ಮೂಲಸೌಕರ್ಯ ಅಭಿವೃದ್ಧಿ ಕೋರಿ ಪ್ರಧಾನಿಗೆ ಪತ್ರ ಬರೆದ ಕೆಂಪೇಗೌಡ ಲೇಔಟ್ ನಿವಾಸಿಗಳು
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ನಿರ್ಮಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕೊರತೆ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿ ಪರಿಹಾರ ನೀಡುವಂತೆ ಕೋರಿ ನಾಡಪ್ರಭು ಪ್ರಗತಿಪರ ರಂಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ.
ಜನವರಿ 2 ರಂದು ಪ್ರಧಾನಿಗೆ ಪತ್ರ ಬರೆದಿರುವ ನಾಡಪ್ರಭು ಪ್ರಗತಿಪರ ರಂಗ, 2016ರ ಡಿಸೆಂಬರ್ ಮತ್ತು 2018ರ ಮಾರ್ಚ್‌ನಲ್ಲಿ ಎರಡು ಹಂತಗಳಲ್ಲಿ ನಿವೇಶನ ಹಂಚಿಕೆ ಮಾಡಲಾಗಿದ್ದು, ಇನ್ನೂ ಮೂಲ ಸೌಕರ್ಯಗಳ ಕೊರತೆಯಿದೆ ಎಂದು ದೂರಿದ್ದಾರೆ.
"ಸೈಟ್‌ಗಳು ತುಂಬಾ ಕೆಟ್ಟ ಸ್ಥಿತಿಯಲ್ಲಿವೆ ಮತ್ತು ನಿರ್ಮಾಣಕ್ಕೆ ಯೋಗ್ಯವಾಗಿಲ್ಲ" ಎಂದು ಸಹ ಕೆಂಪೇಗೌಡ ಲೇಔಟ್ ನಿವಾಸಿಗಳು ಆರೋಪಿಸಿದ್ದಾರೆ.
430 ಸೈಟ್ ಹಂಚಿಕೆದಾರರ ಪರವಾಗಿ ನಾಡಪ್ರಭು ಪ್ರಗತಿಪರ ರಂಗದ ಸಂಚಾಲಕರಾದ ಡಾ ಪದ್ಮಪ್ರಸಾದ್ ಮತ್ತು ಶಾಮ್ ಜುಜಾರೆ ಅವರು ಪ್ರಧಾನಿಗೆ ಪತ್ರ ಬರೆದಿದ್ದು, ಅವರಲ್ಲಿ ಹೆಚ್ಚಿನವರು ಬ್ಲಾಕ್ 4 ಮತ್ತು ಬ್ಲಾಕ್ 6ರ ಇತರ ಬ್ಲಾಕ್ ನಿವಾಸಿಗಳಾಗಿದ್ದಾರೆ.
ಸೈಜ್ ಗಳ ಆಧಾರದ ಸೈಟ್‌ಗಳ ಬೆಲೆಯನ್ನು 12 ಲಕ್ಷ ರೂಪಾಯಿಯಿಂದ 86 ಲಕ್ಷ ರೂಪಾಯಿ ನಿಗದಿ ಮಾಡಲಾಗಿದ್ದು, "ಹಂಚಿಕೆದಾರರು ಈ ಬೃಹತ್ ಸಾಲಕ್ಕೆ ಲಕ್ಷಗಟ್ಟಲೆ ಬಡ್ಡಿ ಪಾವತಿಸುತ್ತಿದ್ದಾರೆ. ಲೇಔಟ್ RERA ವ್ಯಾಪ್ತಿಯಲ್ಲಿದೆ. ಇಲ್ಲಿ ಮೂಲಭೂತ ಸೌಕರ್ಯಗಳನ್ನು ಪೂರ್ಣಗೊಳಿಸಿ ಮನೆಗಳನ್ನು ನಿರ್ಮಿಸಲು ಮಂಜೂರು ಮಾಡಿದವರ ಪರವಾಗಿ ನಮ್ಮ ಸಂಸ್ಥೆ ಬಿಡಿಎಗೆ ಮತ್ತು ಕರ್ನಾಟಕ ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿದೆ”. ಆದರೆ "ನಮ್ಮ ಮನವಿಗಳನ್ನು ಆಲಿಸದಿರುವುದು ಅತ್ಯಂತ ದುರದೃಷ್ಟಕರ" ಎಂದು ವೇದಿಕೆ ಆರೋಪಿಸಿದೆ.
ನಮ್ಮ ಕುಂದುಕೊರತೆಗಳನ್ನು ಪರಿಹರಿಸಲು ಪ್ರಧಾನಿಗಳು ಮಧ್ಯಪ್ರವೇಶಿಸಬೇಕು. ಮೂಲಸೌಕರ್ಯ ನೀಡುವಲ್ಲಿ ವಿಫಲವಾಗಿರುವ ಬಿಡಿಎಯಿಂದ ನಮಗೆ ಮೂಲಭೂತ ಮೂಲಸೌಕರ್ಯಗಳನ್ನು ಒದಗಿಸುವಲ್ಲಿನ ಅಗಾಧ ವಿಳಂಬಕ್ಕಾಗಿ ಹಂಚಿಕೆದಾರರಿಗೆ ಪರಿಹಾರ ನೀಡಬೇಕು" ಎಂದು ಮನವಿ ಮಾಡಲಾಗಿದೆ.
- ಚೈತ್ರಾ ಹೀರೆಮಠ