ಗ್ರಾಮ ಪಂಚಾಯಿತಿಗೂ ಬಂತು ರೆಸಾರ್ಟ್ ರಾಜಕೀಯ...!
ರಾಜಕೀಯದಲ್ಲಿ ಎಲ್ಲಾ ಪಕ್ಷಗಳು ಅಧಿಕಾರದ ಗದ್ದುಗೆ ಏರಲು ಸದಾ ಒಂದಲ್ಲ ಒಂದು ತಂತ್ರ ಪ್ರತಿತಂತ್ರ ಮಾಡುತ್ತಲೇ ಇರುತ್ತವೆ. ಇತ್ತಿಚಿಗೆ ನಡೆದ ಗ್ರಾಮ ಪಂಚಾಯಿತಿಗಳ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ. ಈ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿಗಳ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ಪೈಪೋಟಿಗೆ ಬಿದ್ದಿವೆ. ತಮ್ಮ ಪಕ್ಷದವರಿಗೇ ಪಂಚಾಯಿತಿ ಅಧ್ಯಕ್ಷ ಸ್ಥಾನ ಸೀಗಬೇಕೆಂದು ಗೆದ್ದ ಅಭ್ಯರ್ಥಿಗಳನ್ನು ಸೆಳೆಯಲು ರಾಜಕೀಯ ಮುಖಂಡರು ಹರಸಾಹಸ ಪಡುತ್ತಿದ್ದಾರೆ. ಅಭ್ಯರ್ಥಿಗಳಿಗೆ ಆಮಿಷಗಳನ್ನು ನೀಡಿ ಗೋವಾ, ಬಾಂಬೆಗಳ ರೆಸಾರ್ಟ್ಗಳಲ್ಲಿ ವಾಸ್ತವ್ಯ ಹೂಡುವಂತೆ ಮಾಡಲಾಗುತ್ತಿದೆ.
ಗ್ರಾಮ ಪಂಚಾಯಿತಿಗಳ ಅಧಿಕಾರವನ್ನು ತಮ್ಮದಾಗಿಸುವ ಭರದಲ್ಲಿ, ರಾಜಕೀಯ ಬಿಕ್ಕಟ್ಟುಗಳನ್ನು ಮರೆತು ಅಭ್ಯರ್ಥಿಗಳು ಒಂದಾಗುತ್ತಿದ್ದಾರೆ. ಈ ಬೆಳವಣಿಗೆ ರಾಜಕೀಯ ವಲಯಕ್ಕೇ ಹೊಸ ತಿರುವನ್ನು ನೀಡಿದೆ. ಹಾಗಾಗಿ ಗ್ರಾಮ ಪಂಚಾಯಿತಿಗೂ ಕೂಡ ಈಗ ರೆಸಾರ್ಟ್ ರಾಜಕೀಯದ ಬಿಸಿ ತಟ್ಟಿದಂತಾಗಿದೆ.
ವರದಿ:ಬಸವರಾಜ ಕುಂಬಾರ