ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವವರಿಗೆ ಚಪ್ಪಾಳೆ ಮೂಲಕ ಧನ್ಯವಾದ ಸಲ್ಲಿಸಿದರು...

ಕುಷ್ಟಗಿಯ ಕ್ಷೇತ್ರದ ಶಾಸಕರಾದ ತಮ್ಮ ನಿವಾಸದಲ್ಲಿ ಅಮರೇಗೌಡ ಪಾಟೀಲ್  ಬಯ್ಯಾಪುರ ಹಾಗೂ ಅವರ ಕುಟುಂಬ ವರ್ಗದವರು ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ವೈದ್ಯರ ಸೈನಿಕರು,ಪೋಲಿಸ್ ಹಾಗೂ ಮಾಧ್ಯಮ ಲೋಕ ಎಲ್ಲರಿಗೂ ಸಂಜೆ 5 ಗಂಟೆಗೆ  ಚಪ್ಪಾಳೆ ಮೂಲಕ  ಧನ್ಯವಾದಗಳನ್ನು ಅರ್ಪಿಸಿದರು ಹಾಗೂ ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೋನ ವಿರುದ್ಧ ಜನತಾ ಕರ್ಫ್ಯೂ ಉತ್ತಮ ಸಂಪೂರ್ಣ ಬೆಂಬಲ ದೊರೆತಿದ್ದು ಆದರೆ ಪ್ರಧಾನಮಂತ್ರಿ ಕೊಟ್ಟ ಜನತಾ ಕರ್ಫ್ಯೂಗೆ ಜನರು ಮನೆಯಲ್ಲಿ ಕುಳಿತಿದ್ದು ಜನತಾ ಚಳುವಳಿಗೆ ಜೈ ಎಂದಿದ್ದಾರೆ.ಇಡೀ ಕೊಪ್ಪಳ ಜಿಲ್ಲೆಯ ಕೊಪ್ಪಳ,ಕುಷ್ಟಗಿ, ಯಲಬುರ್ಗಾ,ಗಂಗಾವತಿ,ತಾವರಗೇರಾ,ಹನುಮಸಾಗರ,ಹನುಮನಾಳ ಇಡೀ ಬೀದಿ ಬೀದಿ,ಹಳ್ಳಿಹಳ್ಳಿ,ನಗರ ನಗರಗಳು ಬಿಕೋ ಎನ್ನುತ್ತಿದ್ದವು,ಕಣ್ಣಿಗೆ ಕಾಣಲಾರದೆ ಯಾರು ದಿಕ್ಕಾರ ಹೋಗಲಾರದೆ ಲಕ್ಷಾಂತರ ಹಾಗೂ ಸಾವಿರಾರು ಮಂದಿಗಳು ಇಲ್ಲದೆ ರಣಬೀದಿಗಳಲ್ಲಿ ರಸ್ತೆಗಳು ಬಿಕೋ ಎನ್ನುತ್ತಿತ್ತು ದಿಗ್ಬಂದನ ಒಳಗಾಗಿದೆ ಬೀದಿಗಳಲ್ಲಿ ಬರಲಿಲ್ಲ ಜನರು ಮನೆಯಲ್ಲಿ ಕುಳಿತುಕೊಂಡು ಸಂಪೂರ್ಣ ಬೆಂಬಲ ಕೊಟ್ಟರು,ಸಂಚಾರ ಸ್ತಬ್ಧಗೊಂಡಿತ್ತು,ಬಸ್ ನಿಲ್ದಾಣಗಳಲ್ಲಿ ಜನರಿಲ್ಲದೆ ಬಿಕೋ ಅನ್ನುತ್ತಿತ್ತು ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು, ವ್ಯಾಪಾರಸ್ಥರು,ರೈತರು, ಕೃಷಿ ಉತ್ಪಾದನೆ ಮಾರುಕಟ್ಟೆಯ ವರ್ತಕರು,ಕಾರ್ಮಿಕ ಸಂಘಟನೆಗಳು, ಆಟೋ,ಬಸ್ಸು,ಅಂಗಡಿಗಳು,ಟೀ,ತರಕಾರಿ ದಿನಸಿಗಳು ಇಲ್ಲದೆ ಸದಾ ವಾಹನಗಳಿಂದ ತುಂಬಿಕೊಂಡಿರುವ ಎಲ್ಲಾ ಗಲ್ಲಿ ಗಲ್ಲಿ ಬೀದಿಗಳು ಸಣ್ಣ ಸಣ್ಣ ರಸ್ತೆಗಳು ಬಿಕೋ ಎನ್ನುತ್ತಿದ್ದವು ಆಸ್ಪತ್ರೆಯಲ್ಲಿ ಒಪಿಡಿ ಹೊರತುಪಡಿಸಿ ತುರ್ತುಸೇವೆ ಒದಗಿಸಿದೆ. ಒಟ್ಟಿನಲ್ಲಿ ಭೂತಪೂರ್ವ ಸ್ಪಂದನೆ ದೊರಕಿದೆ.

ವರದಿ : ಶರಣಪ್ಪ ಕುಂಬಾರ ತಾವರಗೇರಾ