ನಾನು ಕೊಟ್ಟ ಅನುದಾನಗಳನ್ನ ಬಿ.ಜೆ.ಪಿ ಸರ್ಕಾರ ತಡೆಹಿಡಿದಿದೆ -ಮಾಜಿ ಸಿ.ಎಂ ಕುಮಾರಸ್ವಾಮಿ ವಾಗ್ದಾಳಿ

ರಾಜ್ಯ ಸರ್ಕಾರವು ನಾನು ಕೊಟ್ಟ ಅನುದಾನಗಳನ್ನು ಸ್ಥಗಿತಗೊಳಿಸಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, “ನಾನು ಮುಖ್ಯಮಂತ್ರಿಯಾಗಿದ್ದಾಗ ಕೊಟ್ಟಿರುವ ಎಲ್ಲ ಅನುದಾನಗಳನ್ನು ಸ್ಥಗಿತಗೊಳಿಸಲಾಗಿದೆ. ಅನುದಾನಗಳ ಕಡಿತದ ಬಗ್ಗೆ ಆಯಾ ಇಲಾಖೆಯ ಸಚಿವರು, ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅದರ ಎಲ್ಲ ಫೈಲ್​ಗಳು ಸಿಎಂ ಬಳಿ ಇದೆ. ಅವರು ಅದಕ್ಕೆ ಸಹಿ ಹಾಕಬೇಕಷ್ಟೇ. ಅವರು ಯಾವಾಗ ಆ ಫೈಲ್​ಗಳಿಗೆ ಸಹಿ ಹಾಕುತ್ತಾರೋ ಎಂದು ಕಾಯುತ್ತಿದ್ದೇನೆ.” ಎಂದು ಹೇಳಿದ್ದಾರೆ.
ತಮ್ಮ ಪಕ್ಷದ ಬಗ್ಗೆ ಮಾತನಾಡಿರುವ ಅವರು, ನಮ್ಮ ಜೆಡಿಎಸ್​ ಪಕ್ಷ ಯಾವಾಗಲೂ ಜನ ವಿರೋಧಿ ನೀತಿಗಳ ವಿರುದ್ಧ ಹೋರಾಡಿದೆ. 2008ರಲ್ಲೂ ನಮಗೆ ಬಿಜೆಪಿ ಸರ್ಕಾರದಿಂದ ತೊಂದರೆಯಾಗಿತ್ತು. ಕ್ಷೇತ್ರಗಳ ಅಭಿವೃದ್ಧಿಗೆ ಬಿಜೆಪಿಯಿಂದ ಯಾವುದೇ ಸಹಕಾರವಿರಲಿಲ್ಲ. ಈಗಲೂ ಅದೇ ರೀತಿ ಆಗುತ್ತಿದೆ. ಮುಂದೆ ಏನು ಮಾಡುತ್ತಾರೋ ಕಾದು ನೋಡೋಣ ಎಂದು ಹೇಳಿದ್ಧಾರೆ.
ಪಕ್ಷವನ್ನು ದೇವೇಗೌಡರ ನೇತೃತ್ವದಲ್ಲಿಯೇ ನಡೆಸಲಾಗುತ್ತದೆ ಎಂದು ತಿಳಿಸಿದ ಅವರು  ಬಿ.ಜೆ.ಪಿ ಯ ದ್ವೇಷ ರಾಜಕಾರಣದ ಬಗ್ಗೆ ವಿದಾನಸಭೆ  ಕಲಾಪದಲ್ಲಿ ಚರ್ಚಿಸುವುದಾಗಿ ತಿಳಿಸಿದ್ದಾರೆ.