ಸೈಕೋಪಾತ್‌ ,ರೌಡಿ ನಸ್ರು ನ ರೋಚಕವಾದ ಕ್ರೈಮ್‌ ಕಥೆ ಬಿಚ್ಚಿಟ್ಟ ಎಸ್. ಕೆ. ಉಮೇಶ್ ಕುಮಾರ್

ನಿವೃತ್ತ  ಪೊಲೀಸ್ ಅಧಿಕಾರಿ ಎಸ್. ಕೆ ಉಮೇಶ್‌ ಅವರು ಗೌರೀಶ್‌ ಅಕ್ಕಿ ಸ್ಟೂಡಿಯೊ ಗೆ ಸಂದರ್ಶನಕ್ಕಾಗಿ ಆಗಮಿಸಿದ್ದರು.  ಈ ಸಂದರ್ಶನದಲ್ಲಿ, ಮುಖ್ಯವಾಗಿ ಕುಖ್ಯಾತ  ರೌಡಿ, ರೇಪಿಸ್ಟ್  ನುಸ್ರು ಕುರಿತು ಚರ್ಚಿಸಲಾಗಿತ್ತು. ಇವನ ಕ್ರೈಮ್‌ ಚರಿತ್ರೆ, ಇವನು ಮಾಡಿರುವ ಅಪರಾಧಗಳು, ಇನ್ನೂ ಹತ್ತು ಹಲವಾರು ವಿಷಯಗಳನ್ನು ಉಮೇಶ್ ಅವರು ಹಂಚಿಕೊಂಡಿದ್ದಾರೆ.

ಪ್ರಶ್ನೆ ೧: ರೌಡಿಗಳ ಎನ್‌ ಕೌಂಟರ್‌ ಅಂದ ತಕ್ಷಣ ನಿಮಗೆ ಮೊದಲು ನೆನಪಿಗೆ ಬರೋರು ಯಾರು?
ಉತ್ತರ: ರೌಡಿ ಹಾಗು ಸೈಕೋಪಾತ್‌ ಆಗಿದ್ದ ನುಸ್ರು. 2000ನೇ ಇಸವಿಯಲ್ಲಿ ಬಹಳ ಭಯಂಕರವಾಗಿ ಓಪನ್‌ ರಾಬರಿ ಆಗುತ್ತಿತ್ತು. ಇದೆ ಸಮಯದಲ್ಲಿ ನಸ್ರು ಲೈವ್‌ ಬ್ಯಾಂಡ್‌ ನ ಹುಡಗೀರನ್ನ ಅಪಹರಿಸುತ್ತಿದ್ದನು. ಸುಂದರವಾದ ತರುಣಿಯರನ್ನ ಹೊಂಚು ಹಾಕಿ ಅಪಹರಿಸುತ್ತಿದ್ದು, ಎರಡು ಮೂರು ದಿನಗಳ ಕಾಲ ತನ್ನ ವಶದಲ್ಲಿ ಇಟ್ಟುಕೊಳ್ಳುತ್ತಿದ್ದನು. ನಂತರ ಎರಡು ಮೂರು ದಿನಗಳ ನಂತರ ಹುಡುಗಿಯರ ಕಣ್ಣಿಗೆ ಬಟ್ಟೆ ಕಟ್ಟಿ ಮತ್ತೆ ಅದೇ ಜಾಗಕ್ಕೆ ತಂದು ಬಿಡುತ್ತಿದ್ದನು. ಅಪಹರಣಕ್ಕೆ ಒಳಗಾದವರು, ಲೈವ್‌ ಬ್ಯಾಂಡ್‌ ಓನರ್‌ ಗಳು ದೂರನ್ನು ಕೊಡುವುದಕ್ಕೆ ಹೆದರುತ್ತಿದ್ದರು. 
ಪ್ರಶ್ನೆ ೨:  ನುಸ್ರು ಹಿಡಿಯುವುದಕ್ಕೆ ಅಪಹರಣಕ್ಕೆ ಒಳಗಾದ ಹುಡುಗೀರನ್ನು ಕರೆದುಕೊಂಡು ಹೋಗಿದ್ರ?
ಉತ್ತರ: ಹೌದು ಬಹು ತಿಂಗಳ ಕಾಲ ಹುಡುಗಿಯರನ್ನು ಕರೆದುಕಂಡು ಮಾರುವೇಷದಲ್ಲಿ ಸುತ್ತಾಡಿದ್ದೇವೆ. ಒಂದು ಹುಡುಗಿಯಿಂದ ನಮಗೆ ಸುಳಿವು ಸಿಕ್ಕಿತು, ನುಸ್ರು ಕೈ ಸೊಟ್ಟಗಿತ್ತು ಎಂದು ಅವಳು ನಮಗೆ ಮಾಹಿತಿ ನೀಡಿದಳು. ಬಹಳ ಗಲ್ಲಿಗಳನ್ನು ಸುತ್ತಾಡಿದ ನಂತರ, ಸುಳಿವು ಕೊಟ್ಟ ಹುಡುಗಿ ಕೊನೆಗೂ ಪೆಟ್ರೋಲ್‌ ಬಂಕ್‌, ಗೇಟ್‌ ಮತ್ತು ಕಾಂಪೌಂಡ್‌ ಗಳನ್ನು ಗುರುತಿಸಿದಳು. ಮುಂಚೆ ಕೂಡ ನಸ್ರು ಮತ್ತು ಅವನ ಗುಂಪನ್ನು ಹಿಡಿದುಕೊಂಡಿದ್ದೆವು. ಪೋಲೀಸ್‌ ಠಾಣೆಯಲ್ಲಿ ಇವನಿಗೆ ಸರಿಯಾಗಿ ಲಾಠಿ ಏಟುಗಳು ಬಿದ್ದಿತ್ತು. ೨೦೦೦ ನೇ ಇಸವಿಯಲ್ಲಿ ಇವನು ಮತ್ತೆ ಜೈಲಿನಿಂದ ಹೊರ ಬಂದಿದ್ದು, ಯಥಾ ಪ್ರಕಾರ ತನ್ನ ಹಳೆಯ ಕಸುಬನ್ನು ಶುರು ಮಾಡಿಕೊಂಡಿದ್ದನು. ಮತ್ತೆ ಇವನ ಕೇಸ್‌ ಬಂದ ನಂತರ, ಇಡೀ ರಾತ್ರಿ ಹುಡುಕಾಟ ನಡೆಸಿದೆವು. ಅಂತಿಮವಾಗಿ ಒಂದು ಗಾಡಿ ಕಣ್ಣಿಗೆ ಬಿತ್ತು. ಗಾಡಿಯ ನಂಬರ್‌ ಪ್ಲೇಟ್‌ ನ ಸ್ಟಿಕರ್ ಕಿತ್ತುತ್ತ ಹೋದ ಹಾಗೆ ಒಂದಾದ ನಂತರ ಒಂದು ನಂಬರ್ ಗಳು  ಬರುತ್ತಲೆ ಇವೆ, ಆಗಲೆ ಇದು ನಸ್ರುವಿನ ಗಾಡಿ ಅಂತ ಗೊತ್ತಾಯಿತು. ಗಾಡಿಯ ಮುಂಭಾಗದಲ್ಲಿ ಒಂದು ಅಂಗಡಿ ಇತ್ತು. ವಾಹನದ ಕುರಿತು ಅಂಗಡಿ ಓನರ್ ನ ವಿಚಾರಿಸಿದಾಗ,ಇಲ್ಲೆ ಪಕ್ಕದ ಡಾಬಾದಲ್ಲಿ ಕೆಲಸ ಮಾಡ್ತಿರೋ ಹುಡುಗರದ್ದು ಇರಬಹುದು ಸಾರ್, ಸಾಮಾನ್ಯವಾಗಿ ರಾತ್ರಿಯ ಸಮಯದಲ್ಲಿ ಆ ಹುಡುಗ್ರು ಇರಲ್ಲ, ಗಾಡಿಯೂ ಸಹ ಇಲ್ಲಿ ನಿಂತಿರುವುದಿಲ್ಲ. ಇವತ್ಯಾಕೋ ಕೆಲಸಕ್ಕೆ ಹೋಗಿಲ್ಲ ಅನ್ಸುತ್ತೆ, ಮನೆಯಲ್ಲೇ ಇದ್ದರೆ ಇರಬಹುದು ಎಂದು ಮಾಹಿತಿ ನೀಡಿದ. ಬೇರೆ ವಾಹನದಲ್ಲಿ ಏನಾದ್ರು ಹೋಗಿರಬಹುದಾ ಅಂತ ನಮಗೆ ಸಂಶಯ ಶುರುವಾಯಿತು. ನಂತರ ಗಾಡಿ ಪತ್ತೆ ಮಾಡುವುದಕ್ಕೆ, ಮನೆಯ ಹುಡುಕಾಟಕ್ಕಾಗಿ ಮತ್ತು ಇನ್ನಿತರ  ಗುಪ್ತ  ಕಾರ್ಯಾಚರಣೆಗಳಿಗೆ ಬೇರೆ ಬೇರೆ ತಂಡಗಳನ್ನು ರಚಿಸಿ, ಅಂಗಡಿ ಓನರ್ ನ ಕರೆದುಕೊಂಡು ಮನೆ ಮೇಲೆ ದಾಳಿ ಮಾಡಲು ಸಿದ್ಧವಾಗಿದ್ದೆವು. ಬಾಗಿಲು ತೆಗೆದುಕೊಂಡು ನುಸ್ರು ಮನೆಯಿಂದ ಹೊರಗಡೆ ಬರುತ್ತಿದ್ದಾಗೆ ಮಚ್ಚು ಎತ್ತುಕೊಂಡು ಪೊಲೀಸರ ಮೇಲೆ ಹಲ್ಲೆ ಮಾಡಲು ಶುರು ಮಾಡಿದ. ನಮಗೆ ಅವನನ್ನು ಹೊಡೆಯುವುದಕ್ಕೆ ಆಗುತ್ತಿರಲಿಲ್ಲ. ಕೊನೆಗೆ ನನ್ನ ಮತ್ತು ನಂಜುಂಡೇ ಗೌಡರ ಗುಂಡು ಬಿದ್ದ ಮೇಲೆ ನುಸ್ರು ನೆಲಕಚ್ಚಿ ಪ್ರಾಣ ಬಿಟ್ಟ.ತದನಂತರ ನುಸ್ರುವಿನ ತಮ್ಮ ಜಾಫ್ರು ಮಾರಣಾಂತಿಕ ಆಯುಧಗಳಿಂದ, ಕಾನ್ಸ್ಟೇಬಲ್ಸ್ ಮೇಲೆ ಪ್ರಹಾರ ಮಾಡುವುದಕ್ಕೆ ಶುರು ಹಚ್ಚಿಕೊಂಡ. ಈ ಸಂದರ್ಭದಲ್ಲಿ  ಒಬ್ಬ ಕಾನ್ಸ್ಟೇಬಲ್ ನ ಕೈ  ಯನ್ನಯ ಜಾಫ್ರು ಕತ್ತರಿಸಿಬಿಟ್ಟ. ಇವನ ಮೇಲೆಯೂ ನಾನು ಗುಂಡು ಹಾರಿಸಿದೆ. ಗುಂಡು ನೇರವಾಗಿ ಇವನ ಎದೆಗೆ ನಾಟಿತ್ತು. ಆದರೂ ಸಹ ಮತ್ತೆ ಮಚ್ಚು ಎತ್ತಿಕೊಳ್ಳಲು ಯತ್ನಿಸುತ್ತಿರುವ ಸಮಯದಲ್ಲಿ ಶಿವರಾಂ ಸಾರ್ ಇನ್ನೊಂದು ಗುಂಡು ಹೊಡೆದರು. ಜಾಫ್ರು ಹೃದಯಕ್ಕೆ ಗುಂಡು ಬಿದ್ದಿದ್ದರೂ ಸಹ ಅಂತಿಮವಾಗಿ ಬದುಕುಳಿದುಬಿಟ್ಟ. 
ಪ್ರಶ್ನೆ ೩: ಕೊನೆಗೆ ಜಾಫ್ರು ಕಥೆ ಏನಾಯ್ತು?
ಎಲ್ಲಾ ಕೇಸ್ ಗಳನ್ನ ಮುಗಿಸಿಕೊಂಡು ಈಗ ಹೊರಗಡೆ ಇದ್ದಾನೆ. ಇಂತಹ ಕ್ರೂರಿ ಆರೋಪಿಯ ವಿರುದ್ಧ ಸಾಕ್ಷಿ ಹೇಳುವುದಕ್ಕೆ ಯಾರು ಸಹ  ಧೈರ್ಯ ಮಾಡುವುದಿಲ್ಲ. ಸರಿಯಾದ ಸಾಕ್ಷಿ, ಆಧಾರಗಳು ಇಲ್ಲದಿದ್ದರೆ ಕೇಸ್ ನಿಲ್ಲುವುದಿಲ್ಲ. ಆದ್ದರಿಂದ ನಾನು ಐ ವಿಟ್ನೆಸ್ ಪುಸ್ತಕವನ್ನು ಬರೆದಿದ್ದೇನೆ. ನಾನೇ ಕೇಸ್ ನ ವಿಟ್ನೆಸ್. ನಮ್ಮನ್ನು ಪೂರ್ಣಪ್ರಮಾಣದಲ್ಲಿ ನಂಬಬೇಡಿ, ಸ್ವಲ್ಪನಾದ್ರು ನಂಬಿ ಎಂದು ನಿವೃತ್ತ ಎಸ್ಪಿ ಉಮೇಶ್ ಕುಮಾರ್ ಹೇಳಿದ್ದಾರೆ.

ಬರಹ :ಹೆಚ್ ಶ್ರೀಹರ್ಷ 

ಸೈಕೋಪಾತ್‌ ,ರೌಡಿ ನಸ್ರು ನ ರೋಚಕವಾದ ಕ್ರೈಮ್‌ ಕಥೆ ಬಿಚ್ಚಿಟ್ಟ ಎಸ್. ಕೆ. ಉಮೇಶ್

ಬರಹ: ಹೆಚ್.ಶ್ರೀ ಹರ್ಷ