸಿಂಧು ಲೋಕನಾಥ್.

ಈ ಭೂಮಿ ಮೇಲೆ ದೆವ್ವ, ಭೂತಗಳು ಇದಾವೋ, ಇಲ್ಲವೋ ಗೊತ್ತಿಲ್ಲ. ಆದರೆ ಅವುಗಳ ಕುರಿತ ಕುತೂಹಲ ಮಾತ್ರ ಎಂದಿಗೂ ಕಡಿಮೆಯಾಗಿಲ್ಲ. ನಮ್ಮ ಬಾಲ್ಯದ ದಿನಗಳಿಂದ ಹಿಡಿದು ಇಂದಿನವರೆಗೂ ದೆವ್ವದ ಕಥೆಗಳನ್ನು ಕೇಳುತ್ತಲೇ ಬೆಳೆದಿದ್ದೇವೆ. ಪ್ರತಿಯೊಬ್ಬರ ಜೀವನದಲ್ಲೂ ದೆವ್ವದ ಕುರಿತಂತೆ ಹೇಳಲು ಸಾಕಷ್ಟು ಕಥೆಗಳಿರುತ್ತವೆ. ಇನ್ನು ದೆವ್ವಗಳ ಕಥೆಯಿರುವ  ಸಾಕಷ್ಟು ಸಿನಿಮಗಳು ಸ್ಯಾಂಡಲ್ ವುಡ್ ನಲ್ಲಿ ಬಂದಿದ್ದು, ಭಯ ಹುಟ್ಟೀಸುವ ದೆವ್ವಗಳು, ಕಾಮಿಡಿ ಕಚಗುಳಿ ಇಡುವ ದೆವ್ವಗಳು, ಮಕ್ಕಳಿಗೆ ಇಷ್ಟವಾಗುವ ದೆವ್ವಗಳು ಹೀಗೆ ಎಲ್ಲಾ ರೀತಿಯ ದೆವ್ವಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಇದೇ ರೀತಿ ದೆವ್ವದ ಕತೆಯಿರುವ ಮತ್ತೊಂದು ಚಿತ್ರ ಚಂದನವನದಲ್ಲಿ ಬಿಡುಗಡೆಯಾಗಿದೆ ಅದುವೇ ಕಾಣದಂತೆ ಮಾಯವಾದನು. ಇನ್ನು ಈ ಚಿತ್ರತಂಡ ಗೌರಿಶ್ ಅಕ್ಕಿ ಸ್ಟುಡಿಯೋ ಗೆ ನೀಡಿದ ಸಂದರ್ಶನದಲ್ಲಿ ದೆವ್ವದ ಕುರಿತು ಹಲವು ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಸಿಂಧು ಲೋಕನಾಥ್ ದೆವ್ವ ಆದರೆ...

ಇನ್ನೂ ಕಾಣದಂತೆ ಮಾಯವಾದನು ಚಿತ್ರ ತಂಡದೊಂದಿಗೆ ಗೌರೀಶ್ ಅಕ್ಕಿ ಸ್ಟುಡಿಯೋ ನಡೆಸಿದ ಸಂದರ್ಶನದಲ್ಲಿ ನಿರೂಪಕ ಗೌರೀಶ್ ಅಕ್ಕಿ, ಚಿತ್ರದ ನಾಯಕಿ ಸಿಂಧು ಲೋಕನಾಥ್ ನಿಜ ಜೀವನದಲ್ಲಿ ದೆವ್ವ ಆದರೆ ಯಾರ ಮೈಯೋಳಗಡೆ ಸೇರಲು ಇಷ್ಟಪಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಂಧು, ನಾನು ಒಂದು ವೇಳೆ ದೆವ್ವ ಆದರೆ ಮೋಹಕ ತಾರೆ ರಮ್ಯಾ ಮೈಯೋಳಗಡೆ ಸೇರಲು ಇಷ್ಟಪಡುತ್ತೇನೆ ಎಂದರು. ಅವರು ಸ್ಯಾಂಡಲ್ ವುಡ್ ಕ್ವೀನ್ ಆಗಿದ್ದು ಅವರ ಮೈ ಸೇರಿಕೊಂಡರೆ ಆ ಫೀಲ್ ಅನ್ನು ಎಂಜಾಯ್ ಮಾಡಬಹುದು ಎಂದು ಹೇಳಿದರು. ಸಿಂಧು ಗೆ ಪ್ರಶ್ನೆ ಕೇಳಿದ್ದ ನಿರೂಪಕ ಗೌರೀಶ್ ಅಕ್ಕಿ ರಕ್ಷಿತಾ, ರಮ್ಯಾ ಹಾಗೂ ರಚಿತಾ ರಾಮ್ ಈ ಮೂರು ಅಯ್ಕೆಗಳನ್ನು ನೀಡಿದ್ದರು.

ದೆವ್ವವಾಗಿ ಸೂರಿ ಮೈಯೋಳಗಡೆ ಸೇರಲು ಇಷ್ಟಪಡ್ತಾರೆ ವಿಕಾಸ್...

ಜಯಮ್ಮನ ಮಗ ಚಿತ್ರದ ನಿರ್ದೇಶಕ ವಿಕಾಸ್, ಕಾಣದಂತೆ ಮಾಯವದನು ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂದರ್ಶನದ ವೇಳೆ ವಿಕಾಸ್ ಗೆ ನೀವು ನಿಜ ಜೀವನದಲ್ಲಿ ದೆವ್ವ ಆದರೆ ಯಾರ ಮೈಯೋಳಗಡೆ ಸೇರುತ್ತೀರಿ ಎಂದು ನಿರೂಪಕರು ಪಶ್ನೆ ಜೊತೆಗೆ ನಿರ್ದೇಶಕರಾದ ಸೂರಿ, ಯೋಗರಾಜ್ ಭಟ್ ಹಾಗೂ ಗುರುಪ್ರಸಾದ್ ಮೂವರನ್ನು ಆಯ್ಕೆಯಾಗಿ ನೀಡಿದರು. ವಿಕಾಸ್ ಈ ಮೂವರಲ್ಲಿ ಅಯ್ಡುಕೊಂಡಿದ್ದು ಮಾತ್ರ ನಿರ್ದೇಶಕ ಸೂರಿಯನ್ನು. ಸೂರಿ ಕಂಡರೆ ಎಲ್ಲರಿಗೂ ಸ್ವಲ್ಪ ಭಯವಿದೆ. ಹಾಗಾಗಿ ನನ್ನ ಎಲ್ಲಾ ಆಸೆಗಳನ್ನು ಸುಲಭವಾಗಿ ಈಡೇರಿಸಿಕೊಳ್ಳಬಹುದು ಎಂದು ಹೇಳಿದರು.