ಸಂಕಷ್ಟದ ಪರಿಸ್ಥಿಯಲ್ಲಿರುವ ಸ್ಟೀಟಿ: ಕುತೂಹಲ ಕೆರಳಿಸಿದ ವಿಚಾರಣೆ

ಚಿತ್ರರಂಗಕ್ಕೂ, ರಾಜಕೀಯಕ್ಕೂ ಸಂಬಂಧ ಇದೆ ಎನ್ನುವ ಸಂಶಯ ಈಗ ಹಂತ ಹಂತವಾಗಿ ಹೊರ ಬೀಳುತ್ತಿದೆ. ಸಿನಿಮಾ ನಟಿಯ ಹೆಸರು ಸಹ ಇಲ್ಲಿ ಕೇಳಿ ಬರುತ್ತಿದೆ. ಆರ್ ಎಸ್ ಎಸ್ ಮುಖಂಡನ ಹೆಸರಿನಲ್ಲಿ ಜನರನ್ನು ವಂಚಿಸಿದ , ಸಿನಿಮಾ ನಟಿಯ ಜೊತೆ ಸಂಪರ್ಕ ಹೊಂದಿದ್ದ ಆ ವ್ಯಕ್ತಿ ಯಾರು? 

ಸ್ವಾಮಿ ಜೊತೆ ವ್ಯವಹಾರ ನಡೆಸಿದ ರಾಧಿಕಾ ಕುಮಾರ್‌ ಸ್ವಾಮಿ 

 ಆರ್ ಎಸ್ ಎಸ್ ಹಾಗೂ ಬಿಜೆಪಿ ಮುಖಂಡರ ಹೆಸರಿನಲ್ಲಿ  ಯುವರಾಜ್ ಅಲಿಯಾಸ್ ಸ್ವಾಮಿ ಜನರನ್ನು ವಂಚಿಸುತ್ತಿದ್ದನು. ಹೊಯ್ಸಳ ರಾಣಿ ಶಾಕುಂತಲೆ ಚಿತ್ರಕ್ಕೆ ಸಂಭಂದಿಸಿದ ಹಾಗೆ ಸ್ವಾಮಿ ಖಾತೆಯಿಂದ  ರಾಧಿಕಾ ಕುಮಾರಸ್ವಾಮಿ  ಖಾತೆಗೆ ಒಂದುವರೆ ಕೋಟೆ ವರ್ಗಾವಣೆ ಆಗಿದ್ದು, ಇದರ ಕುರಿತು ಇತ್ತೀಚೆಗಷ್ಟೇ ರಾಧಿಕಾ  ಕುಮಾರಸ್ವಾಮಿ  ಸುದ್ದಿಗೋಷ್ಠಿ ನಡೆಸಿದ್ದರು .

ವ್ಯರಲ್‌ ಆದ ಆಡಿಯೋ ಕ್ಲಿಪ್

ನಾನು ಯುವರಾಜ್ ನಿಂದ ಒಂದುವರೆ ಕೋಟಿ ಪಡೆದಿಲ್ಲ, 75 ಲಕ್ಷ ಪಡೆದಿದ್ದೆ ಅಷ್ಟೆ. ಯುವರಾಜ್ ಗೆ ರಾಜಕೀಯದ ನಂಟು ಇರುವ ವಿಷಯ ನನಗೆ ಗೊತ್ತಿಲ್ಲ ಎಂದು ರಾಧಿಕಾ ತಿಳಿಸಿದ್ದಾರೆ.ಸಿಸಿಬಿ ತಂಡದವರು ಈ ಪ್ರಕರಣವನ್ನು ತೀವ್ರವಾಗಿ ವಿಚಾರಣೆ ನಡೆಸಿದ್ದು, ಕಳೆದ ವಾರ ರಾಧಿಕಾ ಅಣ್ಣ ರವಿರಾಜ್ ವಿಚಾರಣೆಗೆ ಹಾಜರಾಗಿದ್ದರು. ರಾಧಿಕಾ ಹಾಗೂ ಯುವರಾಜ್ ನ ಒಂದು ಆಡಿಯೋ ಕ್ಲಿಪ್ ವೈರಲ್ ಆಗಿತ್ತು. 

ಕುತೂಹಲ ಕೆರಳಿಸಿದ ವಿಚಾರಣೆ

ವಿಚಾರಣೆಯ ಸಮಯದಲ್ಲಿ ಯವರಾಜ್ ಅಲಿಯಾಸ್ ಸ್ವಾಮಿ ಮೊಬೈಲ್ ನಲ್ಲಿ ಲಕ್ಷಣ್ ಸವದಿ, ಸಿ.ಪಿ ಯೋಗೆಶ್ವರ್ ಸೇರಿದಂತೆ ಇನ್ನಿತರ ರಾಜಕೀಯ ವ್ಯಕ್ತಿಗಳ ಜೊತೆ ತೆಗೆಸಿಕೊಂಡಿದ್ದ ಫೋಟೋ ಸಿಕ್ಕಿದ್ದು,  ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿವೆ. ದಿನ ಕಳೆದಂತೆ ಈ ಕೇಸ್ ಕುತೂಹಲ ಕೆರಳಿಸುತ್ತಿದೆ. ಸ್ವಾಮಿ ಜೊತೆ ಫೋಟೋ ತೆಗಿಸಿಕೊಂಡಿರುವ ರಾಜಕಾರಣಿಗಳಿಗೂ ಸಿಸಿಬಿ ಬುಲಾವ್ ನೀಡುತ್ತಾ.? ಎನ್ನುವುದನ್ನ  ಕಾದು ನೋಡಬೇಕಿದೆ.

ಬರಹ: ಹೆಚ್.‌ ಶ್ರೀಹರ್ಷ