ಡಿಸೆಂಬರ್ 26ರಕ್ಕೆ ಗೋಚರಿಸಲಿದೆ 'ಕಂಕಣ ಸೂರ್ಯಗ್ರಹಣ'....
ಡಿಸೆಂಬರ್ 26ರಂದು ಘಟಿಸಲಿರುವ ಸೂರ್ಯಗ್ರಹಣವು ಖಗೋಳ ವಿಜ್ಞಾನ ಆಸಕ್ತರ ಕುತೂಹಲವನ್ನು ಕೆರಳಿಸಿದೆ. ಇದಕ್ಕೆ ಕಾರಣ ಏನೆಂದರೆ, ಈ ಬಾರಿ ವಿಶೇಷವಾಗಿ ಸಂಭವಿಸಲಿರುವ 'ಕಂಕಣ ಸೂರ್ಯಗ್ರಹಣ'. ಈ ಸೂರ್ಯ ಗ್ರಹಣವು ವಿಭಿನ್ನವಾಗಿ ಕಾಣಿಸುತ್ತದೆ. ಇದು ಬೆಳಿಗ್ಗೆ 8.17ರಿಂದ 10.57ಗಂಟೆವರೆಗೆ ಸಂಭವಿಸಲಿದೆ. ಈ ಕಂಕಣ ಸೂರ್ಯಗ್ರಹಣವನ್ನು ಕಣ್ತುಂಬಿಕೊಳ್ಳಲು ವೈಜ್ಞಾನಿಕ ಸಮುದಾಯ, ಶಾಲಾ ಕಾಲೇಜು ವಿಜ್ಞಾನಿಗಳು, ವಿಜ್ಞಾನಾಸಕ್ತರು ತಯಾರಿ ನಡೆಸಿದ್ದಾರೆ.
ಹಾಗಾದರೆ ಏನಿದು ಕಂಕಣ ಸೂರ್ಯಗ್ರಹಣ...?
ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಅಡ್ಡ ಬಂದಾಗ ಸೂರ್ಯ ಗ್ರಹಣ ಸಂಭವಿಸುತ್ತದೆ. ಸೂರ್ಯ ಗ್ರಹಣದಲ್ಲಿ ಮೂರು ವಿಧಗಳಿವೆ. ಸೂರ್ಯ ಪೂರ್ತಿ ಮರೆ ಆದಾಗ ಅದನ್ನು ಪೂರ್ಣ ಸೂರ್ಯ ಗ್ರಹಣ ಎನ್ನುತ್ತಾರೆ. ಅರೆಬರೆಯಾಗಿ ಸೂರ್ಯ ಮರೆಯಾದರೆ ಪಾರ್ಶ್ವ ಸೂರ್ಯ ಗ್ರಹಣ ಎನ್ನುತ್ತಾರೆ. ಆದರೆ ಈ ಬಾರಿ ಕಂಕಣ ಸೂರ್ಯ ಗ್ರಹಣ ಸಂಭವಿಸಲಿದೆ. ಅಂದರೆ, ಸೂರ್ಯನನ್ನು ಚಂದ್ರ ಸಂಪೂರ್ಣವಾಗಿ ಮರೆ ಮಾಡುವುದಿಲ್ಲ. ಸಂಪೂರ್ಣ ಸೂರ್ಯ ಗ್ರಹಣವಾದಾಗ ಸೂರ್ಯನ ಅಂಚುಗಳು ಸುತ್ತಲೂ ಕಾಣಲಿದೆ. ಚಂದ್ರನ ಸುತ್ತಲೂ ಬೆಳಕು ತೂರಿ ಬರಲಿದೆ. ಹೊಳೆಯುವ ಬಂಗಾರದ ಬಳೆಯ ರೀತಿ ಸೂರ್ಯ ಗೋಚರಿಸುತ್ತಾನೆ. ಇದನ್ನೇ ಕಂಕಣ ಸೂರ್ಯಗ್ರಹಣ ಎನ್ನುತ್ತಾರೆ.
ಗ್ರಹಣ ವೀಕ್ಷಣೆ ಮಾಡಲು ಈ ಕೆಳಗಿನ ವಸ್ತುಗಳನ್ನು ಬಳಸಬೇಡಿ....
ಸೂರ್ಯನನ್ನು ಬರಿಗಣ್ಣಿನಿಂದ ನೇರವಾಗಿ ನೋಡಲೇ ಬೇಡಿ. ಎಕ್ಸ್ ರೇ ಶೀಟ್‌ಗಳ ಮೂಲಕ ಸೂರ್ಯನನ್ನು ವೀಕ್ಷಿಸಬಾರದು. ಕೂಲಿಂಗ್ ಗ್ಲಾಸ್, ಮಸಿ ಹಿಡಿದ ಗಾಜು, ಟೆಲಿಸ್ಕೋಪ್, ಬೈನಾಕ್ಯುಲರ್ ಮೂಲಕ ನೋಡಬಾರದು. ಬೈನಾಕ್ಯುಲರ್ ಅಥವಾ ಟೆಲಿಸ್ಕೋಪ್ ಮೂಲಕ ನೋಡಿದಲ್ಲಿ ತಕ್ಷಣವೇ ಕಣ್ಣಿಗೆ ಭಾರಿ ಅಪಾಯವಾಗುವ ಸಾಧ್ಯತೆ ಇರುತ್ತದೆ. ಏಕೆಂದರೆ, ಮಸೂರಗಳಿಂದ ಸೂರ್ಯನ ಬೆಳಕು ಮತ್ತಷ್ಟು ಹೆಚ್ಚಾಗಿ, ಅಪಾಯವಾಗಲಿದೆ. ಸೂರ್ಯ ಬಿಂಬವನ್ನು ತಟ್ಟೆಯಲ್ಲಿ ಪಡೆದು ನೋಡುವುದೂ ಅಪಾಯ.
ಗ್ರಹಣವನ್ನು ಈ ಕೆಳಗಿನ ವಸ್ತುಗಳ ಸಹಾಯದಿಂದ ವೀಕ್ಷಿಸಬಹುದು....
ಸೋಲಾರ್ ಗಾಗಲ್ಸ್, ಮೈಲಾರ್ ಶೀಟ್, ವೆಲ್ಡಿಂಗ್ ಗ್ಲಾಸ್ ಮೂಲಕ ಗ್ರಹಣ ವೀಕ್ಷಿಸಬಹುದು. ಟೆಲಿಸ್ಕೋಪ್ ಮೂಲಕ ಸೂರ್ಯನ ಪ್ರತಿಬಿಂಬ ಹಾಳೆ ಮೇಲೆ ಬೀಳುವಂತೆ ಮಾಡಿ ನೋಡಬಹುದು. ಸೂಜಿ ರಂಧ್ರ ಬಿಂಬ ಗ್ರಾಹಿ (ಪಿನ್ ಹೋಲ್ ಕ್ಯಾಮರಾ) ರೆಡಿ ಮಾಡಿಯೂ ವೀಕ್ಷಿಸಬಹುದು.
ಧಾರ್ಮಿಕ ನಂಬಿಕೆಗಳು....
ಹಲವು ಜನರು ಸೂರ್ಯ ಗ್ರಹಣದ ದಿನ ಪಾಲಿಸಬೇಕಾದ ಧಾರ್ಮಿಕ ವಿಧಿ ವಿಧಾನಗಳ ಬಗ್ಗೆ ಆಸಕ್ತಿವಹಿಸಿ ಸಿದ್ಧತೆ ನಡೆಸಿದ್ದಾರೆ.