ಟ್ರೀಲಿನಿಯರ್ ಮೈಂಡ್ಸನಿಂದ ಮಿಲಿಯನ್ ಗಟ್ಟಲೆ ಪಂಗನಾಮ
ಮೋಸದ ಮಾರ್ಕೆಟಿಂಗ್ - ಚೈನ್ ಲಿಂಕ್ ಧಂದೆಯ ಮೂಲಕ ಟ್ರೀಲಿನಿಯರ್ ಮೈಂಡ್ಸ ಎಂಬ ಸಂಸ್ಥೆಯಿಂದ ಸಾವಿರಾರು ಜನರಿಗೆ ಲಕ್ಷಾಂತರ ರೂಪಾಯಿ ವಂಚನೆಯಾಗಿರುವುದು ಬೆಳಕಿಗೆ ಬಂದಿದೆ.
ಉಡುಪಿಯ ಮಂದಾರ್ತಿ ಮೂಲದ ಸಂದೆಶ್ ಶಟ್ಟಿ ತನ್ನ ಮಾಲಕತ್ವದಲ್ಲಿ ಇರುವ ಈ ಕಂಪೆನಿಯ ಮೂಲಕ ಒಂದು ವ್ಯವಸ್ಥಿತ ಜಾಲದಿಂದ ಜನರಿಗೆ ವಂಚಿಸುತಿದ್ದ, ವಂಚನೆಗೆ ಒಳಗಾದವರಲ್ಲಿ ಬಹುತೇಕ ಮಂದಿ ವಿಧ್ಯಾರ್ಥಿಗಳಾಗಿದ್ದು, ಪಧವಿ ಮುಗಿಸಿರುವ ಯುವಕರೆ ಈತನಿಂದ ವಂಚನೆಗೆ ಒಳಗಾದವರು. ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿಗಳನ್ನೆ ಈತ ತನ್ನ ಗುರಿಯಾಗಿಸುತ್ತಿದ್ದ.
ಪಂಚತಾರ ಹೊಟೇಲ್‌ಗಳಲ್ಲಿ ಕಾರ್ಯಕ್ರಮಗಳನ್ನ ಆಯೊಜಿಸಿ , ಹಣದ ಆಸೆ ತೋರಿಸಿ ಯುವಕರನ್ನ ತನ್ನತ್ತ ಸೆಳೆಯುತ್ತಿದ್ದ, ಹಾಗು ತನ್ನ ಬಳಿಬಂದವರಿಗೆ ಕೆಲವೊಂದು ದಾಖಲೆಗಳನ್ನ ತೋರಿಸಿ ನಂಬಿಸುವುದರ ಜೊತೆಗೆ ಚಿಕ್ಕ ಪುಟ್ಟ ಉಡುಗೊರೆ ನೀಡಿ ತನ್ನ ಜಾಲದಲ್ಲಿ ಬೀಳಿಸುತ್ತಿದ್ದ . ಈತನ ಐಷಾರಾಮಿ ಜೀವನವನ್ನ ನೊಡಿದ ಜನ ಈತನತ್ತ ಆರ್ಷಿತರಾಗುತ್ತಿದ್ದರು. ತಮ್ಮ ಕಂಪನಿ ತಿಂಗಳಿಗೆ ಲಕ್ಷ ಲಕ್ಷ ಹಣ ಗಳಿಸುತ್ತಿದೆ ಎಂದು ಸುಳ್ಳುಗಳ ಸರಮಾಲೆಯನ್ನೆ ಹೆಣೆದಿದ್ದ.
ವಿದ್ಯಾರ್ಥಿಗಳಿಂದ ಅವರು ಕೂಡಿಟ್ಟ ಹಣವನ್ನ ಹೂಡಿಕೆ ಮಾಡಿಸುತ್ತಿದ್ದ ಹಾಗು ಅವರಿಗೆ ಕಂಪ್ಯೂಟರ್ ಗೆ ಸಂಬದ ಪಟ್ಟ ಕೊರ್ಸ ಮತ್ತು ಎಂಟರ್ ಪ್ರೈನರ್ ಶಿಪ್ ಕೊರ್ಸ ಜೊತೆಗೆ ಕೆಲವೊಂದು ಉತ್ಪನ್ನಗಳನ್ನ ಮಾರಾಟ ಮಾಡುವುದಾರ ಮೂಲಕ ಹಣಗಳಿಸ ಬಹುದು ಹಾಗೆ ನಿಮ್ಮ ಮೂಲಕ ಇತರ ವ್ಯಕ್ತಿಗಳನ್ನ ಈ ವ್ಯವಹಾರಕ್ಕೆ ಸೇರಿಸಿದರೆ ನೀವು ಈ ಚೈನ್ ಲಿಂಕ್ ಮೂಲಕ ಇನ್ನಷ್ಟು ಗಳಿಸ ಬಹುದು ಏಂದು ಸಾವಿರಾರು ಜನರನ್ನ ತನ್ನ ಮೋಸದ ಜಾಲದಲ್ಲಿ ಬೀಳಿಸಿದ್ಧ.
ಈತ ಸಂಪೂರ್ಣ ಕಾನೂನಿನ ಬಾಹೀರವಾಗಿ ಹಣಸಂಗ್ರಹಿಸಿದ್ದು ಈ ಹಣವನ್ನ ತನ್ನ ಐಷಾರಾಮಿ ಜೀವನಕ್ಕೆ ಬಳಸುತ್ತಿದ್ದ. ಇದು ಬೆಳಕಿಗೆ ಬಂದಾಗ ತನ್ನ ಬಳಿ ಹಣ ಮರಳಿ ಪಡೆಯಲು ಬಂದ ಹೊಡಿಕೆದಾರರು ಹಾಗು ವಿದ್ಯಾರ್ಥಿಗಳಿಗೆ ಬೆದರಿಸಿ ಕಳುಹಿಸಿದ್ದ, ಈತನಿಂದ ವಂಚನೆಗೆ ಒಳಗಾದವರು ಪೋಲಿಸ್ ಠಾಣೆಯ ಮೆಟ್ಟಿಲೆರಿದ್ದು ಬೆಂಗಳೂರು ಮತ್ತು ಮಂಗಳೊರಿನಲ್ಲಿ ೬೦ಕ್ಕೂ ಹೆಚ್ಚುಮಂದಿ ದೂರು ದಾಖಲಿಸಿದ್ದಾರೆ. ಸುಬ್ರಮಣ್ಯ ನಗರ ಪೋಲಿಸರು ಆರೊಪಿಯನ್ನ ಬಂದಿಸಿದ್ದು ವಿಚಾರಣೆಗೆ ಒಳಪಡಿಸಿದ್ದಾರೆ.
ವರದಿ : ಪ್ರೀತಿಕಾ ಹೆಗ್ಡೆ